ಉತ್ತರ ಪ್ರದೇಶದಲ್ಲಿ ಇತಿಹಾಸ ಬರೆದ ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ಆಜಾದ್
ಲಕ್ನೋ, ಜೂನ್. 04: ಆಜಾದ್ ಸಮಾಜ ಪಕ್ಷ (ಎಎಸ್‌ಪಿ) ಕಾನ್ಶಿ ರಾಮ್ ನಾಯಕ ಮತ್ತು ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ಆಜಾದ್ ‘ರಾವಣ’ ಉತ್ತರ ಪ್ರದೇಶದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಉತ್ತರ ಪ್ರದೇಶದ ನಗೀನಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಗೆಲುವು ದಾಖಲಿಸಿದ್ದಾರೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಓಂ ಕುಮಾರ್ ಅವರು ಸಮಾಜವಾದಿ ಪಕ್ಷದ (ಎಸ್‌ಪಿ) ಮನೋಜ್ ಕುಮಾರ್ ಮತ್ತು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಸುರೇಂದ್ರ ಪಾಲ್ ಸಿಂಗ್‌ಗಿಂತ 1,51,473ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಓಂ ಕುಮಾರ್ ಸೋಲು ಕಂಡಿದ್ದಾರೆ.
ಚಂದ್ರಶೇಖರ್ ಆಜಾದ್ ರಾವಣ ಒಟ್ಟು 5,12,552 ಮತಗಳು, ಬಿಜೆಪಿ ಅಭ್ಯರ್ಥಿ ಓಂ ಕುಮಾರ್ 3,61,079 ಮತಗಳು ಮತ್ತು ಸಮಾಜವಾದಿ ಪಕ್ಷದ ಅಭ್ಯರ್ಥಿ 1,02,374 ಮತಗಳನ್ನು ಪಡೆದಿದ್ದಾರೆ. ಚಂದ್ರಶೇಖರ್ ಆಜಾದ್ ಅವರ ಆಜಾದ್ ಸಮಾಜ ಪಕ್ಷ (ASP) ಎದುರಿಸುತ್ತಿರುವ ಮೊದಲ ಲೋಕಸಭಾ ಚುನಾವಣೆ ಇದಾಗಿದೆ. ಇದು ಕೇವಲ ನಾಲ್ಕು ವರ್ಷಗಳ ಹಳೆಯ ಪಕ್ಷವಾಗಿದೆ. ಟೀ ಪಾಟ್ ಇದರ ಚುನಾವಣಾ ಚಿಹ್ನೆಯಾಗಿದೆ. ಸಾಮಾಜಿಕ ಪರಿವರ್ತನೆಯೇ ಚಂದ್ರಶೇಖರ್ ಆಜಾದ್ ಪಕ್ಷದ ಕರೆಯಾಗಿದೆ. ಬಡವರ ಮಕ್ಕಳು ಆಡಳಿತ ನಡೆಸಬೇಕು ಎಂಬ ಧೇಯ್ಯದೊಂದಿಗೆ ಚುನಾವಣೆ ಎದುರಿಸಿದೆ.
ಆದರೆ, ಅಗತ್ಯವಿದ್ದರೆ ಅವರು ಎನ್‌ಡಿಎ ವಿರುದ್ಧದ ಮೈತ್ರಿಯನ್ನು ಬೆಂಬಲಿಸುವ ನಿರೀಕ್ಷೆಯಿದೆ. ಬಿಎಸ್‌ಪಿಯ ಗಿರೀಶ್ ಚಂದ್ರ ಅವರು 2019 ರ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಗೆದ್ದಿದ್ದರು. 3.5 ಲಕ್ಷಕ್ಕೂ ಹೆಚ್ಚು ದಲಿತ ಮತದಾರರನ್ನು ಒಳಗೊಂಡಿರುವ ಮೀಸಲು ಕ್ಷೇತ್ರವಾದ ನಗೀನಾದಲ್ಲಿ ಈ ಬಾರಿ ಚಂದ್ರಶೇಖರ್ ಆಜಾದ್ ಗೆಲುವು ಕಂಡಿದ್ದಾರೆ.