ಆರ್ಥಿಕ ಪ್ರಗತಿಯತ್ತ ಕೊಂಡಯ್ಯುವ ಬಜೆಟ್ – ಜೋಶಿ

ಆರ್ಥಿಕ ಪ್ರಗತಿಯತ್ತ ಕೊಂಡಯ್ಯುವ ಬಜೆಟ್ – ಜೋಶಿ

ನವದೆಹಲಿ : 2047 ರ ವೇಳೆ‌ ವಿಕಸಿತ್ ಭಾರತ ಸಂಕಲ್ಪದ ಭಾಗವಾಗಿ ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು, ಅದಕ್ಕೆ ಪೂಕರವಾಗುವಂತೆ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಬಜೆಟ್ ಮಂಡಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ಕಳೆದ ಫೆಬ್ರುವರಿಯಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ್ದೇವು ಅದರ ಮುಂದುವರಿದ ಭಾಗವಾಗಿ ಇಂದು ಬಜೆಟ್ ಮಂಡಿಸಿದೆ, ಮುಂದಿನ ಆರು ತಿಂಗಳಿಗೆ ಬಜೆಟ್ ಮಂಡಿಸಿದೆ ಮಧ್ಯಂತರ ಬಜೆಟ್ ಎಲ್ಲ ಯೋಜನೆಗಳನ್ನು ಮುಂದುವರಿಸಲಾಗುತ್ತಿದೆ ಎರಡು ಬಜೆಟ್ ಅನ್ನು ಪ್ರತ್ಯೇಕವಾಗಿ ನೋಡಬಾರದು ನರೇಂದ್ರ ಮೋದಿ ಅವರ ವಿಕಸಿತ್ ಭಾರತ ಪರಿಕಲ್ಪನೆಯ ಬಜೆಟ್ ಇದಾಗಿದೆ ಎಂದರು‌.

ಈ ಬಜೆಟ್ ಬಡವರು, ಮಹಿಳೆಯರು, ಯುವಕರು, ರೈತರನ್ನು ಕೇಂದ್ರೀಕರಿಸಿದೆ ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ ನೀಡಲಾಗುವುದು, 4.1 ಕೋಟಿ ಯುವಕರಿಗೆ ಉದ್ಯೋಗ ನೀಡುವ ಉದ್ದೇಶ ಹೊಂದಿದೆ. 11 ಲಕ್ಷ 10 ಸಾವಿರ ಕೋಟಿ ಮೂಲಸೌಕರ್ಯ ಹೂಡಿಕೆಗೆ ಖರ್ಚಾಗುತ್ತಿದೆ ಇದು ವಿಶ್ವದಲ್ಲಿ ಅತಿಹೆಚ್ಚು ಹೂಡಿಕೆಯಾಗಿದೆ‌. ಭಾರತ ಮಾತ್ರವಲ್ಲ ಜಗತ್ತಿನಲ್ಲಿ ಕೌಶಲ್ಯ ಹೊಂದಿದ ಮ್ಯಾನ್ ಪವರ್ ಬೇಕಾಗಿದೆ ಹೀಗಾಗೀ ಯುವಕರನ್ನು ಕೌಶಲ್ಯಗೊಳಿಸುವ ಪ್ರಯತ್ನ ನಡೆಯುತ್ತಿದೆ

ಮಹಿಳೆಯರು ಬಾಲಕಿಯರಿಗೆ ಮೂರು ಲಕ್ಷ ಕೋಟಿ ಯೋಜನೆ ನೀಡಿದೆ, ಪಿಎಂ ಆವಾಸ್ ಯೋಜನೆಯಲ್ಲಿ 10 ಲಕ್ಷ ಕೋಟಿ ಖರ್ಚು ಮಾಡುತ್ತಿದೆ. ಪ್ರತಿ ಮನೆಗೆ 300 ಯೂನಿಟ್ ವಿದ್ಯುತ್ ಫ್ರೀ ಮಾಡುವ ಸೋಲಾರ್ ಯೋಜನೆ ಮಾಡುತ್ತಿದೆ 80 ಕೋಟಿ ಜನರಿಗೆ ಆಹಾರಧಾನ್ಯ ನೀಡುವುದು ಮುಂದುವರಿಸಿದೆ, ರಾಜ್ಯಗಳಲ್ಲೂ ಮೂಲಸೌಕರ್ಯ ಹೆಚ್ಚಿಸುತ್ತಿದೆ ಇದಕ್ಕಾಗಿ ಒಂದೂವರೆ ಲಕ್ಷ ಕೋಟಿ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ

ಪಿಎಂ ಗ್ರಾಮ್ ಸಡಕ್ ಯೋಜನೆಯ ನಾಲ್ಕನೇ ಹಂತ ಆರಂಭಿಸುತ್ತಿದೆ, ಸ್ಟೋರೇಜ್ ಚೈನ್ ವ್ಯವಸ್ಥೆ ಮಾಡಲಾಗುತ್ತಿದೆ ಎಲ್ಲ ವರ್ಗಗಳನ್ನು ತಲುಪುವ ಬಜೆಟ್ ಮಂಡಿಸಿದೆ ದೇಶದ ಆರ್ಥಿಕತೆಯನ್ನು ಮೇಲತ್ತಲು ಪ್ರಯತ್ನ ಮಾಡಲಾಗುತ್ತಿದೆ ಪ್ರಗತಿಯತ್ತ ಕೊಂಡ್ಯಯುವ ಬಜೆಟ್ ಎಂದಿದೆ. ಪೂರ್ವೊದಯ ಯೋಜನೆಯಡಿ ಒಡಿಶಾ ಜಾರ್ಖಂಡಕ್ಕೆ ಅನುದಾನ ನೀಡಿದೆ, ಬಿಹಾರಕ್ಕೂ ಅನುದಾನ ನೀಡಿದೆ. ಆಂಧ್ರಪ್ರದೇಶ ರಿ ಆರ್ಗೇನೇಷನ್ ಆಕ್ಟ್ ಮಾಡಿದ್ದು ಯಾರು? ಕಾಂಗ್ರೇಸ್ ಮಾಡಿದ ನಿಯಮದಂತೆ ನೆರವು ನೀಡಿದೆ.

ಸಿಎಂ ಆರೋಪಕ್ಕೆ ಪ್ರತಿಕ್ರಿಯಿಸಿದ ಜೋಶಿ, ಬ್ರಹ್ಮಾಂಡ ಭ್ರಷ್ಟಾಚಾರ ಏನು ನಡೆದಿದೆ ಅದನ್ನು ಮುಚ್ಚಿ ಹಾಕಲು ಇಂತಹ ಆರೋಪ ಮಾಡುತ್ತಿದ್ದಾರೆ. ಸಿಎಂ ನಮ್ಮದು 40% ಸರ್ಕಾರ ಎಂದು ಆರೋಪ ಮಾಡಿದ್ದರು, ಕಾಂಗ್ರೆಸ್ ದು 100% ಸರ್ಕಾರ. ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಳ್ಳದಿದ್ದರೆ ಎಲ್ಲ ದುಡ್ಡು ಹೊಗ್ತಿತ್ತು, ಭ್ರಷ್ಟಾಚಾರ ಮುಚ್ಚಿಕೊಳ್ಳಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಮೋದಿ ಸರ್ಕಾರದ ಬಂದ್ಮೇಲೆ ಚೆಂಬು ಸಂಸ್ಕೃತಿ ಬಂದ್ ಮಾಡಿದೆ, ಕಾಂಗ್ರೆಸ್ ಇನ್ನು ಅದೇ ಮಾನಸಿಕತೆಯಲ್ಲಿದೆ ಎಂದು ಸಿಎಂ ಆರೋಪಕ್ಕೆ ಜೋಶಿ ತಿರುಗೇಟು ನೀಡಿದರು.

ಇಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ರಾಜಕೀಯ ಪ್ರೇರಿತ ಪ್ರತಿಭಟನೆ ಇದು, ನಾಗೇಂದ್ರ ಮತ್ತು ದದ್ಧಲ್ ಅವರನ್ನು ಉಳಿಸಲು ಪ್ರಯತ್ನ ಮಾಡಿದರು ಚಂದ್ರಶೇಖರ ಆತ್ಮಹತ್ಯೆ ಬಳಿಕ ಹಗರಣ ಹೊರಗಡೆ ಬಂತು, ಸಿಬಿಐ ಇಡಿ ಬರಬಹುದು ಎಂದು ಎಸ್‌ಐಟಿ ಮಾಡಿದರು ಇಡಿ ನೋಟಿಸ್ ನೀಡಿದ ಬಳಿಕ ಅವರನ್ನು ಬಚ್ಚಾವಲು ಪ್ರಯತ್ನ ಮಾಡಿದರು. ಸರ್ಕಾರದಿಂದ ಖಜಾನೆಯಿಂದ ಹಣ ವರ್ಗಾವಣೆಯಾಗಿದೆ ಹಣಕಾಸು ಸಚಿವರು ಆಗಿರುವ ಸಿಎಂ ಇದಕ್ಕೆ ನೇರ ಹೊಣೆ, ಅವರೇ ಉತ್ತರಿಸಬೇಕು ನಿಮ್ಮ ಮೇಲೆ ಆರೋಪ ಇದೆ, ಅದಕ್ಕೆ ಉತ್ತರಿಸಬೇಕು, ಸುಮ್ನೆ ಏನೋ ಆರೋಪ ಮಾಡಬಾರದು ಎಂದು ತಿವಿದರು.

Previous Post
ಆರ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸರ್ಕಾರಿ ನೌಕರರಿಗೆ ಗ್ರೀನ್ ಸಿಗ್ನಲ್!?
Next Post
ಚಿಕ್ಕಬಳ್ಳಾಪುರ ಜಿಲ್ಲೆಯ ಆರ್ಥಿಕ ಸುಧಾರಣೆಗೆ ಕೊಡುಗೆ ಹೈದರಾಬಾದ್‌-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಯೋಜನೆ ನೀಡಿದ ಕೇಂದ್ರ ಸರ್ಕಾರಕ್ಕೆ ಡಾ.ಸುಧಾಕರ್ ಧನ್ಯವಾದ

Recent News