ಎಕ್ಸಿಟ್ ಪೋಲ್ ಮಾಹಿತಿ ಸರಿಯಿಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್ ‘ಡಬಲ್ ಡಿಜಿಟ್’ ಸ್ಥಾನಗಳನ್ನು ಗೆಲ್ಲುತ್ತೆ : ಡಿಸಿಎಂ ಡಿಕೆಶಿ

ಎಕ್ಸಿಟ್ ಪೋಲ್ ಮಾಹಿತಿ ಸರಿಯಿಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್ ‘ಡಬಲ್ ಡಿಜಿಟ್’ ಸ್ಥಾನಗಳನ್ನು ಗೆಲ್ಲುತ್ತೆ : ಡಿಸಿಎಂ ಡಿಕೆಶಿ

ನವದೆಹಲಿ : ಲೋಕಸಭಾ ಚುನಾವಣೆಯ ನಿಖರ ಫಲಿತಾಂಶ ಇದೆ ನಾಲ್ಕರಂದು ಹೊರ ಬೀಳಲಿದೆ. ಆದರೆ ಅದಕ್ಕೂ ಮುನ್ನ ನಿನ್ನೆ ಬಿಜೆಪಿ ಬಹುಮತ ಪಡಿದಿದೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆ ಬಹಿರಂಗಗೊಳಿಸಿತು. ಇನ್ನು ಈ ಒಂದು ಎಕ್ಸಿಟ್ ಪೋಲ್ ಸಮೀಕ್ಷೆ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ಈ ಮತದಾನೋ ತರ ಎಕ್ಸಿಟ್ ಪೋಲ್ ಸರಿಯಲ್ಲ ಕರ್ನಾಟಕದಲ್ಲಿ ಕಾಂಗ್ರೆಸ್ ಡಬಲ್ ಡಿಜಿಟ್ ಸ್ಥಾನಗಳನ್ನು ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಕ್ಸಿಟ್ ಪೋಲ್ ನಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ವಿಚಾರವಾಗಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ನಾನು 40 ವರ್ಷದಿಂದ ರಾಜಕೀಯ ಜೀವನದಲ್ಲಿ ಇದ್ದೇನೆ. ನಾವು ಕೂಡ ಚುನಾವಣಾ ಸಮೀಕ್ಷೆ ಮಾಡಿಸಿದ್ದೇವೆ ಎಂದು ಅವರು ತಿಳಿಸಿದರು.ಹಳ್ಳಿಗಳಿಗೆ ಹೋಗಿ ಎಲ್ಲಾ ವರ್ಗದ ಜನರನ್ನು ಮಾತನಾಡಿಸಿದ್ದೇವೆ. ಆದರೆ ಎಕ್ಸಿಟ್ ಪೋಲ್ ನಲ್ಲಿ ತೋರುತ್ತಿರುವ ಮಾಹಿತಿ ಸರಿಯಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಡಬಲ್ ಡಿಜಿಟ್ ಸ್ಥಾನಗಳನ್ನು ಗೆಲ್ಲುತ್ತದೆ. ಕಾರ್ಯಕರ್ತರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು ದೆಹಲಿಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.ಅದೇ ರೀತಿಯಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲೂ ಕೂಡ, ಮತದಾನೋ ತರ ಸಮೀಕ್ಷೆ ಬಂದಾಗ ಡಿಕೆ ಶಿವಕುಮಾರ್ ಇದೇ ರೀತಿ ಹೇಳಿಕೆಯನ್ನು ನೀಡಿದ್ದರು ಯಾವುದೇ ಸಮೀಕ್ಷೆ ಮೇಲೆ ನಮಗೆ ನಂಬಿಕೆ ಇಲ್ಲ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ 130 ರಿಂದ 135 ಸ್ಥಾನಗಳನ್ನು ಗೆಲ್ಲುತ್ತೇನೆ ಎಂದು ಹೇಳಿದರು ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

Previous Post
ನಾ ಹೀಗೆಲ್ಲ ಬದುಕಿಲ್ಲ, ಸರಿಯಾದ ಟಾಯ್ಲೆಟ್, ಮಲಗಲು ರೂಂ ಕೊಡಿ’ : SIT ಅಧಿಕಾರಿಗಳ ಜೊತೆ ಪ್ರಜ್ವಲ್ ಕಿರಿಕ್
Next Post
ಮೋದಿ ಮೀಡಿಯಾ ಸಮೀಕ್ಷೆ, ಎಕ್ಸಿಟ್ ಪೋಲ್ ಅಲ್ಲ’: ರಾಹುಲ್ ಗಾಂಧಿ ಟೀಕೆ

Recent News