ಉತ್ಸಾಹದ ಚಿಲುಮೆ ಬಿ.ವಿ ಶ್ರೀನಿವಾಸ್

ಉತ್ಸಾಹದ ಚಿಲುಮೆ ಬಿ.ವಿ ಶ್ರೀನಿವಾಸ್

ನವದೆಹಲಿ : ವಿಧಾನ ಪರಿಷತ್ ಗೆ ಚುನಾವಣೆ ನಡೆಯುತ್ತಿದ್ದು ಆಕಾಂಕ್ಷಿಗಳ ಪಟಗಟ್ಟಿಗಳಲ್ಲಿ ಹಲವು ಹೆಸರು ಚಲಾವಣೆಯಲ್ಲಿವೆ. ಈ ನಡುವೆ ರಾಷ್ಟ್ರೀಯ ಯೂಥ್ ಕಾಂಗ್ರೇಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಕೂಡಾ ಪರಿಷತ್ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಕಳೆದ ಐದು ವರ್ಷಗಳಿಂದ ಯೂಥ್ ಕಾಂಗ್ರೇಸ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಶ್ರೀನಿವಾಸ್ ದೆಹಲಿಯಲ್ಲಿ ಹಲವು ಪ್ರಮುಖ ಜವಬ್ದಾರಿಗಳನ್ನು ನಿಭಾಯಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಬಿ.ವಿ ಶ್ರೀನಿವಾಸ್ ಸಾಮಾನ್ಯ ಕುಟುಂಬದಲ್ಲಿ ಜನಿಸಿದವರು. ಅಂಡರ್-19 ಮತ್ತು ಅಂಡರ್-16 ಕರ್ನಾಟಕ ಕ್ರಿಕೆಟ್ ತಂಡದಲ್ಲಿ ಆಡಿದ್ದ ಕ್ರಿಕೆಟ್ ಆಟಗಾರರಾಗಿದ್ದರು ಅವರು ಬಳಿಕ ರಾಜಕಾರಣಿಯಾಗಿ ಬದಲಾಗಿದ್ದಾರೆ. ಕಾಲೇಜು ದಿನಗಳಲ್ಲಿ NSUI ಸದಸ್ಯರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ರಾಜ್ಯ ರಾಜಕೀಯದ ಬಳಿಕ ದೆಹಲಿಗೆ ಬಂದು ರಾಷ್ಟೀಯ ಯೂಥ್ ಕಾಂಗ್ರೇಸ್ ನಲ್ಲಿ ಗುರುತಿಸಿಕೊಂಡು ಅದರ ಅಧ್ಯಕ್ಷರಾಗಿ ರಾಹುಲ್ ಗಾಂಧಿ ನಿಕಟ ಸಂಪರ್ಕದಲ್ಲಿದ್ದಾರೆ.

ಕೊರೊನಾ ಸಂಧರ್ಭದಲ್ಲಿ ಬಿ.ವಿ ಶ್ರೀನಿವಾಸ್ ಮಾಡಿದ ಕಾರ್ಯವನ್ನು ಇಡೀ ದೇಶವೇ ಶ್ಲಾಘಿಸಿದೆ. ಆಕ್ಸಿಜನ್ ಕೊರತೆಯ ಸಂದರ್ಭದಲ್ಲಿ ಅಪಾಯದಲ್ಲಿದ್ದ ನೂರಾರು ಜೀವಗಳನ್ನು ಉಳಿಸಿದ್ದಾರೆ, ದೆಹಲಿಯ ಯೂಥ್ ಕಾಂಗ್ರೇಸ್ ಕಚೇರಿಯಲ್ಲಿ ಹೆಲ್ಪ್ ಲೈನ್ ಆರಂಭಿಸಿದ್ದ ಅವರು ಜನರ ಅಹವಾಲುಗಳನ್ನು ಸ್ವೀಕರಿಸಿ ಬಗೆಹರಿಸಿದ್ದಾರೆ. ಬೆಡ್ ಮತ್ತು ಆಕ್ಸಿಜನ್ ಕರೆಗಳಿಗೆ ಸ್ಪಂದಿಸಿ ಕೆಲವೇ ಗಂಟೆಗಳಲ್ಲಿ ಖಾಸಗಿ ಸಂಸ್ಥೆಗಳ ಸಹಕಾರದಲ್ಲಿ ಬೆಡ್ ಮತ್ತು ಆಕ್ಸಿಜನ್ ಒದಗಿಸಿದ್ದರು. ಆಕ್ಸಿಜನ್ ಕೊರತೆಯಾಗಿ ಸರ್ಕಾರವೇ ಕೈ ಚೆಲ್ಲುವಂತೆ ಸನ್ನಿವೇಶಗಳಲ್ಲಿ ಇವರ ಸಕ್ರಿಯ ಕಾರ್ಯದಿಂದಾಗಿ ಜನರು ಅವರನ್ನು ಆಕ್ಸಿಜನ್‌ಮ್ಯಾನ್ ಎಂದು ಕರೆಯುಂತೆ ಮಾಡಿತ್ತು.

ಕಾಂಗ್ರೇಸ್ ಸಂಕಷ್ಟದ ಕಾಲದಲ್ಲಿ ಕೆಳಮಟ್ಟದಲ್ಲಿ ಯೂಥ್ ಕಾಂಗ್ರೇಸ್ ಮೂಲಕ ಸಂಘಟನೆ ಬಲಪಡಿಸುವ ಕೆಲಸ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಶ್ರೀನಿವಾಸ್ ರೂಪಿಸುವ ಹೋರಾಟಗಳು ಮಾದರಿಯಾಗಿವೆ. ಕೇಂದ್ರ ಸರ್ಕಾರದ ವಿರುದ್ಧ ನೂರಾರು ಹೋರಾಟಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ಇವರ ಹೋರಾಟಗಳಲ್ಲಿ ಅದೇಷ್ಟು ಲಾಠಿ ಏಟು ತಿಂದಿರಬಹುದು ಎನ್ನುವ ಲೆಕ್ಕವೇ ಇಲ್ಲ ಅದಾಗ್ಯೂ ಉತ್ಸಾಹ ಕುಂದದೆ ಸದಾ ಫಿನಿಕ್ಸ್ ನಂತೆ ಎಂದು ನಿಂತು ಹೋರಾಟಗಳಲ್ಲ ಭಾಗಿಯಾಗುತ್ತಾರೆ.

ಸದ್ಯ ಯೂಥ್ ಕಾಂಗ್ರೇಸ್ ಅಧ್ಯಕ್ಷರಾಗಿ ದೇಶದ್ಯಾಂತ ಪ್ರವಾಸ ಮಾಡುತ್ತಿದ್ದಾರೆ, ರಾಜ್ಯಗಳಲ್ಲಿ ಸಂಘಟನೆ ಬಲಪಡಿಸುತ್ತಾ ಚುನಾವಣೆಗಳಲ್ಲ ತಮ್ಮದೇಯಾದ ಭೂಮಿಕೆ ನಿಭಾಯಿಸುತ್ತಿದ್ದಾರೆ. ಭಾರತ್ ಜೊಡೊ ಮತ್ತು ನ್ಯಾಯ ಯಾತ್ರೆಯಲ್ಲಿ ರಾಹುಲ್ ಜೊತೆಗೆ ಹೆಜ್ಜೆ ಹಾಕಿದ ಅವರು ಈಗ ಲೋಕಸಭೆ ಚುನಾವಣೆಯಲ್ಲಿ ಕೈ ಅಭ್ಯರ್ಥಿಗಳ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದಾರೆ.

ರಾಜ್ಯದಲ್ಲಿ 2010 ರಲ್ಲಿ ಕರಾವಳಿಯ ಕಟ್ಟಾ ಬಲಪಂಥೀಯ ಕಾರ್ಯಕರ್ತ ಪ್ರಮೋದ್ ಮುತಾಲಿಕ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಗುಂಪು ಪ್ರತಿಭಟನೆ ನಡೆಸಿದಾಗ ಮತ್ತು ಪ್ರೇಮಿಗಳ ದಿನಾಚರಣೆಯ ವಿರುದ್ಧ ಮುತಾಲಿಕ್ ಅವರ ಕಟುವಾದ ನಿಲುವು ತೋರಿದ ಹಿನ್ನಲೆ ಅವರ ಮುಖಕ್ಕೆ ಕಪ್ಪು ಬಣ್ಣ ಬಳಿದು ಶ್ರೀನಿವಾಸ್ ಚರ್ಚೆಯ ಮುನ್ನಲೆಗೆ ಬಂದರು. ಅಕ್ಟೋಬರ್ 2010 ರಲ್ಲಿ ಅವರು ರಾಹುಲ್ ಗಾಂಧಿಯಿಂದ ಅತ್ಯುತ್ತಮ ಯುವ ಕಾಂಗ್ರೆಸ್ ಕಾರ್ಯಕರ್ತ ಪ್ರಶಸ್ತಿಯನ್ನು ಪಡೆದರು

Previous Post
ಆರನೇ ಹಂತ ಮುಕ್ತಾಯ, 59.12% ರಷ್ಟು ಮತದಾನ
Next Post
ನವಜಾತು ಶಿಶು ಆಸ್ಪತ್ರೆಗೆ ಬೆಂಕಿ, 7 ಹಸುಗೂಸುಗಳು ಸಾವು

Recent News