ಅರುಣಾಚಲ ಪ್ರದೇಶದಲ್ಲೂ ಕಾಂಗ್ರೆಸ್‌ಗೆ ಶಾಕ್- ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆ

ಅರುಣಾಚಲ ಪ್ರದೇಶದಲ್ಲೂ ಕಾಂಗ್ರೆಸ್‌ಗೆ ಶಾಕ್- ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆ

ಇಟಾನಗರ: ಲೋಕಸಭಾ ಚುನಾವಣೆ ಜೊತೆಗೆ ಅರುಣಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯೂ ನಡೆಯಬೇಕಿದೆ. ಈ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಪಕ್ಷದ ಇಬ್ಬರು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ನ್ಯಾಷನಲ್ ಪೀಪಲ್ಸ್ ಪಾರ್ಟಿ ಇಬ್ಬರು ಶಾಸಕರು ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಭಾನುವಾರ ಈ ನಾಲ್ವರು ಶಾಸಕರು ಮುಖ್ಯಮಂತ್ರಿ ಪೆಮಾಖಂಡು ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿಕೊಂಡರು. ಇಟಾನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ವಿರೋಧ ಪಕ್ಷದ ಕಾಂಗ್ರೆಸ್ ಶಾಸಕರಾದ ನಿನೋಂಗ್ ಎರಿಂಗ್ ಮತ್ತು ವಾಂಗ್ಲಿಂಗ್ ಲೋವಾಂಗ್‌ಡಾಂಗ್ ಮತ್ತು ಎನ್‌ಪಿಪಿ ಶಾಸಕರಾದ ಮುಚ್ಚು ಮಿಥಿ ಮತ್ತು ಗೋಕರ್ ಬಸಾರ್ ಅವರು ಬಿಜೆಪಿಗೆ ಸೇರ್ಪಡೆಗೊಂಡರು.

ಈ ಸಮಾರಂಭದಲ್ಲಿ ಮುಖ್ಯಮಂತ್ರಿಗಳಲ್ಲದೆ, ಅಸ್ಸಾಂ ಸಚಿವರು ಮತ್ತು ಅರುಣಾಚಲ ಪ್ರದೇಶದ ಬಿಜೆಪಿಯ ಚುನಾವಣಾ ಉಸ್ತುವಾರಿ ಅಶೋಕ್ ಸಿಂಘಾಲ್ ಮತ್ತು ರಾಜ್ಯಾಧ್ಯಕ್ಷ ಬಿಯುರಾಮ್ ವಾಹ್ಗೆ ಉಪಸ್ಥಿತರಿದ್ದರು. ಒಟ್ಟಿನಲ್ಲಿ 60 ಸದಸ್ಯ ಬಲದ ಅರುಣಾಚಲ ಪ್ರದೇಶ ವಿಧಾನಸಭೆಗೆ ಲೋಕಸಭಾ ಚುನಾವಣೆ ಜೊತೆಗೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ ನಾಲ್ವರು ಶಾಸಕರು ಪಕ್ಷಕ್ಕೆ ಸೇರಿರುವುದು ಕುತೂಹಲಕ್ಕೆ ಕಾರಣವಾಗಿದೆ.

Previous Post
ಜ್ಞಾನವಾಪಿಯಲ್ಲಿ ಪೂಜೆಗೆ ತಡೆ ನೀಡಲು ಹೈಕೋರ್ಟ್‌ ನಕಾರ
Next Post
ಧ್ರುವ್‌ ರಥೀ ವಿಡಿಯೋ ಪೋಸ್ಟ್‌ ಮಾಡಿ ತಪ್ಪು ಮಾಡಿದ್ದೇನೆ ಸುಪ್ರೀಂನಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್‌ ತಪ್ಪೊಪ್ಪಿಗೆ

Recent News