ಆರೋಗ್ಯ, ಜೀವ ವಿಮೆ ಮೇಲಿನ ಜಿಎಸ್‌ಟಿ ವಿರೋಧಿಸಿ ‘ಇಂಡಿಯಾ’ ಪ್ರತಿಭಟನೆ

ಆರೋಗ್ಯ, ಜೀವ ವಿಮೆ ಮೇಲಿನ ಜಿಎಸ್‌ಟಿ ವಿರೋಧಿಸಿ ‘ಇಂಡಿಯಾ’ ಪ್ರತಿಭಟನೆ

ನವದೆಹಲಿ, ಆ. 6: ಆರೋಗ್ಯ ಮತ್ತು ಜೀವ ವಿಮೆ ಮೇಲಿನ ಜಿಎಸ್‌ಟಿಯನ್ನು ಹಿಂಪಡೆಯುವಂತೆ ಆಗ್ರಹಿಸಿ ಇಂಡಿಯಾ ಒಕ್ಕೂಟ ಸಂಸತ್ತಿನ್ ಭವನದ ಬಳಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿತು. ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವ ವಹಿಸಿದ್ದ ಪ್ರತಿಭಟನೆಯ ವೇಳೆ ಮಾತನಾಡಿದ “ಕಾಂಗ್ರೆಸ್ ಸಂಸದೆ ಜೆಬಿ ಮಾಥರ್ “ಆರೋಗ್ಯ ಮತ್ತು ಜೀವ ವಿಮೆಗೆ ಯಾವುದೇ ಜಿಎಸ್‌ಟಿ ಅನ್ವಯಿಸಬಾರದು. ಸರ್ಕಾರದ ನಿರ್ಧಾರವು ಮಾನವ ನಂಬಿಕೆಗೆ ಯಾವುದೇ ಗೌರವ ಇಲ್ಲ ಎಂಬುವುದನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಮಾಥರ್ “ಪ್ರಸ್ತುತ ಕೇಂದ್ರ ಸರ್ಕಾರ ವಿಮೆಯ ಮೇಲೆ 18 ಶೇಖಡ ಜಿಎಸ್‌ಟಿ ವಿಧಿಸಿದೆ. ಇದು ಬಡವರಿಂದ ಕಿತ್ತುಕೊಳ್ಳುವುದಾಗಿದೆ. ಸರ್ಕಾರದ ಈ ನಿರ್ಧಾರವು ಮಾನವ ನಂಬಿಕೆ ಯಾವುದೇ ಗೌರವವಿಲ್ಲ ಎಂಬುವುದನ್ನು ಪ್ರತಿಬಿಂಬಿಸುತ್ತದೆ. ವಿಮೆಯ ಮೇಲಿನ ಜಿಎಸ್‌ಟಿಯನ್ನು ಹಿಂತೆಗೆದುಕೊಳ್ಳುವ ಬೇಡಿಕೆಯ ವಿಚಾರದಲ್ಲಿ ಇಂಡಿಯಾ ಒಕ್ಕೂಟ ಒಗ್ಗಟ್ಟಾಗಿ ನಿಂತಿದೆ” ಎಂದಿದ್ದಾರೆ. ಆಗಸ್ಟ್ 2ರಂದು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಮತ್ತು ಸಂಸದ ಸುದೀಪ್ ಬಂಡೋಪಾಧ್ಯಾಯ ಅವರೂ ಕೂಡ ಕೇಂದ್ರ ಸರ್ಕಾರದ ವೈದ್ಯಕೀಯ ಮತ್ತು ಆರೋಗ್ಯ ವಿಮೆಯ ಮೇಲಿನ 18 ಶೇ. ಜಿಎಸ್‌ಟಿ “ಜನ ವಿರೋಧಿ” ಎಂದು ಕರೆದಿದ್ದರು. ಇದು ನಾಗರಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ್ದ ಬಂಡೋಪಾಧ್ಯಾಯ, “ಆರೋಗ್ಯದ ಮೇಲಿನ ಜಿಎಸ್‌ಟಿ ವಿಷಯವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಸ್ತಾಪಿಸಿದ್ದಾರೆ” ಎಂದಿದ್ದರು. “ಜೀವ ವಿಮೆ ಮತ್ತು ಔಷಧಗಳ ಮೇಲಿನ ಜಿಎಸ್‌ಟಿಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ನಾವು ಇಂದು ವಿಷಯ ಪ್ರಸ್ತಾಪಿಸಿದ್ದೇವೆ. ನಮ್ಮ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಿನ್ನೆ ಧ್ವನಿ ಎತ್ತಿದ್ದರು. ಈ ಜಿಎಸ್‌ಟಿ ಜನ ವಿರೋಧಿ ಎಂದು ನಮಗೆ ಅನಿಸುತ್ತಿದೆ. ಜಿಎಸ್‌ಟಿಯು ಜನರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ” ಎಂದು ಹೇಳಿದ್ದರು. “ಜಿಎಸ್‌ಟಿ ವಿರುದ್ದ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಾವು ಬೀದಿಗಿಳಿದು ದೊಡ್ಡಮಟ್ಟದ ಹೋರಾಟ ನಡೆಸುತ್ತೇವೆ ಎಂದಿದ್ದರು. ಆಗಸ್ಟ್ 3 ರಂದು ವೈದ್ಯಕೀಯ ಮತ್ತು ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿ ಟಿಎಂಸಿ ಲೋಕಸಭಾ ಸಂಸದರು ಪ್ರತಿಭಟನೆ ನಡೆಸಿದ್ದರು.

Previous Post
ಶೇಖ್ ಹಸೀನಾ ಲಂಡನ್ ಪ್ರಯಾಣಕ್ಕೆ ಬ್ರಿಟಿಷ್ ಕಾನೂನು ತಡೆ
Next Post
ಬಾಂಗ್ಲಾ ಬಿಕ್ಕಟ್ಟು: ಮುಹಮ್ಮದ್ ಯೂನಸ್ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ

Recent News