ಇಂಟರ್ನೆಟ್‌ಗೆ ನಿರ್ಬಂಧ ವಿಧಿಸುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ

ಇಂಟರ್ನೆಟ್‌ಗೆ ನಿರ್ಬಂಧ ವಿಧಿಸುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ

ನವದೆಹಲಿ, ಮಾ. 14: ವಿಶ್ವದಲ್ಲೇ ಭಾರತ ಅತಿ ಹೆಚ್ಚು ಬಾರಿ ಇಂಟರ್ನೆಟ್‌ ಸ್ಥಗಿತಗೊಳಿಸುತ್ತಿರುವ ದೇಶಗಳ ಪಟ್ಟಿಯಲ್ಲಿ ಮುಂದಿದ್ದು, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಕಡಿವಾಣ ಮತ್ತು ಜನರ ದೈನಂದಿನ ಜೀವನದ ಮೇಲೆ ಪ್ರಭಾವ ಬೀರುವ ಕ್ರಮವಾಗಿದೆ ಎಂದು ವ್ಯಾಪಕವಾದ ಟೀಕೆಗೆ ಕಾರಣವಾಗಿದೆ. ಅನೇಕ ದೇಶಗಳಲ್ಲಿ, ವಾಸ್ತವಿಕ ಅಥವಾ ಸಾಂಭಾವ್ಯ ಅಶಾಂತಿಯನ್ನು ತಡೆಯಲು ಇಂಟರ್ನೆಟ್‌ ಸ್ಥಗಿತದ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. ಸಾಮಾನ್ಯವಾಗಿ ಸರ್ಕಾರ ಉದ್ದೇಶಪೂರ್ವಕವಾಗಿ ಸಾಮಾಜಿಕ ಮಾಧ್ಯಮ ನೆಟ್‌ವರ್ಕ್‌ಗಳ ಮೇಲೆ ನಿರ್ಬಂಧವನ್ನು ವಿಧಿಸಲು ಇಂಟರ್ನೆಟ್ ಸ್ಥಗಿತಗೊಳಿಸುತ್ತದೆ.
ಈಜಿಪ್ಟ್‌ನ 2011ರ ಕ್ರಾಂತಿ ಮತ್ತು 2016ರ ಟರ್ಕಿಶ್ ಮಿಲಿಟರಿ ದಂಗೆಯು ಇಂಟರ್‌ನೆಟ್‌ ಸ್ಥಗಿತಗೊಳಿಸಿರುವುದಕ್ಕೆ ಪ್ರಮುಖ ನಿದರ್ಶನವಾಗಿದೆ. ಭಾರತದಲ್ಲಿ ಅತಿ ಹೆಚ್ಚು ಬಾರಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಈ ಹಿಂದೆ ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ವೇಳೆ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗಿತ್ತು. ಮಣಿಪುರದಲ್ಲಿನ ಜನಾಂಗೀಯ ಹಿಂಸಚಾರದ ವೇಳೆ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗಿತ್ತು. ಇದಲ್ಲದೆ ನೂಹ್‌ ಹಿಂಸಾಚಾರ, ಮಂಗಳೂರು ಗೋಲಿಬಾರ್‌, ರೈತರ ಪ್ರತಿಭಟನೆ, ಸಿಎಎ ಸೇರಿ ಹಲವು ಪ್ರತಿಭಟನೆ ವೇಳೆ ಭಾರತದಲ್ಲಿ ಇಂಟರ್ನೆಟ್‌ ಸ್ಥಗಿತಗೊಳಿಸಲಾಗಿದೆ.
Top10VPN ಪ್ರಕಾರ, 2023ರ ಎಲ್ಲಾ ಭಾರತೀಯ ಇಂಟರ್ನೆಟ್ ನಿರ್ಬಂಧಗಳು ಮತ್ತು ಸ್ಥಗಿತಗೊಳಿಸುವಿಕೆಗಳು ಸುಮಾರು 59 ಮಿಲಿಯನ್ ಜನರನ್ನು ಒಟ್ಟು ಸುಮಾರು 8,000 ಗಂಟೆಗಳ ಕಾಲ ಬಾಧಿಸಿದೆ. ಇದು ವಿಶ್ವದಲ್ಲೇ ಅತಿ ಹೆಚ್ಚುಗಂಟೆಗಳ ಕಾಲ ಇಂಟರ್ನೆಟ್‌ ಸ್ಥಗಿತಗೊಳಿಸಿರುವುದಾಗಿದೆ ಎಂದು ವರದಿಯು ಉಲ್ಲೇಖಿಸಿದೆ. ಇನ್ನು ಇಥಿಯೋಪಿಯಾ, ಮ್ಯಾನ್ಮಾರ್ ಮತ್ತು ಇರಾನ್‌ಗಳಲ್ಲಿ, ಭಿನ್ನಾಭಿಪ್ರಾಯ, ಪ್ರತಿಭಟನೆ ವೇಳೆ ಇಂಟರ್‌ನೆಟ್‌ನ್ನು ಸ್ಥಗಿತಗೊಳಿಸಲಾಗಿದೆ. ಈ ಕ್ರಮಗಳು ಕೂಡ ದೀರ್ಘಾವದಿಯದ್ದಾಗಿದೆ ವರದಿಯು ಉಲ್ಲೇಖಿಸಿದೆ. ಪ್ರಪಂಚದಾದ್ಯಂತ, ಇಂಟರ್ನೆಟ್ ಸ್ಥಗಿತಗೊಳಿಸುವಿಕೆಗಳು ಮತ್ತು ಇಂಟರ್ನೆಟ್‌ ನಿಧಾನಗತಿಯು ಹೆಚ್ಚು ಸಾಮಾನ್ಯವಾಗಿದೆ. ಜನರ ದೈನಂದಿನ ಜೀವನದಲ್ಲಿ ಇಂಟರ್ನೆಟ್ ಆಳವಾದ ಮಹತ್ವವನ್ನು ಪಡೆದುಕೊಂಡಿದೆ. ಅದು ಎಷ್ಟರವೆರೆಗೆ ಎಂದರೆ ಇಂಟರ್‌ನೆಟ್‌ ಸ್ಥಗಿತಗೊಳಿಸುವಿಕೆಯು ಹಣಕಾಸಿನ ಪರಿಣಾಮಗಳನ್ನು ಕೂಡ ಉಂಟು ಮಾಡುತ್ತಿದೆ.
Top10VPN ಪ್ರಕಾರ, ರಷ್ಯಾ, ಇಥಿಯೋಪಿಯಾ ಮತ್ತು ಮ್ಯಾನ್ಮಾರ್‌ನಲ್ಲಿ, ಇಂಟರ್‌ನೆಟ್‌ ಸ್ಥಗಿತಗಳು ಮತ್ತು ಅವುಗಳ ಪ್ರಭಾವ ತುಂಬಾ ದುಬಾರಿಯಾಗುತ್ತಿದೆ. 2023ರಲ್ಲಿ ಸುಮಾರು 1,350 ಗಂಟೆಗಳ ಉದ್ದೇಶಪೂರ್ವಕ ಇಂಟರ್ನೆಟ್ ಸ್ಥಗಿತಗೊಳಿಸಿರುವಿಕೆಯ ಪ್ರಕ್ರಿಯೆಯು ರಷ್ಯಾದ ಆರ್ಥಿಕತೆ ಮೇಲೆ ಆಳವಾದ ಪ್ರಭಾವವನ್ನು ಬೀರಿದೆ ಎಂದು ವರದಿಯು ಉಲ್ಲೇಖಿಸಿದೆ.

Previous Post
ದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರಿಂದ ಮಹಾಪಂಚಾಯತ್
Next Post
ಕೇಂದ್ರ ಚುನಾವಣಾ ಆಯುಕ್ತರಾಗಿ ಜ್ಞಾನೇಶ್‌ ಕುಮಾರ್‌, ಸುಖಬೀರ್‌ ಸಂಧು ಆಯ್ಕೆ

Recent News