ಇಡಿ ಬೆನ್ನಲೆ ಕೆ.ಕವಿತಾ ವಶಕ್ಕೆ ಪಡೆದ ಸಿಬಿಐ

ಇಡಿ ಬೆನ್ನಲೆ ಕೆ.ಕವಿತಾ ವಶಕ್ಕೆ ಪಡೆದ ಸಿಬಿಐ

ನವದೆಹಲಿ : ದೆಹಲಿ ಅಬಕಾರಿ ನೀತಿ ಪ್ರಕರಣದ ತನಿಖೆ ಹಿನ್ನಲೆ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರನ್ನು ದೆಹಲಿ ನ್ಯಾಯಾಲಯವು ಏಪ್ರಿಲ್ 15 ರವರೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ವಶಕ್ಕೆ ಒಪ್ಪಿಸಿದೆ. ರೌಸ್ ಅವೆನ್ಯೂ ನ್ಯಾಯಾಲಯಗಳ ವಿಶೇಷ ನ್ಯಾಯಾಧೀಶ (ಪಿಸಿ ಆಕ್ಟ್) ಕಾವೇರಿ ಬವೇಜಾ ಈ ಆದೇಶವನ್ನು ನೀಡಿದರು.

ಇಡಿ ಬಂಧನದ ಬಳಿಕ ನ್ಯಾಯಂಗ ಬಂಧನದಲ್ಲಿದ್ದ ಕವಿತಾ ಅವರನ್ನು ಗುರುವಾರ ಬಂಧಿಸಿದ್ದ ಸಿಬಿಐ ಜೈಲಿನಲ್ಲಿ ವಿಚಾರಣೆ ನಡೆಸಿತ್ತು. ವಿಚಾರಣೆಗೆ ಸ್ಪಂಧಿಸದ ಹಿನ್ನಲೆ ಐದು ದಿನಗಳ ಕಸ್ಟಡಿ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಪ್ರಕರಣದಲ್ಲಿ ಕೆ.ಕವಿತಾ ಬಳಿಕ ಮಹತ್ವದ ಸಾಕ್ಷ್ಯಧಾರಗಳಿದ್ದು ಅವರ ವಿಚಾರಣೆ ಅಗತ್ಯವಿದೆ ಎಂದು ಮನವಿ ಮಾಡಿತು.

ದಕ್ಷಿಣದ ಒಬ್ಬ ಮದ್ಯದ ಉದ್ಯಮಿ ಮಾರ್ಚ್ 16, 2022 ರಂದು ದೆಹಲಿಯ ಮುಖ್ಯಮಂತ್ರಿ ಕಚೇರಿ ಕಚೇರಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾದರು ಮತ್ತು ಬೆಂಬಲವನ್ನು ಕೋರಿದರು. ಈ ನಿಟ್ಟಿನಲ್ಲಿ ಕೆ ಕವಿತಾ ಅವರನ್ನು ಸಂಪರ್ಕಿಸುವುದಾಗಿ ಅರವಿಂದ್ ಕೇಜ್ರಿವಾಲ್ ಅವರಿಗೆ ಭರವಸೆ ನೀಡಿದ್ದರು, ಇದಕ್ಕಾಗಿ ಅವರು ಹಣವನ್ನು ಕೇಳಿದ್ದರು ಎಂದು ವಿಚಾರಣೆ ವೇಳೆ ಸಿಬಿಐ ಆರೋಪಿಸಿದೆ.

ಮುಂದುವರಿದು, ತೆಲಂಗಾಣದ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರು ಆ ಉದ್ಯಮಿಯನ್ನು ಸಂಪರ್ಕಿಸಿ ಹೈದರಾಬಾದ್‌ನಲ್ಲಿ ಭೇಟಿಯಾಗುವಂತೆ ಸೂಚಿಸಿದ್ದರು‌. ದೆಹಲಿ ಮುಖ್ಯಮಂತ್ರಿಯೊಂದಿಗಿನ ವ್ಯಕ್ತಿಯ ಭೇಟಿಯ ಬಗ್ಗೆ ಅವರು ಉಲ್ಲೇಖವನ್ನು ನೀಡಿದರು ಮತ್ತು ಎಎಪಿಯ ಮಾಧ್ಯಮ ಸಂಯೋಜಕರಾಗಿದ್ದ ಮತ್ತೊರ್ವ ಆರೋಪಿ ನಾಯರ್ ವಿಜಯ್ ನಾಯರ್ ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದರು.

ಮುಂಗಡವಾಗಿ 100 ಕೋಟಿ ಹಣ ಹೊಂದಿಸಬೇಕು ಮತ್ತು 50 ಕೋಟಿ ದೇಣಿಗೆ ನೀಡುವಂತೆ ಕವಿತಾ ಉದ್ಯಮಿಗೆ ಹೇಳಿದ್ದರು. ಆರೋಪಿಗಳಲ್ಲಿ ಒಬ್ಬರಾದ ವಿಜಯ್ ನಾಯರ್ ಸೌತ್ ಗ್ರೂಪ್ ಎಂಬ ಗುಂಪಿನಿಂದ ಕನಿಷ್ಠ 100 ಕೋಟಿ ರೂ.ಗಳಷ್ಟು ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಇದಕ್ಕೆ ಸಂಬಂಧಿಸಿದ ವ್ಯಾಟ್ಸ್ ಚಾಟ್ ಸೇರ ಹಲವು ದಾಖಲೆಗಳಿದೆ ಎಂದು ಸಿಬಿಐ ಹೇಳಿಕೊಂಡಿದೆ. ಸಿಬಿಐ ಕಸ್ಟಡಿಗೆ ಮನವಿಯನ್ನು ಕವಿತಾ ಅವರ ವಕೀಲರು ವಿರೋಧಿಸಿದ್ದಾರೆ. ಸಿಬಿಐ ಬಂಧನ ಕಾನೂನು ಬಾಹಿರ ಮತ್ತು ತನಿಖಾ ಸಂಸ್ಥೆ ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು.

Previous Post
97 ಎಲ್ ಸಿಎ ಮಾರ್ಕ್ 1ಎ ಫೈಟರ್ ಜೆಟ್‌ಗೆ ಖರೀದಿಗೆ ಟೆಂಡರ್
Next Post
ಆರ್‌ಟಿಐ ಅಡಿ ಚುನಾವಣಾ ಬಾಂಡ್ ಮಾಹಿತಿ ನೀಡಲು ನಿರಾಕರಿಸಿದ ಎಸ್‌ಬಿಐ

Recent News