ಅಪರಾಧಿ ಅಂತಾ ಸಾಬೀತಾದರೂ ಅವರ ಮನೆಗಳನ್ನು ಧ್ವಂಸ ಮಾಡಲು ಸಾಧ್ಯವಿಲ್ಲ ಬುಲ್ಡೋಜರ್ ನ್ಯಾಯದ ವಿರುದ್ಧ ಸುಪ್ರೀಂ ತೀವ್ರ ಅಮಸಧಾನ

ಅಪರಾಧಿ ಅಂತಾ ಸಾಬೀತಾದರೂ ಅವರ ಮನೆಗಳನ್ನು ಧ್ವಂಸ ಮಾಡಲು ಸಾಧ್ಯವಿಲ್ಲ ಬುಲ್ಡೋಜರ್  ನ್ಯಾಯದ ವಿರುದ್ಧ ಸುಪ್ರೀಂ ತೀವ್ರ ಅಮಸಧಾನ


ನವದೆಹಲಿ
: ಅಪರಾಧಿ ಅಂತಾ ಸಾಬೀತಾದರೂ ಅವರ ಮನೆಗಳನ್ನು ಧ್ವಂಸ ಮಾಡಲು ಸಾಧ್ಯವಿಲ್ಲ ಇಂತಹ ಸನ್ನಿವೇಶದಲ್ಲಿ ಆರೋಪಿಗಳ ಮನೆ ಸೇರಿದಂತೆ ಸ್ಥಿರಾಸ್ತಿಗಳನ್ನು ಅಧಿಕಾರಿಗಳು ಹೇಗೆ ಧ್ವಂಸ ಮಾಡುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್ ಖಾರವಾಗಿ ಪ್ರಶ್ನಿಸಿದೆ‌.

ವಿವಿಧ ಪ್ರಕರಣಗಳಲ್ಲಿನ ಆರೋಪಿಗಳ ಮನೆ ಧ್ವಂಸ ಮಾಡಿರುವುದನ್ನು ಪ್ರಶ್ನಿಸಿ ಮುಸ್ಲಿಂ ವಿದ್ವಾಂಸರ ಸಂಸ್ಥೆ, ಜಮಿಯತ್ ಉಲಮಾ-ಎ-ಹಿಂದ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಪೀಠ ತಂದೆಗೆ ದಂಗೆಕೋರ ಮಗನಿರಬಹುದು ಹಾಗಂತ ಇರುವ ಮನೆ ಕೆಡವಿದರೆ ಅವರು ಹೋಗುವುದು ಎಲ್ಲಿಗೆ? ಇದು ಸೂಕ್ತವಾದ ಮಾರ್ಗವಲ್ಲ ಎಂದರು.

ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕಾನೂನು ಉಲ್ಲಂಘನೆಯಾದಾಗ ಮನೆಗಳನ್ನು ಕೆಡವಲಾಗುತ್ತಿದೆ, ಮುಖ್ಯವಾಗಿ ನಗರಸಭೆ ಕಾನೂನು ಉಲ್ಲಂಘನೆಯಾದರೆ ಮಾತ್ರ ಕ್ರಮಕೈಗೊಳ್ಳುತ್ತೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ನಿಯಮ ಉಲ್ಲಂಘಿಸಿದರೆ ಧ್ವಂಸ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಆದರೆ ಆರೋಪಿಗಳ ಮನೆ ಧ್ವಂಸ ಒಪ್ಪುವುದಿಲ್ಲ ಎಂದಿತು.

ಈ ವೇಳೆ ಅನಧಿಕೃತ ಕಟ್ಟಡಗಳನ್ನು ಕೆಡವಲು ಮಾರ್ಗಸೂಚಿಯ ಅಗತ್ಯವನ್ನು ನ್ಯಾಯಮೂರ್ತಿ ವಿಶ್ವನಾಥನ್ ಗಮನಿಸಿದರು. ನ್ಯಾಯಮೂರ್ತಿ ಗವಾಯಿ, ಸಲಹೆಗಳು ಬರಲಿ, ನಾವು ಪ್ಯಾನ್-ಇಂಡಿಯಾ ಆಧಾರದ ಮೇಲೆ ಮಾರ್ಗಸೂಚಿಗಳನ್ನು ನೀಡುತ್ತೇವೆ ಎಂದರು. ಸೆಪ್ಟೆಂಬರ್ 17 ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ಆಸ್ತಿಗಳನ್ನು ಕೆಡವಲು ಬುಲ್ಡೋಜರ್‌ಗಳನ್ನು ಬಳಸುವ ಅಭ್ಯಾಸಕ್ಕೆ ಸಂಬಂಧಿಸಿದ ಅನೇಕ ಪ್ರಕರಣಗಳು ಸುಪ್ರೀಂಕೋರ್ಟ್‌ನಲ್ಲಿದೆ. ಇದನ್ನು ಸಾಮಾನ್ಯವಾಗಿ “ಬುಲ್ಡೋಜರ್ ನ್ಯಾಯ” ಎಂದು ಕರೆಯಲಾಗುತ್ತದೆ, ಇದು ಉತ್ತರ ಪ್ರದೇಶ ಸೇರಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪ್ರಮುಖ ವಿವಾದದ ವಿಷಯವಾಗಿದೆ

Previous Post
ಜಾತಿ ಗಣತಿ ಸೂಕ್ಷ್ಮ ವಿಚಾರ, ಚುನಾವಣಾ ಉದ್ದೇಶಕ್ಕೆ ಬಳಸಬಾರದು: ಆರ್‌ಎಸ್‌ಎಸ್
Next Post
ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಬಿಕ್ಕಟ್ಟು – ಎರಡು ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಜಮೆಯಾಗದ ಸಂಬಂಳ

Recent News