ಅಜಿತ್‌ ಬಣ ಟೀಕಿಸಿದ ಆರೆಸ್ಸೆಸ್‌: ಹಳಸಿದ ಅಜಿತ್-ಎನ್‌ಡಿಎ ಸಂಬಂಧ

ಅಜಿತ್‌ ಬಣ ಟೀಕಿಸಿದ ಆರೆಸ್ಸೆಸ್‌: ಹಳಸಿದ ಅಜಿತ್-ಎನ್‌ಡಿಎ ಸಂಬಂಧ

ಮುಂಬೈ, ಜೂ. 13: ಅಜಿತ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ) ಬಿಜೆಪಿ-ಶಿವಸೇನೆ(ಶಿಂಧೆ) ಸರ್ಕಾರಕ್ಕೆ ಸೇರಿಸಿಕೊಂಡಿರುವುದು ಅಪ್ರಜ್ಞಾಪೂರ್ವಕ ಮತ್ತು ಅವಿವೇಕದ ಕ್ರಮ ಎಂದು ಆರೆಸ್ಸೆಸ್‌ ಮುಖವಾಣಿ ಆರ್ಗನೈಸರ್‌ನ ಇತ್ತೀಚಿನ ಆವೃತ್ತಿಯಲ್ಲಿ ಹೇಳಲಾಗಿದೆ. ಇದರಿಂದ ಕ್ಯಾಬಿನೆಟ್‌ ದರ್ಜೆಯ ಸಚಿವ ಸ್ಥಾನ ಸಿಗದೆ ಮುಣಿಸಿನಲ್ಲಿರುವ ಅಜಿತ್‌ ಬಣ ಮತ್ತು ಎನ್‌ಡಿಎ ನಡುವಿನ ಸಂಬಂಧ ಮತ್ತಷ್ಟು ಹಳಸಲು ಕಾರಣವಾಗಿದೆ.

ಲೋಕಸಭೆ ಚುನಾವಣಾ ಪ್ರಚಾರದಲ್ಲಿ ರಾಜಕೀಯ ಸೌಜನ್ಯದ ಕೊರತೆಯ ಬಗ್ಗೆ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ ಬೆನ್ನಲ್ಲಿ ಈ ಬೆಳವಣಿಗೆ ನಡೆದಿದೆ. ಸ್ಥಳೀಯ ನಾಯಕತ್ವವನ್ನು ಕಡೆಗಣಿಸಿ ತ್ಯಾಗಿಗಳಂತೆ ಸೋಗು ಹಾಕಿದವರಿಗೆ ಹಲವು ಕ್ಷೇತ್ರಗಳಲ್ಲಿ ಟಿಕೆಟ್ ನೀಡಲಾಗಿದೆ ಎಂದು ಅಂಕಣಕಾರ ಮತ್ತು ಆರೆಸ್ಸೆಸ್ ಸದಸ್ಯ ರತನ್ ಶರ್ದಾ ಅವರ ಲೇಖನದಲ್ಲಿ ಪ್ರತಿಪಾದಿಸಿದ್ದು, ತಡವಾಗಿ ಬಂದವರಿಗೆ ಅವಕಾಶ ಕಲ್ಪಿಸಲು ಉತ್ತಮವಾಗಿ ಕಾರ್ಯನಿರ್ವಹಿಸುವ ಸಂಸದರನ್ನು ನಿರ್ಲಕ್ಷಿಸಲಾಗಿದೆ ಎಂದು ಹೇಳಲಾಗಿದೆ.

ಮಹಾರಾಷ್ಟ್ರವು ಅನವಶ್ಯಕ ರಾಜಕೀಯ ಮತ್ತು ತಪ್ಪಿಸಬಹುದಾದ ಕುತಂತ್ರಗಳಿಗೆ ಒಂದು ಪ್ರಮುಖ ಉದಾಹರಣೆಯಾಗಿದೆ. ಅನಗತ್ಯ ರಾಜಕಿಯ ಮತ್ತು ತಪ್ಪಿಸಬಹುದಾಗಿದ್ದ ಪರಿವರ್ತನೆಗೆ ಮಹಾರಾಷ್ಟ್ರ ಉತ್ತಮ ಉದಾಹರಣೆ. ಬಿಜೆಪಿ ಹಾಗೂ ಶಿವಸೇನೆ ಬಣ ಬಹುಮತ ಹೊಂದಿದ್ದರೂ, ಅಜಿತ್ ಪವಾರ್ ಬಣವನ್ನು ಸೇರಿಸಿಕೊಳ್ಳಲಾಗಿದೆ. ಎನ್ಸಿಪಿ ಆಂತರಿಕ ಕಚ್ಚಾಟದಿಂದ ಶಕ್ತಿಗುಂದುತ್ತಿತ್ತು. ಈ ಅವಿವೇಕದ ಹೆಜ್ಜೆಯನ್ನು ಯಾಕೆ ಇಡಲಾಗಿದೆ? ಕಾಂಗ್ರೆಸ್ ಸಿದ್ಧಾಂತದ ವಿರುದ್ಧ ಹಲವು ವರ್ಷ ಹೋರಾಡಿದ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಲಾಯಿತು. ಒಂದೇ ಹೊಡೆತದಲ್ಲಿ ಬಿಜೆಪಿ ತನ್ನ ಬ್ರಾಂಡ್ ಮೌಲ್ಯ ಕಳೆದುಕೊಂಡಿದೆ ಎಂದು ಲೇಖನದಲ್ಲಿ ಹೇಳಲಾಗಿದೆ.

ಅಜಿತ್ ನೇತೃತ್ವದ ಎನ್‌ಸಿಪಿ ಈ ಲೇಖನಕ್ಕೆ ಕಟುವಾಗಿ ಪ್ರತಿಕ್ರಿಯಿಸಿದೆ. ‘ಆರ್ಗನೈಸರ್‌’ ಆರೆಸ್ಸೆಸ್‌ನ ಅಧಿಕೃತ ಮುಖವಾಣಿಯಲ್ಲ, ಅದು ಆರೆಸ್ಸೆಸ್‌ ಸಿದ್ಧಾಂತವನ್ನು ಪ್ರತಿಬಿಂಬಿಸುವುದಿಲ್ಲ. ಬಿಜೆಪಿಯ ಉನ್ನತ ಪದಾಧಿಕಾರಿಗಳು ಯಾರು ಲೇಖನವನ್ನು ಬರೆದರೂ ಅದನ್ನು ಒಪ್ಪುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಒಬ್ಬರು ವೈಫಲ್ಯಕ್ಕೆ ವಿವಿಧ ಕಾರಣಗಳನ್ನು ಹುಡುಕುತ್ತಲೇ ಇರುತ್ತಾರೆ. ಪಕ್ಷಗಳು ಪರಸ್ಪರ ವಿರುದ್ಧವಾಗಿದ್ದಾಗ ಅವರು ತಪ್ಪುಗಳನ್ನು ಕಂಡುಕೊಳ್ಳುತ್ತಾರೆ ಮತ್ತು ರಾಜಕೀಯದಲ್ಲಿ ಆರೋಪಗಳನ್ನು ಮಾಡುವುದು ಸಹಜ, ಎಲ್ಲವು ಅಂತಿಮ ಫಲಿತಾಂಶಗಳ ಮೇಲೆ ಅವಲಂಬಿತವಾಗಿದೆ ಎಂದು ಉನ್ಮೇಶ್ ಪಾಟೀಲ್ ಹೇಳಿದ್ದಾರೆ.

Previous Post
ತಮಿಳಿಸೈ ಜತೆ ಕೆಟ್ಟದಾಗಿ ವರ್ತನೆ: ಅಮಿತ್‌ ಶಾ ವಿರುದ್ಧ ದಯಾನಿಧಿ ಕಿಡಿ
Next Post
ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲಿ ವಿವಾದದಲ್ಲಿ ಒಡಿಶಾದ ನೂತನ ಸಿಎಂ

Recent News