ಅಯೋಧ್ಯೆ ರಸ್ತೆಗಳಲ್ಲಿ ಅಳವಡಿಸಿದ್ದ ದೀಪಗಳು ಕಳವು

ಅಯೋಧ್ಯೆ ರಸ್ತೆಗಳಲ್ಲಿ ಅಳವಡಿಸಿದ್ದ ದೀಪಗಳು ಕಳವು

ಅಯೋಧ್ಯೆ, ಆ. 14: ಉತ್ತರ ಪ್ರದೇಶದ ಆಯೋಧ್ಯೆಯ ರಾಮಪಥ ಮತ್ತು ಭಕ್ತಿಪಥ ಮಾರ್ಗಗಳಲ್ಲಿ ಅಳವಡಿಸಲಾಗಿದ್ದ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ದೀಪಗಳು ಕಳ್ಳತನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೂ. 50 ಲಕ್ಷ ಮೌಲ್ಯದ 36 ಪ್ರೊಜೆಕ್ಟರ್ ಲೈಟ್ ಹಾಗೂ 3,800 ವಿವಿಧ ಪ್ರಕಾರ ದೀಪಗಳು ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಬೀದಿ ದೀಪಗಳನ್ನು ಅಳವಡಿಸಲು ಅಯೋಧ್ಯೆ ಅಭಿವೃದ್ದಿ ಪ್ರಾಧಿಕಾರದಿಂದ ಗುತ್ತಿಗೆ ಪಡೆದುಕೊಂಡಿರುವ ಯಶ್ ಎಂಟರ್‌ಪ್ರೈಸಸ್ ಮತ್ತು ಕೃಷ್ಣ ಅಟೋಮೊಬೈಲ್ಸ್ ನೀಡಿರುವ ದೂರಿನ ಮೇರೆಗೆ ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ರಾಮಪಥದಲ್ಲಿ 6,400 ವಿವಿಧ ಪ್ರಕಾರಗಳ ದೀಪಗಳು ಮತ್ತು ಭಕ್ತಿಪಥದಲ್ಲಿ 96 ಪ್ರೊಜೆಕ್ಟರ್ ಲೈಟ್‌ಗಳನ್ನು ಅಳವಡಿಸಲಾಗಿತ್ತು. ಮಾರ್ಚ್ 19ರವರೆಗೆ ಅವುಗಳು ಇತ್ತು. ಆದರೆ, ಮೇ 9ರಂದು ಪರಿಶೀಲನೆ ನಡೆಸಿದಾಗ, ಅನೇಕ ದೀಪಗಳು ಕಾಣೆಯಾಗಿರುವುದು ಗೊತ್ತಾಗಿದೆ. ಇದುವರೆಗೆ 3,800 ವಿವಿಧ ಪ್ರಕಾರಗಳ ದೀಪಗಳು ಮತ್ತು 36 ಪ್ರೊಜೆಕ್ಟರ್ ಲೈಟ್‌ಗಳು ಕಳವಾಗಿರುವುದು ಗೊತ್ತಾಗಿದೆ ಎಂದು ಗುತ್ತಿಗೆದಾರರು ಹೇಳಿರುವುದಾಗಿ ವರದಿಯಾಗಿದೆ. ವರದಿಗಳ ಪ್ರಕಾರ, ದೀಪಗಳು ಕಳವಾಗಿರುವುದು ಮೇ ತಿಂಗಳಲ್ಲೇ ಗುತ್ತಿಗೆದಾರರ ಗಮನಕ್ಕೆ ಬಂದಿತ್ತು. ಆದರೆ, ಅವರು ಆಗಸ್ಟ್ 9ರಂದು ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ

Previous Post
ಲೋಕ’ ಚುನಾವಣೆ ವೇಳೆ ಮೋದಿಯಿಂದ 100ಕ್ಕೂ ಹೆಚ್ಚು ‘ಇಸ್ಲಾಮೋಫೋಬಿಕ್’ ಹೇಳಿಕೆ: ಹ್ಯೂಮನ್ ರೈಟ್ಸ್ ವಾಚ್
Next Post
ಅಂಡಾಣು, ವೀರ್ಯ ದಾನಿಗೆ ಮಗುವಿನ ಮೇಲೆ ಹಕ್ಕಿಲ್ಲ: ಕೋರ್ಟ್

Recent News