ಇಯರ್‌ಫೋನ್‌ ಹಾಕೊಂಡು ಸ್ಕೂಟಿ ಚಲಾಯಿಸುವಾಗಲೇ ಮೊಬೈಲ್‌ ಸ್ಫೋಟವಾಗಿ ಮಹಿಳೆ ಸಾವು

ಇಯರ್‌ಫೋನ್‌ ಹಾಕೊಂಡು ಸ್ಕೂಟಿ ಚಲಾಯಿಸುವಾಗಲೇ ಮೊಬೈಲ್‌ ಸ್ಫೋಟವಾಗಿ ಮಹಿಳೆ ಸಾವು

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಎಲೆಕ್ಟ್ರಿಕ್‌ ಐಟಂಗಳು ಇದ್ದಕಿದ್ದಂತೆ ಬೆಂಕಿಗಾಹುತಿಯಾಗಿರುವ ಘಟನೆಗಳು ನಡೆದಿರುವ ಉದಾಹರಣೆಗಳಿವೆ. ಇದೀಗ ಇಯರ್‌ಫೋನ್‌ ಹಾಕಿಕೊಂಡು ಸ್ಕೂಟಿ ಚಾಲನೆ ಮಾಡುವಾಗ ಮೊಬೈಲ್‌ ಸ್ಪೋಟಗೊಂಡು ಚಾಲಕಿ ಸಾವನ್ನಪ್ಪಿದ ಘಟನೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈ ಘಟನೆ ನಡೆದಿದ್ದು ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ. ಇಯರ್ ಫೋನ್ ಹಾಕಿಕೊಂಡು ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಮೊಬೈಲ್ ಸ್ಪೋಟಗೊಂಡು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಕಾನ್ಪುರದಲ್ಲಿ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಮಹಿಳೆಯ ಮೊಬೈಲ್ ಇದ್ದಕ್ಕಿದ್ದಂತೆ ಸ್ಫೋಟವಾಗಿದೆ. ಈ ಸ್ಫೋಟ ಸಂಭವಿಸಿದ ತಕ್ಷಣ ಮಹಿಳೆಯು ಸ್ಕೂಟಿಯ ನಿಯಂತ್ರಣವನ್ನು ಕಳೆದುಕೊಂಡಿದ್ದು, ಸ್ಕೂಟರ್ ರಸ್ತೆಯ ಮಧ್ಯದಲ್ಲಿನ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಹಿನ್ನೆಲೆ: ಫರೂಕಾಬಾದ್ ಜಿಲ್ಲೆಯ ನಹ್ರೈಯಾ ಗ್ರಾಮದ ನಿವಾಸಿ ಪೂಜಾ (28) ಬುಧವಾರ ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಸ್ಕೂಟಿಯಲ್ಲಿ ಕಾನ್ಪುರಕ್ಕೆ ತೆರಳುತ್ತಿದ್ದರು. ಅವರು ಕಾನ್ಪುರ ಸೆಂಟ್ರಲ್ ನಿಲ್ದಾಣದಿಂದ ಮುಂಬೈಗೆ ರೈಲು ಹತ್ತಬೇಕಿತ್ತು. ಕಾನ್ಪುರ-ಅಲಿಗಢ ಹೆದ್ದಾರಿಯ ಚೌಬೆಪುರ ಪೊಲೀಸ್ ಠಾಣೆ ಪ್ರದೇಶದ ಮನ್ಪುರ್ ಗ್ರಾಮದ ಬಳಿಯ ಪೆಟ್ರೋಲ್ ಪಂಪ್ ಮುಂದೆ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಅವರ ಮೊಬೈಲ್ ಇದ್ದಕ್ಕಿದ್ದಂತೆ ಸ್ಫೋಟ ಆಗಿದೆ. ಸ್ಫೋಟ ಸಂಭವಿಸಿದ ತಕ್ಷಣ ಅವರ ಹೈಸ್ಪೀಡ್ ಸ್ಕೂಟಿ ನಿಯಂತ್ರಣ ಕಳೆದುಕೊಂಡು ರಸ್ತೆಯ ಮಧ್ಯದಲ್ಲಿದ್ದ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಈ ವೇಳೆ ಹೆಲ್ಮೆಟ್ ಇಲ್ಲದ ಕಾರಣ ತೆಗೆ ಪೆಟ್ಟುಬಿದ್ದು ಮಹಿಳೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ನಿಯಮದ ಪ್ರಕಾರ, ವಾಹನಗಳನ್ನು ಚಲಾಯಿಸುವಾಗ ಚಾಲಕರು ಇಯರ್‌ಫೋನ್‌, ಫೋನ್‌ ಬಳಕೆ ಮಾಡುವುದು ಅಪರಾಧವಾಗಿದೆ. ಅಲ್ಲದೆ, ಹೀಗೆ ಮಾಡುವುದರಿಂದ ಪ್ರಾಣಕ್ಕೂ ಕುತ್ತು ಬರುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ವಾಹನಗಳನ್ನು ಓಡಿಸುವಾಗ ಫೋನ್‌ ಬಳಸಬೇಡಿ ಅಂತಾ ಪೊಲೀಸರು ಹೇಳುತ್ತಲೇ ಇರುತ್ತಾರೆ. ಆದರೂ ಇದ್ಯಾವುದಕ್ಕೂ ಕ್ಯಾರೆ ಮಾಡದೇ, ಕೆಲವರು ಈ ನಿಯಮವನ್ನು ಉಲ್ಲಂಘಟನೆ ಮಾಡಿ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಂಡಿರುವ ಘಟನೆಗಳು ನಡೆದಿರುವ ಉದಾಹರಣೆಗಳಿವೆ.

Previous Post
ಮೂರನೇ ಹಂತದ ಚುನಾವಣೆಗೆ ಸಿದ್ಧತೆ: ಮೇ 7ರಂದು ಮತದಾನ
Next Post
10 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದ ಜಲಾಶಯಗಳ ಮಟ್ಟ!

Recent News