ಉದ್ಯೋಗಾಕಾಂಕ್ಷಿಗಳ ಬದಲಿಗೆ ಉದ್ಯೋಗದಾತಗಾಗಿ- ಉಪರಾಷ್ಟ್ರಪತಿ ಕರೆ

ಉದ್ಯೋಗಾಕಾಂಕ್ಷಿಗಳ ಬದಲಿಗೆ ಉದ್ಯೋಗದಾತಗಾಗಿಉಪರಾಷ್ಟ್ರಪತಿ ಕರೆ

ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರೊಂದಿಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ನಿಯೋಗದ ಭೇಟಿ.

ಶ್ರೀ ರಮೇಶ್ ಚಂದ್ರ ಲಹೋಟಿ, ಅಧ್ಯಕ್ಷರು, ಎಫ್‍ಕೆಸಿಸಿಐ ಅವರು ಬೆಂಗಳೂರಿನಲ್ಲಿ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್, ಅವರೊಂದಿಗೆ ಶ್ರೀ ಎಂ. ಜಿ. ಬಾಲಕೃಷ್ಣ, ಹಿರಿಯ ಉಪಾಧ್ಯಕ್ಷರು,  ಮಾಜಿ ಅಧ್ಯಕ್ಷರಾದ ಶ್ರೀ ಕೆ. ರಾಮಸ್ವಾಮಿ, ಮಂಥನ ಸಮಿತಿಯ ಅಧ್ಯಕ್ಷರಾದ ಶ್ರೀ ಕೀರ್ತನ್ ಕುಮಾರ್ ಮತ್ತು  ಶ್ರೀ ಬಿ. ಎ. ಶ್ರೀ ಬಿ. ಎ. ಅಭಿಷೇಕ್ ಛೇರ್ಮನ್, ಕೌಶಲ್ಯ ಅಭಿವೃದ್ಧಿ ಸಮಿತಿ ಎಫ್‍ಕೆಸಿಸಿಐ ಇವರು ಇಂದು ಭಾರತದ ಉಪರಾಷ್ಟ್ರಪತಿಗಳನ್ನು ಸೌಹಾರ್ದ ಭೇಟಿ ಮಾಡಿ ಚರ್ಚಿಸಿದರು.   2024ರ ಅವಧಿಯಲ್ಲಿ ಬೆಂಗಳೂರಿನ ಎಫ್‍ಕೆಸಿಸಿಐ, ಕೆಜಿ ರಸ್ತೆಯ ಸರ್ ಎಂ.ವಿ ಆಡಿಟೋರಿಯಂನಲ್ಲಿ ಎಫ್‍ಕೆಸಿಸಿಐನ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ 16ನೇ ಆವೃತ್ತಿಗೆ ಮಂಥನ್- 2024 ಕಾರ್ಯಕ್ರಮಕ್ಕೆ ಮುಖ್ಯ ಆತಿಥಿಗಳಾಗಿ ಆಗಮಿಸುವಂತೆ ಗೌರವಾನ್ವಿತ ಭಾರತದ ಉಪರಾಷ್ಟ್ರಪತಿ ರವರಿಗೆ ಆಹ್ವಾನ ನೀಡಿದರು.  ಇಸವಿ 2009 ರಲ್ಲಿ ಸ್ಥಾಪಿಸಲಾದ ಮಂಥನ್- ವ್ಯವಹಾರ ಯೋಜನೆ ಸ್ಪರ್ಧೆ ಕಾರ್ಯಕ್ರಮವನ್ನು ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಉದ್ಘಾಟಿಸಿದರು.

ಈ ಸ್ಪರ್ಧೆಯಲ್ಲಿ ಸ್ಟಾರ್ಟ್-ಅಪ್‍ಗಳನ್ನು ಮಾಡುವಲ್ಲಿ  ಮತ್ತು ಭಾರತೀಯ ಆರ್ಥಿಕತೆಯನ್ನು ಹೆಚ್ಚಿಸಲು  ಯುವ ವಿದ್ಯಾರ್ಥಿಗಳು ಯಶಸ್ವಿ ಉದ್ಯಮಿಯಾಗಲು ಮಂಥನ್  ಪ್ರೋತ್ಸಾಹಿಸುತ್ತದೆ ಎಂದು ವಿವರಿಸಿದರು.   ಈ ಸ್ಪರ್ಧೆಯಲ್ಲಿ ರಾಜ್ಯದ 190ಕ್ಕೂ ಹೆಚ್ಚು ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳ ಭಾಗವಹಿಸುತ್ತಿದ್ದು, ಇದು ಇದು ರಾಷ್ಟ್ರೀಯ ಶಿಕ್ಷಣ ನೀತಿಗೆ (NEP) ಅನುಗುಣವಾಗಿದೆ ಮತ್ತು ಈ ಮಂಥನ ಕಾರ್ಯಕ್ರಮದ ಮೂಲಕ ರಾಷ್ಟ್ರ ನಿರ್ಮಾಣಕ್ಕಾಗಿ  ಯುವ ಉದ್ಯಮಿಗಳನ್ನು ಸೃಷ್ಟಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ವಿಶ್ಲೇಷಿಸಿದರು.

ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿ ತಂಡಗಳಿಗೆ ಕಾರ್ಯಗಾರ ನೀಡಿ, ಅವರ ಪ್ರಸ್ತಾವನೆಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಅತ್ಯುತ್ತಮ ನವೀನ ತಾಂತ್ರಿಕವಾಗಿ ಕಾರ್ಯ ಸಾಧ್ಯವಾದ, ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಮತ್ತು ಕಾರ್ಯಗತಗೊಳಿಸಬಹುದಾದ ವ್ಯಾಪಾರ ಯೋಜನೆಗಳಿಗೆ ರೂ. 10 ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡಲಾಗುತ್ತದೆ.

ಈ ಎಲ್ಲಾ ವಿಷಯಗಳನ್ನು ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳು ಆಲಿಸಿ ಎಫ್‍ಕೆಸಿಸಿಐ ನ ಆಹ್ವಾನವನ್ನು ತಕ್ಷಣವೇ ಸ್ವೀಕರಿಸಿದರು ಮತ್ತು ಉದ್ಯೋಗಾಕಾಂಕ್ಷಿಗಳ ಬದಲಿಗೆ ಉದ್ಯೋಗದಾತರಾಗಲು ಯುವ ಉದ್ಯಮಿಗಳನ್ನು ಸೃಷ್ಟಿಸಲು ಎಫ್‍ಕೆಸಿಸಿಐಯ  ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ಅಂತಹ ಅನೇಕ ಕಾರ್ಯಕ್ರಮಗಳನ್ನು ನಡೆಸಲು ಸಲಹೆ ನೀಡಿದರು.

Previous Post
ಭೂಕುಸಿತ: 2 ಸಾವಿರಕ್ಕೂ ಹೆಚ್ಚು ಮಂದಿ ಸಾವು; ಭಾರತದಿಂದ 1 ಮಿಲಿಯನ್ ಡಾಲರ್ ನೆರವು
Next Post
ಪಠ್ಯಪುಸ್ತಕದಲ್ಲಿ ಮುಖ್ಯ ಬದಲಾವಣೆ ಇಲ್ಲ: ಸಚಿವ ಮಧು ಬಂಗಾರಪ್ಪ

Recent News