ಇಂದು ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆ ಹೊಸ ಇತಿಹಾಸ ಬರೆಯಲಿರುವ ವಿತ್ತ ಸಚಿವೆ ನಿರ್ಮಲ ಸೀತರಾಮನ್

ಇಂದು ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆ ಹೊಸ ಇತಿಹಾಸ ಬರೆಯಲಿರುವ ವಿತ್ತ ಸಚಿವೆ ನಿರ್ಮಲ ಸೀತರಾಮನ್

ನವದೆಹಲಿ : ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 2024-25ನೇ ಹಣಕಾಸು ವರ್ಷಕ್ಕೆ ಬಜೆಟ್ ಮಂಡಿಸಲಿದ್ದಾರೆ. ಸತತ ಏಳನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಸಚಿವೆ ನಿರ್ಮಲಾ ಸೀತಾರಾಮನ್ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಮುರಿದು, ಹೊಸ ಇತಿಹಾಸ ಬರೆಯಲಿದ್ದಾರೆ.

ಬಜೆಟ್‌ ಮಂಡನೆಗೂ ಮುನ್ನ ದಿನವಾದ ಸೋಮವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಆರ್ಥಿಕ ಸಮೀಕ್ಷೆ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ.
ಭಾರತದ ಆರ್ಥಿಕತೆಯ ಬಲವಾಗಿದೆ. ಭಾರತ ಸ್ಥಿರವಾದ ಹೆಜ್ಜೆಯನ್ನು ಇಡುತ್ತಿದೆ ಕೋವಿಡ್ ನಂತರ ಆರ್ಥಿಕತೆ ಚೇತರಿಕೆ ಕಂಡಿದೆ, ಆರ್ಥಿಕ ಸ್ಥಿರತೆಯನ್ನು ಖಾತರಿಪಡಿಸಿದೆ 2024-25ರ ಹಣಕಾಸು ವರ್ಷದಲ್ಲಿ ಬೆಳವಣಿಗೆ ದರ 6.5ರಿಂದ 7%ರಷ್ಟು ಏರುವ ನಿರೀಕ್ಷೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಸೋಮವಾರ ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ, ಬಜೆಟ್ ಹೇಗಿರಲಿದೆ ಎಂಬುದರ ಸುಳಿವನ್ನು ನೀಡಿದ್ದಾರೆ. ನಾವು ನಾಳೆ ಸುಭದ್ರವಾದ ಬಜೆಟ್ ಮಂಡಲಿಸಿದ್ದೇವೆ. 2047ರ ವಿಕಸಿತ ಭಾರತಕ್ಕಾಗಿ ನಾಳೆಯ ಬಜೆಟ್ ಮಂಡನೆಯಾಗಲಿದೆ. ಮುಂದಿನ ಐದು ವರ್ಷಗಳು ನಮ್ಮ ಸರ್ಕಾರಕ್ಕೆ ವಿಶೇಷ ದಿನಗಳಾಗಿರಲಿವೆ ಎಂದು ಹೇಳಿದರು.

ಇನ್ನು ಬಜೆಟ್ ನಲ್ಲಿ ಆದಾಯ ತೆರಿಗೆ ವಿನಾಯಿತಿ ಅಥವಾ ಟ್ಯಾಕ್ಸ್ ಎಕ್ಸೆಂಪ್ಷನ್, ಮತ್ತು ಟ್ಯಾಕ್ಸ್ ಡಿಡಕ್ಷನ್ ಈ ಎರಡನ್ನೂ ಇಳಿಸಬೇಕೆನ್ನುವುದು ತೆರಿಗೆ ಪಾವತಿದಾರರ ಸತತ ಮನವಿಯಾಗಿದೆ.ಕಳೆದ ಬಾರಿಯ ಬಜೆಟ್​ನಲ್ಲಿ ಟ್ಯಾಕ್ಸ್ ಎಕ್ಸೆಂಪ್ಷನ್ ಅನ್ನು ಎರಡೂವರೆ ಲಕ್ಷ ರೂನಿಂದ ಮೂರು ಲಕ್ಷ ರೂಗೆ ಹೆಚ್ಚಿಸಲಾಗಿತ್ತು ಈಗ ಈ ಡಿಡಕ್ಷನ್ ಲಿಮಿಟ್ ಅನ್ನು ಇನ್ನಷ್ಟು ಹೆಚ್ಚಿಸಬೇಕು ಎನ್ನುವ ಒತ್ತಾಯ ಇದೆ. ಬಜೆಟ್​ನಲ್ಲಿ ಇದನ್ನು ಪರಿಗಣಿಸಬಹುದು ಎನ್ನಲಾಗುತ್ತಿದೆ.

ಟ್ಯಾಕ್ಸ್ ಎಕ್ಸೆಂಪ್ಷನ್ ಲಿಮಿಟ್ ಅನ್ನು 3 ಲಕ್ಷ ರೂನಿಂದ 5 ಲಕ್ಷ ರೂಗೆ ಹೆಚ್ಚಿಸಬಹುದು, ಹಾಗೆಯೇ, ಮೂಲ ಟ್ಯಾಕ್ಸ್ ಡಿಡಕ್ಷನ್ ಅನ್ನು ಈಗಿರುವ 50,000 ರೂನಿಂದ ಒಂದು ಲಕ್ಷ ರೂಗೆ ಹೆಚ್ಚಿಸಬಹುದು ಅಷ್ಟೇ ಅಲ್ಲ, ಆದಾಯ ತೆರಿಗೆ ಸ್ಲ್ಯಾಬ್ ದರದಲ್ಲಿ ತುಸು ಬದಲಾವಣೆ ಆಗಬಹುದು
ಅಧಿಕ ಆದಾಯದ ಸ್ಲ್ಯಾಬ್​ನ ದರವನ್ನು ತುಸು ಇಳಿಸಬಹುದು ಅದರಲ್ಲೂ ಮುಖ್ಯವಾಗಿ 15 ಲಕ್ಷ ರೂನಿಂದ 20 ಲಕ್ಷ ರೂ ಆದಾಯದ ಸ್ಲ್ಯಾಬ್​ಗೆ ಶೇ. 20ರಷ್ಟು ತೆರಿಗೆ ಇದೆ, ಇದನ್ನು ಸ್ವಲ್ಪ ಇಳಿಸಬಹುದು ಎನ್ನಲಾಗುತ್ತಿದೆ.

ಕೃಷಿ ವಕಯದಲ್ಲಿ ಕೃಷಿ ಸಮ್ಮಾನ್ ಯೋಜನೆಯಡಿ 6000 ಸಹಾಯಧವನ್ನು ಹೆಚ್ಚಿಸಬಹುದು, ಸಾವಯವ ಕೃಷಿ ಉತ್ಪನ್ನಗಳ ಖರೀದಿದಾರರು ಮತ್ತು ಮಾರಾಟಗಾರರ ನಡುವೆ ನೇರ ಸಂವಹನವನ್ನು ಸುಲಭಗೊಳಿಸಲು ಉಪಕ್ರಮಗಳು ನಿರೀಕ್ಷಿಸಬಹುದು, ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಗೆ ದುಡಿಯುವ ಜನರ ಕೂಲಿ ಹೆಚ್ಚಳ
• ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಬಹುದು, ನಗರ ಭಾಗದಲ್ಲಿ ಉದ್ಯೋಗ ಖಾತರಿ ವಿಸ್ತರಿಸಬಹುದು, ರೈತರಿಗೆ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳು, ಸಸ್ಯ ಸಂರಕ್ಷಣಾ ರಾಸಾಯನಿಕಗಳ ಮೇಲಿನ ಕಡಿಮೆ GST ದರ ಕಡಿತಗೊಳಿಸಬಹುದು. ಕೃಷಿ ವಲಯದಲ್ಲಿ ಮುಖ್ಯವಾಗಿ ರಸಗೊಬ್ಬರಗಳು ಮತ್ತು ಕೃಷಿ ರಾಸಾಯನಿಕಗಳ ಮೇಲೆ ಅಧಿಕ ಸಹಾಯಧನ ನೀಡಬಹುದು, ಪಶುಸಂಗೋಪನಾ ವಲಯಕ್ಕೆ ಕಡಿಮೆ ದರದಲ್ಲಿ ಸಾಲ ಸೌಲಭ್ಯ ನೀಡಬಹುದು

ಬಡವರು, ಸಾಮಾನ್ಯ ಜನರರನ್ನು ಗಮನದಲ್ಲಿಟ್ಟುಕೊಂಡು ಹಣದುಬ್ಬರದಿಂದ ದಿನಬಳಕೆಯ ವಸ್ತುಗಳ ಬೆಲೆಗಳು ವೇಗವಾಗಿ ಹೆಚ್ಚುತ್ತಿದ್ದು, ಸರ್ಕಾರ ಅವುಗಳನ್ನು ನಿಯಂತ್ರಣ ಮಾಡಬಹುದು ವಿಶೇಷವಾಗಿ ಬೇಳೆಕಾಳುಗಳು, ಅಕ್ಕಿ, ಹಿಟ್ಟು, ಹಾಲು, ಗ್ಯಾಸ್ ಮತ್ತು ಇತರ ವಸ್ತುಗಳ ಬೆಲೆ ಏರಿಯಾಗಿದ್ದು, ಬೆಲೆ ಏರಿಕೆ ನಿಯಂತ್ರಿಸುವ ದೃಷ್ಟಿಯಿಂದ ಕ್ರಮಗಳನ್ನು ತೆಗೆದುಕೊಳ್ಳಬಹುದು,ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಿಸಲು ನೀಡುವ ಮೊತ್ತದಲ್ಲಿ ಹೆಚ್ಚಳವಾಗಬಹುದು

ಶಿಕ್ಷಣ ಮತ್ತು ತಂತ್ರಜ್ಞಾ‌ನ ವಲಯದಲ್ಲಿ, EdTech ಗಾಗಿ ನಿಯಂತ್ರಕ ಚೌಕಟ್ಟು ನಿರ್ಮಾಣ, ಡಿಜಿಟಲ್ ಕೌಶಲ್ಯ ಮತ್ತು ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸುವುದು, ಸೈಬರ್ ಸೆಕ್ಯುರಿಟಿ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು, ತಂತ್ರಜ್ಞಾನ-ಚಾಲಿತ ಪರಿಹಾರಗಳ ಕಡೆಗೆ ಹೆಚ್ಚಿದ ಹಂಚಿಕೆ ಡಿಜಿಟಲ್ ನಿರ್ಮಾಣ ತಂತ್ರಜ್ಞಾನ ಮತ್ತು ಡಿಜಿಟಲ್ ಅವಳಿ ತಂತ್ರಜ್ಞಾನಗಳಲ್ಲಿ ಹೂಡಿಕೆಗಳ ನಿರೀಕ್ಷಿಸಬಹುದು.

ಕೃಷಿ ಮತ್ತು ಸುಸ್ಥಿರ ಪ್ರವಾಸೋದ್ಯಮಕ್ಕೆ ಬೆಂಬಲ ನೀಡಬಹುದು, ಗುಡ್ಡಗಾಡು ಪ್ರದೇಶಗಳಲ್ಲಿನ ಹಳ್ಳಿಯ ಹೋಂಸ್ಟೇಗಳಿಗೆ GST ರಿಯಾಯಿತಿ ನೀಡಬಹುದು, ಹೋಟೆಲ್‌ಗಳನ್ನು ಮೂಲಸೌಕರ್ಯಗಳಾಗಿ ಮರುವರ್ಗೀಕರಿಸುವುದು ಮತ್ತು ಸುಸ್ಥಿರ ಅಭ್ಯಾಸಗಳಿಗಾಗಿ ತೆರಿಗೆ ಪ್ರೋತ್ಸಾಹವನ್ನು ನೀಡುವುದು, ಪ್ರವಾಸೋದ್ಯಮ ವಲಯಕ್ಕೆ ಜಿಎಸ್‌ಟಿಯನ್ನು ಕಡಿಮೆಗೊಳಿಸಲಾಗಿದೆ ಮತ್ತು ಅನುಮತಿಗಳ ವ್ಯವಸ್ಥಿತಗೊಳಿಸಬಹುದು.

ಕಾರ್ಮಿಕ ತೀವ್ರ ವಲಯಗಳಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ಯೋಜನೆ ಜಾರಿ, ಮೂಲಸೌಕರ್ಯ ವೆಚ್ಚದಲ್ಲಿ ಹೆಚ್ಚಳ ಮಾಡಬಹುದು. MSME ಮತ್ತು ಉದ್ಯೋಗದ ಮೇಲೆ ಕೇಂದ್ರೀಕರಿಸುವುದು, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಸರ್ಕಾರವು ಯೋಜನೆಯನ್ನು ತರಬಹುದು, ಅವರನ್ನು ESIC ವ್ಯಾಪ್ತಿಗೆ ಸೇರಿಸಬಹುದು. ಆರೋಗ್ಯ ವಲಯದ ಮೇಲಿನ ಬಜೆಟ್ 5% ಏರಿಸಬೇಕು, ವೈದ್ಯಕೀಯ ವಲಯದ ತಜ್ಞರ ಪ್ರಕಾರ ಆರೋಗ್ಯ ಬಜೆಟ್ ಅನ್ನು ಶೇ 1.5 ರಿಂದ 5 ಕ್ಕೆ ಹೆಚ್ಚಿಸಬಹುದು, ಎರಡನೇ ಹಂತದ ನಗರಗಳಲ್ಲಿ ವೈದ್ಯಕೀಯ ಸೌಲಭ್ಯ ಮತ್ತು ಮೂಲ ಸೌಕರ್ಯಗಳ ಹೆಚ್ಚಳ ಮಹಿಳೆಯರು ಮತ್ತು ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಸಾಧ್ಯತೆ ಇದೆ.

ಮಹಿಳೆಯರಿಗೆ ಆರೋಗ್ಯ ರಕ್ಷಣೆಗೆ ಗಮನ, ಮಾನಸಿಕ ಆರೋಗ್ಯ, ತಾಯಿಯ ಆರೋಗ್ಯ ಮತ್ತು ಮಹಿಳಾ ಆರೋಗ್ಯ ರಕ್ಷಣೆಗೆ ಸರ್ಕಾರ ಅನುದಾನ ಹೆಚ್ಚಿಸುವ ಸಾಧ್ಯತೆ, ಶೌಚಾಲಯ ನಿರ್ಮಾಣ ಸೇರಿದಂತೆ ಗ್ರಾಮೀಣ ಮಹಿಳೆಯರ ಆರೋಗ್ಯ ಮೂಲಸೌಕರ್ಯಗಳ ಮೇಲೆ ವಿಶೇಷ ಗಮನ, ಸ್ತನಕ್ಯಾನ್ಸರ್ ಗೆ ಉಚಿತ ಲಸಿಕೆ ಘೋಷಣೆಯಾಗಬಹುದು, ಮಹಿಳಾ ಉದ್ಯಮಶೀಲತೆಗೆ ಬೆಂಬಲ, ಮಹಿಳೆಯರ ನೇತೃತ್ವದ ಉದ್ಯಮಗಳಿಗೆ ವಿಶೇಷ ಪ್ರೋತ್ಸಾಹದ ನಿರೀಕ್ಷೆ, ಉದ್ಯಮ ಸ್ಥಾಪಿಸಲು ಸುಲಭ ಸಾಲದ ಸೌಲಭ್ಯ, ಕಡಿಮೆ‌ ಬಡ್ಡಿದರದಲ್ಲಿ ಸಾಲ ಸೌಲಭ್ಯ ನಿರೀಕ್ಷೆ ಇದೆ

ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ಮತ್ತು ಶಿಕ್ಷಣಕ್ಕೆ ಹಿಸ ಯೋಜನೆ‌ ಮಾಡುವುದು, ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ, ಸ್ಕಿಲ್ ಇಂಡಿಯಾದಂತಹ ಕಾರ್ಯಕ್ರಮಗಳಲ್ಲಿ ಮಹಿಳೆಯರನ್ನು ಕೇಂದ್ರೀಕರಿಸಿ ಯೋಜನೆ‌ ರೂಪಿಸುವ ನಿರೀಕ್ಷೆ ಮಹಿಳೆಯರಲ್ಲಿ ಉಳಿತಾಯ ಮತ್ತು ಹೂಡಿಕೆಯಲ್ಲಿ‌ ಪ್ರೋತ್ಸಾಹ ನೀಡುವುದು, ಮುಟ್ಟಿನ ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣೆಯಂತಹ ಆರೋಗ್ಯ ಯೋಜನೆ, ಲಕ್ ಪತಿ ದೀದಿ, ಡ್ರೋಣ್ ಯೋಜನೆಯನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆ ಇದೆ.

ಭಾರತದ 5 ಟ್ರಿಲಿಯನ್ ಆರ್ಥಿಕತೆಗೆ ರೈಲ್ವೆ ಬಹುದೊಡ್ಡ ಕೊಡುಗೆ ನೀಡಲಿದೆ, ಹೀಗಾಗೀ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಬಹುದು, ಹೆಚ್ಚಿನ ವೇಗದ ರೈಲು ಯೋಜನೆಗಳಿಗೆ , ವಿಶೇಷವಾಗಿ ಮುಂಬೈ-ಅಹಮದಾಬಾದ್ ಕಾರಿಡಾರ್‌ಗೆ ಆದ್ಯತೆ ಸಿಗಬಹುದು, ಜಪಾನ್‌ನ ಶಿಂಕನ್‌ಸೆನ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಈ ಯೋಜನೆಯು ಭಾರತೀಯ ರೈಲು ಪ್ರಯಾಣದಲ್ಲಿ ಗೇಮ್ ಚೇಂಜರ್ ಆಗಿ ಕಂಡುಬರುತ್ತದೆ.

ಹೊಸ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಪ್ರಾರಂಭ ಅಪಘಾತಗಳನ್ನು ಕಡಿಮೆ ಮಾಡಲು ಮತ್ತು ರೈಲ್ವೆ ಜಾಲದ ಸುರಕ್ಷತೆಯನ್ನು ಖಾತ್ರಿಪಡಿಸಲು ಟ್ರ್ಯಾಕ್ ನವೀಕರಣ, ಸುಧಾರಿತ ಸಿಗ್ನಲಿಂಗ್ ವ್ಯವಸ್ಥೆಗಳು, ಸೇತುವೆ ಬಲಪಡಿಸುವಿಕೆ ಮತ್ತು ಕವಚ್ ಸುರಕ್ಷತಾ ವ್ಯವಸ್ಥೆಯ ಅನುಷ್ಠಾನ ಸೇರಿದಂತೆ ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡಬಹುದು ರೈಲು ಮಾರ್ಗಗಳ ವಿದ್ಯುದೀಕರಣ ಮತ್ತು ಇತರ ಹಸಿರು ಉಪಕ್ರಮಗಳಲ್ಲಿ ಗಣನೀಯ ಹೂಡಿಕೆ ಸಾಧ್ಯತೆ ಇದೆ.

Previous Post
ಶಿರೂರು ಗುಡ್ಡದಲ್ಲಿ ಸೇನೆಯಿಂದ ರಕ್ಷಣಾ ಕಾರ್ಯ ಡಿಕೆಶಿಗೆ ತಿರುಗೇಟು ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ
Next Post
ಆರ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸರ್ಕಾರಿ ನೌಕರರಿಗೆ ಗ್ರೀನ್ ಸಿಗ್ನಲ್!?

Recent News