ಇಂದು ಬಾಲ ರಾಮನ ಹಣೆಗೆ ಸೂರ್ಯರಶ್ಮಿ ತಿಲಕ ರಾಮನವಮಿ ಹಿನ್ನಲೆ ಅಯೋಧ್ಯೆಯಲ್ಲಿ ಭಾರಿ ಜನ ಸಂದಣಿ

ಇಂದು ಬಾಲ ರಾಮನ ಹಣೆಗೆ ಸೂರ್ಯರಶ್ಮಿ ತಿಲಕ ರಾಮನವಮಿ ಹಿನ್ನಲೆ ಅಯೋಧ್ಯೆಯಲ್ಲಿ ಭಾರಿ ಜನ ಸಂದಣಿ

ಅಯೋಧ್ಯೆ : ರಾಮ ಮಂದಿರಾ ನಿರ್ಮಾಣದ ಬಳಿಕ ಮೊದಲ ರಾಮನವಮಿ ಆಗಮಿಸಿದ್ದು ಇದನ್ನು ಅದ್ಧೂರಿಯಾಗಿ ಆಚರಿಸಲು ಅಯೋಧ್ಯೆಯ ಶ್ರೀರಾಮ ಮಂದಿರಾದಲ್ಲಿ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಹತ್ತು ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದ್ದು ಜನ ಸಂದಣಿಯ ನಿಯಂತ್ರಣಕ್ಕೆ ಎಲ್ಲ ವಿಶೇಷ ದರ್ಶನಗಳ ವ್ಯವಸ್ಥೆ ರದ್ದು ಮಾಡಿದೆ.

ಬೆಳಗ್ಗೆ 3:30ರಿಂದ ಬಾಲರಾಮನ ದರ್ಶನ ಪ್ರಾರಂಭವಾಗಲಿದೆ, ಮಂಗಳ ಆರತಿಯಿಂದ ಆರಂಭಗೊಂಡು ರಾತ್ರಿ 11 ಗಂಟೆಯವರೆಗೆ ದರ್ಶನದ ಅವಧಿಯನ್ನು 19 ಗಂಟೆಗಳವರೆಗೆ ದರ್ಶನಕ್ಕೆ ಸಮಯ ವಿಸ್ತರಿಸಿದೆ. ನಾಲ್ಕು ಭೋಗ್ ನೈವೇದ್ಯಗಳ ಸಮಯದಲ್ಲಿ ಕೇವಲ ಐದು ನಿಮಿಷಗಳ ಕಾಲ ಪರದೆ ಮುಚ್ಚಲಾಗುತ್ತದೆ ಬಾಕಿ ಸಮಯದಲ್ಲಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಿದೆ.

ಬ್ರಾಹ್ಮಿ ಮುಹೂರ್ತದ 3.30ಕ್ಕೆ ಮಂಗಳ ಆರತಿ ನಂತರ, ಅಭಿಷೇಕ, ಶೃಂಗಾರ ಮತ್ತು ದರ್ಶನ ಸೇರಿ ಮುಂಜಾನೆಯ ಧಾರ್ಮಿಕ ವಿಧಿಗಳು ಪ್ರಾರಂಭವಾಗಲಿದೆ‌. ಮುಂಜಾನೆ 5:00 ಗಂಟೆಗೆ ಶೃಂಗಾರ ಆರತಿ ನಂತರ ಪರಿಸ್ಥಿತಿಗೆ ಅನುಗುಣವಾಗಿ ನೈವೇದ್ಯ ಮತ್ತು ಶಯನ ಆರತಿ ವ್ಯವಸ್ಥೆ ಇರಲಿದ್ದು ಶಯನ ಆರತಿಯ ನಂತರ ಮಂದಿರ ನಿರ್ಗಮನ ದ್ವಾರದ ಬಳಿ ಪ್ರಸಾದ ವಿನಿಯೋಗವಾಗಲಿದೆ.

ಬಾಲರಾಮನ ಹಣೆಗೆ ಸೂರ್ಯರಶ್ಮಿ ತಿಲಕ

ರಾಮನವಮಿ ದಿನದಂದು ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿರುವ ರಮಲಲ್ಲಾನ ಹಣೆ ಮೇಲೆ ತಿಲಕದಂತೆ ಸೂರ್ಯನ ಕಿರಣ ಬೀಳುತ್ತದೆ. ಅದಕ್ಕೆ ಸಹಕಾರಿಯಾದ ಆಪ್ಟಿಕಲ್‌ ಯಂತ್ರವನ್ನು ಬೆಂಗಳೂರು ಮೂಲದ ಕಂಪನಿಯೊಂದು ರಾಮ ಜನ್ಮಭೂಮಿ ಟ್ರಸ್ಟ್‌ಗೆ ಕೊಡುಗೆಯಾಗಿ ನೀಡಿರುವುದು ವಿಶೇಷ.

ಎರಡು ಸಾರ್ವಜನಿಕ ಸಂಸ್ಥೆಗಳು ಮತ್ತು ಜೈನ ಕುಟುಂಬ ನಿರ್ವಹಿಸುತ್ತಿರುವ ಬೆಂಗಳೂರು ಮೂಲದ ಕಂಪನಿಯು ಅಯೋಧ್ಯೆ ರಾಮಮಂದಿರಕ್ಕೆ ‘ಸೂರ್ಯ ತಿಲಕ ಯಂತ್ರ’ವನ್ನು ಕೊಡುಗೆಯಾಗಿ ನೀಡಿದೆ. 84 ಲಕ್ಷ ರೂ. ಮೌಲ್ಯದ ಈ ಯಂತ್ರವನ್ನು ಜಿಗಣಿ ಲಿಂಕ್ ರಸ್ತೆಯಲ್ಲಿರುವ ಆಪ್ಟಿಕ್ಸ್ & ಅಲೈಡ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ (OPTICA) ಕೊಡುಗೆಯಾಗಿ ನೀಡಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮತ್ತು ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CBRI) ಸಹಯೋಗದಲ್ಲಿ ಯಂತ್ರ ಅಭಿವೃದ್ಧಿಪಡಿಸಲಾಗಿದೆ.

ಕಂಪನಿಯು ಈ ಆಪ್ಟಿಕಲ್ ವ್ಯವಸ್ಥೆಯನ್ನು ಸದ್ಭಾವನೆಯ ಸೂಚಕವಾಗಿ ಅಭಿವೃದ್ಧಿಪಡಿಸಿದೆ. ಈ ಯಂತ್ರದ ವಿನ್ಯಾಸಕ್ಕೆ ನಾಲ್ಕು ತಿಂಗಳ ಸಮಯ ಬೇಕಾಯಿತು. ಪ್ರತಿ ರಾಮನವಮಿಯಂದು 3-4 ನಿಮಿಷಗಳ ಕಾಲ ರಾಮಲಲ್ಲಾ ವಿಗ್ರಹದ ಹಣೆಯ ಮೇಲೆ ಸೂರ್ಯನ ಬೆಳಕು ಬೀಳಲು ಇದು ಸಹಕಾರಿಯಾಗಲಿದೆ ಎಂದು OPTICA ಕಂಪನಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕೊಟಾರಿಯಾ ತಿಳಿಸಿದ್ದಾರೆ.

ಟೈಟಾನಿಯಂ, ಹಿತ್ತಾಳೆ ಮತ್ತು ಕಂಚು ಬಳಸಿ ಯಂತ್ರ ರೂಪಿಸಲಾಗಿದೆ. ಇದು ಪೆರಿಸ್ಕೋಪ್‌ನಂತೆ ಕಾರ್ಯನಿರ್ವಹಿಸುತ್ತದೆ. ಪೆರಿಸ್ಕೋಪಿಕ್ ವ್ಯವಸ್ಥೆಯಲ್ಲಿನ ಕನ್ನಡಿಯು ರಾಮನವಮಿಯಂದು ನಿರ್ದಿಷ್ಟ ಕೋನದಲ್ಲಿ ಸೂರ್ಯನ ಬೆಳಕನ್ನು ಸೆರೆಹಿಡಿಯುತ್ತದೆ. ಸೆರೆ ಹಿಡಿದ ಬೆಳಕು ವಿಗ್ರಹದ ಹಣೆ ಮೇಲೆ ನಿಖರವಾಗಿ ಮೂಡುತ್ತದೆ ಎಂದು ಹೇಳಿದ್ದಾರೆ.

ರಾಮನವಮಿಯಂದು ಅಯೋಧ್ಯೆಯ ರಾಮಮಂದಿರಕ್ಕೆ 1,11,111 ಕೆಜಿ ಲಡ್ಡುಗಳನ್ನು ಏಪ್ರಿಲ್ 17 ರಂದು ನೈವೇದ್ಯ ಮತ್ತು ವಿತರಣೆಗಾಗಿ ಕಳುಹಿಸಲಾಗುವುದು, ಈ ಮೊದಲ ಪ್ರಾಣ ಪ್ರತಿಷ್ಠಾಪನೆಯ ವೇಳೆ 40,000 ಲಡ್ಡುಗಳನ್ನು ಕಳಿಹಿಸಲಾಗಿತ್ತು.

– ಅತುಲ್ ಕುಮಾರ್ ಸಕ್ಸೇನಾ, ದೇವ್ರಹ ಹನ್ಸ್ ಬಾಬಾ ಟ್ರಸ್ಟ್ ನ ಟ್ರಸ್ಟಿ

Previous Post
ಪ್ರಧಾನಿ ಮೋದಿ ದೇಶದ ಶ್ರೀಮಂತ ಉದ್ಯಮಿಗಳ ಸಾಧನ – ರಾಹುಲ್ ಗಾಂಧಿ ಆರೋಪ
Next Post
ಭಾರಿ ಸದ್ದು ಮಾಡ್ತಿದೆ ಕುರುಡು ಕಾಂಚಾಣ: 4650 ಕೋಟಿ ರೂ. ಹಣ ಜಪ್ತಿ ದಾಖಲೆ

Recent News