ಅಮೆರಿಕದಲ್ಲಿ ಶುರುವಾಯ್ತು ಬ್ಯಾಂಡೇಜ್ ಲುಕ್ : ಟ್ರಂಪ್ ಬೆಂಬಲಿಗರ ಹೊಸ ಟ್ರೆಂಡ್

ಅಮೆರಿಕದಲ್ಲಿ ಶುರುವಾಯ್ತು ಬ್ಯಾಂಡೇಜ್ ಲುಕ್ : ಟ್ರಂಪ್ ಬೆಂಬಲಿಗರ ಹೊಸ ಟ್ರೆಂಡ್

ಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೇಲಿನ ಗುಂಡಿನ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಟ್ರಂಪ್ ನ ಬೆಂಬಲಿಗರು ವಿಸ್ಕಾನ್ಸಿನ್‌ನ ಮಿಲ್ವಾಕೀಯಲ್ಲಿ ನಡೆದ ರಿಪಬ್ಲಿಕನ್ ನ್ಯಾಷನಲ್ ಕನ್ವೆನ್ಶನ್ ನಲ್ಲಿ ಕಿವಿಗೆ ಬ್ಯಾಂಡೇಜ್‌ಗಳನ್ನು ಧರಿಸಿರುವುದು ಕಂಡು ಬಂದಿದೆ.

ಪೆನ್ಸಿಲ್ವೇನಿಯಾದಲ್ಲಿ ನಡೆದ ರ್ಯಾಲಿಯಲ್ಲಿ ಹತ್ಯೆಯ ಪ್ರಯತ್ನದಲ್ಲಿ ಗಾಯಗೊಂಡ ಬಲ ಕಿವಿಯ ಮೇಲೆ ದೊಡ್ಡ ಬಿಳಿ ಬ್ಯಾಂಡೇಜ್ ಅನ್ನು ಧರಿಸಿ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶಕ್ಕೆ ಆಗಮಿಸಿದರು, ಈ ಕಾರ್ಯಕ್ರಮದಲ್ಲಿ ಟ್ರಂಪ್ ರ ಬೆಂಬಲಿಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅವರ ಬಲ ಕಿವಿಗೂ ಬಿಳಿ ಬಣ್ಣದ ಬ್ಯಾಂಡೇಜ್ ಹಾಕುವ ಮೂಲಕ ತಮ್ಮ ನಿಲುವನ್ನು ಪ್ರದರ್ಶಿಸಿದ್ದಾರೆ.

ಸದ್ಯ ಅಮೆರಿಕದಲ್ಲಿ ಈ ರೀತಿ ಬ್ಯಾಂಡೇಜ್ ಹಾಕೋದೆ ಒಂದು ಟ್ರೆಂಡ್ ಆಗಿದ್ದು, ಟ್ರಂಪ್ ಯಾವುದೇ ಸಭೆಗೆ ಹೋದರು ಅವರು ಬೆಂಬಲಿಗರು ಈ ರೀತಿ ಬ್ಯಾಂಡೇಜ್ ಹಾಕಿಕೊಳ್ಳುವ ಮೂಲಕ ತಮ್ಮ ಬೆಂಬಲ ತೋರಿಸುತ್ತಿದ್ದಾರೆ.

Previous Post
ಜನರಲ್ಲಿ ಆಶಾ ಭಾವನೆ ಮೂಡಿಸಿ ನಿರಾಶೆ ಮಾಡಿರುವುದು ಸರಿಯಲ್ಲ – ಹೆಚ್‌ಡಿಕೆ
Next Post
ಗಾಝಾದಲ್ಲಿ ತಕ್ಷಣ ಕದನ ವಿರಾಮಕ್ಕೆ ತನ್ನ ಕರೆಯನ್ನು ವಿಶ್ವಸಂಸ್ಥೆಯಲ್ಲಿ ಪುನರುಚ್ಚರಿಸಿದ ಭಾರತ

Recent News