ಎಲ್‌.ಕೆ ಅಡ್ವಾಣಿಗೆ ಭಾರತ ರತ್ನ ಪ್ರಧಾನ

ಎಲ್‌.ಕೆ ಅಡ್ವಾಣಿಗೆ ಭಾರತ ರತ್ನ ಪ್ರಧಾನ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಿಜೆಪಿ ಹಿರಿಯ ನಾಯಕ ಎಲ್‌.ಕೆ ಅಡ್ವಾಣಿಯವರಿಗೆ ದೆಹಲಿಯ ಅವರ ನಿವಾಸದಲ್ಲಿ ಭಾನುವಾರ ಭಾರತ ರತ್ನ ಪ್ರದಾನ ಮಾಡಿದರು.

ಸತತ 7 ದಶಕಗಳಿಂದ ದೇಶಕ್ಕೆ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಿದ ಅಡ್ವಾಣಿ ಅವರನ್ನು ರಾಷ್ಟ್ರಪತಿ ಶ್ಲಾಘಿಸಿದರು. ಭಾರತ ರತ್ನವನ್ನು ಪ್ರದಾನ ಮಾಡಲಾಯಿತ್ತು, ಪ್ರಧಾನಿ ಮೋದಿ, ಅಮಿತ್ ಶಾ, ಉಪರಾಷ್ಟ್ರಪತಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಭಾರತೀಯ ರಾಜಕೀಯದ ದೊರೆಯೆಂದೆ ಹೆಸರಾಗಿರುವ ಅಡ್ವಾಣಿ ಅವರು ಏಳು ದಶಕಗಳಿಂದ ಅಚಲವಾದ ಸಮರ್ಪಭಾವ ಮತ್ತು ವಿಭಿನ್ನತೆಯಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದಾರೆ. 1927 ರಲ್ಲಿ ಕರಾಚಿಯಲ್ಲಿ ಜನಿಸಿದ ದೇಶ ವಿಭಜನೆಯ ಹಿನ್ನೆಲೆಯಲ್ಲಿ 1947 ರಲ್ಲಿ ಭಾರತಕ್ಕೆ ನೆಲೆಸಿದರು. ರಾಷ್ಟ್ರೀಯತೆಯ ದೃಷ್ಟಿಕೋನದಿಂದ ಅವರು ದೇಶದ ಉದ್ದಗಲಕ್ಕೂ ವರ್ಷಗಳ ಕಾಲ ಶ್ರಮಿಸಿದರು ಮತ್ತು ಸಾಮಾಜಿಕ-ರಾಜಕೀಯ ಭೂದೃಶ್ಯದಲ್ಲಿ ಬದಲಾವಣೆ ತಂದರು. ದೇಶದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇವರ ಪಾತ್ರದ ಮಹತ್ವದ್ದು‌.

ಸಂಸದರಾಗಿ, ಗೃಹ ಸಚಿವರಾಗಲಿ ಅಥವಾ ಉಪ ಪ್ರಧಾನಿಯಾಗಲಿ ಅವರು ದೇಶದ ಹಿತಾಸಕ್ತಿಗೆ ಆದ್ಯತೆ ನೀಡಿದರು, ಭಾರತದ ಸಂಸ್ಕೃತಿಗಾಗಿ ದೀರ್ಘ ಮತ್ತು ದಣಿವರಿಯದ ಹೋರಾಟಕ್ಕೆ ಸಾಕ್ಷಿಯಾಗಿ 2024 ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ದೇವಾಲಯದ ಪುನ ರ್ನಿರ್ಮಾಣಕ್ಕೆ ಕಾರಣಿಭೂತರಾದರು.

ಎಲ್‌.ಕೆ ಅಡ್ವಾಣಿ ಅವರು ಜೂನ್ 2002 ರಿಂದ ಮೇ 2004 ರವರೆಗೆ ಉಪ ಪ್ರಧಾನಿಮಂತ್ರಿ, ಅಕ್ಟೋಬರ್ 1999 ರಿಂದ ಮೇ 2004 ರವರೆಗೆ ಕೇಂದ್ರ ಗೃಹ ಸಚಿವರಾಗಿ, 1986 ರಿಂದ 1990, 1993 ರಿಂದ 1998 ಮತ್ತು 2004 ರಿಂದ 2005 ರವರೆಗೆ ಬಿಜೆಪಿ ಅಧ್ಯಕ್ಷರಾಗಿದ್ದರು ಸೇವೆ ಸಲ್ಲಿಸಿದ್ದಾರೆ.

Previous Post
ಟಮ್ಯಾಚ್ ಫಿಕ್ಸಿಂಗ್ ಇಲ್ಲದೆ 400 ಸ್ಥಾನ ಗೆಲ್ಲುವ ಘೋಷಣೆ ಸಾಧ್ಯವಿಲ್ಲ: ರಾಹುಲ್ ಗಾಂಧಿ
Next Post
ಲೋಕಸಭಾ ಚುನಾವಣಾ ಗೆಲುವುಗೆ ಮೋದಿ ಮ್ಯಾಚ್ ಫಿಕ್ಸಿಂಗ್! ಕೇಜ್ರಿವಾಲ್ ಬಂಧನ ಖಂಡಿಸಿ ಶಕ್ತಿ ಪ್ರದರ್ಶನ | ಬಿಜೆಪಿ ವಿರುದ್ಧ ವಿಪಕ್ಷಗಳ ವಾಗ್ದಾಳಿ

Recent News