ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯ ಕರ್ನಾಟಕದ ನಾಲ್ವರು ಸೇರಿ 9 ಮಂದಿ ಚಾರಣಿಗರು ಮೃತ

ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯ ಕರ್ನಾಟಕದ ನಾಲ್ವರು ಸೇರಿ 9 ಮಂದಿ ಚಾರಣಿಗರು ಮೃತ

ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ ನಾಲ್ವರು ಸೇರಿ 9 ಮಂದಿ ಚಾರಣಿಗರು ಮೃತಪಟ್ಟಿದ್ದಾರೆ. ಬೆಂಗಳೂರಿನ ಸುಜಾತ (52), ಪದ್ಮಿನಿ ಹೆಗಡೆ (35), ಚಿತ್ರಾ (48), ಸಿಂಧು (45), ವೆಂಕಟೇಶ್‌ ಪ್ರಸಾದ್‌ (52), ಅನಿತಾ (61), ಆಶಾ ಸುಧಾಕರ (72), ಪದ್ಮನಾಭನ್ ಕೆಪಿಎಸ್‌ (50) ವಿನಾಯಕ್ ಮೃತಪಟ್ಟಿದ್ದಾರೆ.

ಬೆಂಗಳೂರಿನಿಂದ 18, ಪುಣೆಯಿಂದ ಒಬ್ಬರು ಜೊತೆ ಟ್ರೆಕ್ಕಿಂಗ್‌ ಗೈಡ್‌ಗಳಾಗಿ ಉತ್ತರ ಕಾಶಿಯ ಮೂವರು ನಿವಾಸಿಗಳು ತೆರಳಿದ್ದರು. ಉತ್ತರಾಖಂಡದ ಸಹಸ್ತ್ರ ತಾಲ್‌ನಲ್ಲಿ ಸಿಲುಕಿದ್ದ ಚಾರಣಿಗರ ಪೈಕಿ ಸೌಮ್ಯಾ, ವಿನಯ, ಶಿವಜ್ಯೋತಿ, ಸುಧಾಕರ್‌, ಸ್ಮೃತಿ, ಸೀನಾ ಅವರನ್ನು ರಕ್ಷಣೆ ಮಾಡಲಾಗಿದೆ. 13 ಜನರ ಸ್ಥಿತಿ ಗಂಭೀರವಾಗಿದ್ದು ವಾಯು ಪಡೆಯಿಂದ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಮೇ 29ರಿಂದ ಜೂನ್ 7ರವರೆಗೆ ಭಟವಾಡಿ ಮಲ್ಲಾ – ಸಿಲ್ಲಾ – ಕುಶಕಲ್ಯಾಣ – ಸಹಸ್ತ್ರತಾಲ್ ಟ್ರೆಕ್ಕಿಂಗ್‌ಗೆ ಅನುಮತಿ ಪಡೆದಿದ್ದರು. 9 ಚಾರಣಿಗರು ಮೃತಪಟ್ಟಿದ್ದನ್ನು ಉತ್ತರಕಾಶಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿ ದೇವೇಂದ್ರ ಪಟವಾಲ್ ಖಚಿತ ಪಡಿಸಿದ್ದಾರೆ. ಚಾರಣವನ್ನು ಮೌಂಟೇನಿಯರಿಂಗ್ ಫೌಂಡೇಶನ್ ಆಯೋಜಿಸಿತ್ತು. ಗಢವಾಲ್‌ ಜಿಲ್ಲಾಧಿಕಾರಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದು ಭಾರತೀಯ ವಾಯುಪಡೆಯ ನೆರವನ್ನು ಪಡೆಯಲಾಗುತ್ತಿದೆ.

ಘಟನೆ ಬೆನ್ನಲೆ‌ ಕಂದಾಯ ಸಚಿವ ಕೃಷ್ಣಬೈರೇಗೌಡ ಡೆಹ್ರಾಡೋನ್ ತೆರಳಿದ್ದಾರೆ. ಸ್ಥಳೀಯ ಅಧಿಕಾರಗಳ ಸಹಾಯದಿಂದ ರಕ್ಷಣಾ ಕಾರ್ಯಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ರಾಜ್ಯದ ಐವರು ಚಾರಣಿಗರು ಮೃತಪಟ್ಟ ಸುದ್ದಿ ತಿಳಿದು ನೋವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ‌

ಈಗಾಗಲೇ ರಕ್ಷಣಾ ಕಾರ್ಯಾಚರಣೆಯ ಮೂಲಕ 11 ಜನರನ್ನು ಸುರಕ್ಷಿತ ಪ್ರದೇಶಕ್ಕೆ ವಾಪಸು ಕರೆತರಲಾಗಿದ್ದು, ಇನ್ನೂ ಕೆಲವು ಚಾರಣಿಗರ ರಕ್ಷಣೆ ಆಗಬೇಕಿದೆ. ಪ್ರತಿಕೂಲ ಹವಾಮಾನವು ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆ ಉಂಟುಮಾಡುತ್ತಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ನಮ್ಮ ಸರ್ಕಾರವು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಸಚಿವರಾದ ಕೃಷ್ಣ ಬೈರೇಗೌಡ ಅವರಿಗೆ ಇಂದೇ ಡೆಹ್ರಾಡೂನ್‌ಗೆ ತೆರಳಿ ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸುವಂತೆ ಸೂಚಿಸಿದ್ದೇನೆ. ಸ್ಥಳೀಯವಾಗಿ ಲಭ್ಯವಿರುವ ಹೆಲಿಕಾಪ್ಟರ್‌ಗಳು ಹಾಗೂ ಸೇನಾ ಹೆಲಿಕಾಪ್ಟರ್ ಗಳನ್ನು ಬಳಕೆ ಮಾಡಿಕೊಂಡು ಅಪಾಯದಲ್ಲಿ ಸಿಲುಕಿರುವ ಕನ್ನಡಿಗರನ್ನು ಮರಳಿ ಗೂಡು ಸೇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Previous Post
ರಾಜ್ಯದಲ್ಲಿ ಮುಂದಿನ 5 ದಿನ ಭರ್ಜರಿ ಮಳೆ..17 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್
Next Post
ಚುನಾವಣಾ ಫಲಿತಾಂಶದಿಂದ ಮೋದಿಗೆ ದೊಡ್ಡ ರಾಜಕೀಯ ನಷ್ಟವಾಗಿದೆ ಎನ್‌ಡಿಎ ಒಕ್ಕೂಟದ ನಾಯಕರ ಸಭೆಯಲ್ಲಿ ಖರ್ಗೆ ಅಭಿಪ್ರಾಯ

Recent News