ಉತ್ತರ ಪ್ರದೇಶದಲ್ಲಿ ಎಲ್ಲ ಲೋಕಸಭೆ ಸ್ಥಾನ ಗೆದ್ದರೂ ಇವಿಎಂ ಮೇಲೆ‌ ನಂಬಿಕೆ ಬರುವುದಿಲ್ಲ – ಅಖಿಲೇಶ್ ಯಾದವ್

ಉತ್ತರ ಪ್ರದೇಶದಲ್ಲಿ ಎಲ್ಲ ಲೋಕಸಭೆ ಸ್ಥಾನ ಗೆದ್ದರೂ ಇವಿಎಂ ಮೇಲೆ‌ ನಂಬಿಕೆ ಬರುವುದಿಲ್ಲ – ಅಖಿಲೇಶ್ ಯಾದವ್

ನವದೆಹಲಿ : ಇವಿಎಂ ಬಗ್ಗೆ ನಿನ್ನೆಯೂ ಭರವಸೆ ಇಲ್ಲ, ಇಂದು ಭರವಸೆ ಇಲ್ಲ ಉತ್ತರ ಪ್ರದೇಶದಲ್ಲಿ ಎಲ್ಲ ಲೋಕಸಭೆ ಸ್ಥಾನಗಳನ್ನು ನಾವೇ ಗೆದ್ದರೂ ಅದರ ಮೇಲೆ ನಂಬಿಕೆ ಬರುವುದಿಲ್ಲ, ಇವಿಎಂ ವಿರುದ್ಧ ಎಸ್ಪಿ ಹೋರಾಟ ಮಾಡುತ್ತಲೇ ಇರುತದೆ ಎಂದು ಮಾಜಿ ಸಿಎಂ, ಸಂಸದ ಅಖಿಲೇಶ್ ಯಾದವ್ ಹೇಳಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಡಬಲ್ ಇಂಜಿನ್ ಸರ್ಕಾರದಲ್ಲೂ ಉತ್ತರ ಪ್ರದೇಶಕ್ಕೆ ಅನ್ಯಾಯವಾಗಿದೆ ಎಂದರು. ಉತ್ತರ ಪ್ರದೇಶದಲ್ಲಿ ಕೇವಲ ಮೂಲಸೌಕರ್ಯಗಳ ವಿಚಾರದಲ್ಲಿ ಮಾತ್ರ ಅನ್ಯಾಯವಾಗಿಲ್ಲ, ಪ್ರಧಾನಿ ಮೋದಿ ಅವರು ದತ್ತು ಪಡೆದ ಗ್ರಾಮವೂ ಅಭಿವೃದ್ಧಿಯಾಗಿಲ್ಲ ಎಂದು ವ್ಯಂಗ್ಯ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಗ್ರಾಮವನ್ನು ದತ್ತು ಪಡೆದಿದ್ದರು. ಆ ಗ್ರಾಮ ಈವರೆಗೂ ಅಭಿವೃದ್ಧಿಯನ್ನು ಕಂಡಿಲ್ಲ. ಅದೇ ಕಿತ್ತು ಹೋದ ರಸ್ತೆ, ವಿದ್ಯುತ್ ಕಡಿತ, ಖಾಲಿ ಸಿಲಿಂಡರ್ ಕಂಡು ಬರುತ್ತಿವೆ ಇದು ಪ್ರಧಾನಿ ದತ್ತು ಪಡೆದ ಗ್ರಾಮದ ಕಥೆ. ಯಾವುದಾದರೂ ಸಂಸದರಿಗೆ ತಮದಮ ದತ್ತು ಗ್ರಾಮದ ಹೆಸರು ನೆನಪಿದಿಯೇ ಒಂದು ವೇಳೆ ನೆನಪಿದ್ದರೆ ಅದಕ್ಕಿಂತ ನಾಚಿಕೆ ಪಡುವ ವಿಷಯ ಮತ್ತೊಂದಿಲ್ಲ.ದತ್ತು ಪಡೆದ ಬಳಿಕ ಅಭಿವೃದ್ಧಿ ಮಾಡದೆ ಅನಾಥ ಮಾಡುವುದು ಸರಿಯಲ್ಲ ಎಂದರು.

ಅಗ್ನೀವೀರ್ ಮೂಲಕ ರಕ್ಷಣಾ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ ನಾವು ಆ ಯೋಜನೆಯನ್ನು ಯಾವತ್ತು ಸ್ವೀಕರಿಸುವುದಿಲ್ಲ ಇಂಡಿಯಾ ಒಕ್ಕೂಟ ಯಾವಗಲೇ ಅಧಿಕಾರಕ್ಕೆ ಬಂದರೂ ಅದನ್ನು ರದ್ದು ಮಾಡಲಾಗುವುದು. ರೈತರ ಆದಾಯ ದ್ವಿಗುಣ ಮಾಡುವ ಭರವಸೆಯನ್ನು ಸರ್ಕಾರ ನೀಡಿತ್ತು ರೈತರು ಈಗಲೂ ದ್ವಿಗುಣ ನಿರೀಕ್ಷೆಯಲ್ಲಿದ್ದಾರೆ ಈವರೆಗೂ ಅದು ನನಸಾಗಿಲ್ಲ.

ಈ ಸರ್ಕಾರ ಒಂದೇ ಒಂದು ಹೊಸ ಮಂಡಿಯನ್ನು ಸ್ಥಾಪನೆ ಮಾಡಿಲ್ಲ, ಮಂಡಿಯನ್ನೇ ನಿರ್ಮಿಸದ ಸರ್ಕಾರದಿಂದ ಎಂಎಸ್‌ಪಿ ಭರವಸೆ ನಂಬಲು ಹೇಗೆ ಸಾಧ್ಯ. ಈ ಸರ್ಕಾರ ಯುವಕರಿಗೆ ಉದ್ಯೋಗ ನೀಡಿಲ್ಲ ಬದಲಿಗೆ ಅವರಿಂದ ಉದ್ಯೋಗ ಕಿತ್ತುಕೊಂಡಿದೆ. ಇವರ ರಾಜ್ಯದಲ್ಲಿ ಉದ್ಯೋಗದಲ್ಲಿ ನಿರೀಕ್ಷೆ ಇಲ್ಲ. ಯಾವುದೇ ಭರ್ತಿಯಾದರು ಹಿಂಬಾಗಿಲಿನಿಂದ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತಿದೆ ಸರ್ಕಾರಿ ನೌಕರಿ ನೀಡಲಾಗುತ್ತಿಲ್ಲ, ಮೀಸಲಾತಿ ನೀಡಬೇಕು ಎನ್ನುವ ಕಾರಣಕ್ಕೆ ಭರ್ತಿ ಮಾಡುತ್ತಿಲ್ಲ, ಕಳೆದ ಹತ್ತು ವರ್ಷದಲ್ಲಿ ಇದಕ್ಕಾಗಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿಸಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

Previous Post
ಲೋಕ ಫಲಿತಾಂಶ ‘ಇಂಡಿಯಾ’ ಮೈತ್ರಿಕೂಟದ ನೈತಿಕ ವಿಜಯ: ಅಖಿಲೇಶ್ ಯಾದವ್
Next Post
ಮೋದಿ ಪ್ರಪಂಚದಿಂದ ಸತ್ಯವನ್ನು ಹೊರಹಾಕಬಹುದು ವಾಸ್ತವದಲ್ಲಿ ಅಲ್ಲ – ರಾಗಾ ಆಕ್ರೋಶ

Recent News