ಒಂದು ವಾರದೊಳಗೆ 27.5 ಲಕ್ಷ ರೈತರಿಗೆ ಬರ ಪರಿಹಾರ : ಕೃಷಿ ಸಚಿವ ಕೃಷ್ಣ ಭೈರೇಗೌಡ

ಒಂದು ವಾರದೊಳಗೆ 27.5 ಲಕ್ಷ ರೈತರಿಗೆ ಬರ ಪರಿಹಾರ : ಕೃಷಿ ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು :ಒಂದು ವಾರದೊಳಗೆ ರೈತರಿಗೆ ಪರಿಹಾರ ನೀಡಲು ಸೂಚನೆ ನೀಡಲಾಗಿದೆ. 40-41 ಲಕ್ಷ ರೈತರಿಗೆ ಪರಿಹಾರ ಪಾವತಿ ವಿತರಣೆ ಮಾಡಿದಂತಾಗುತ್ತೆ. 17 ಲಕ್ಷದ 9 ಸಾವಿರ ರೈತ ಕುಟುಂಬಕ್ಕೆ ಜೀವನೋಪಾಯ ಪರಿಹಾರ ನೀಡಲಿದ್ದೇವೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯ ಮದವರೊಂದಿಗೆ ಮಾತನಾಡಿದ ಅವರು, ಈ ವರ್ಷದ ಮುಂಗಾರು ಪರಿಸ್ಥಿತಿಯ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಜೂ.2ರಂದು ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದೆ. ಹೀಗಾಗಿ ಮುಂದಿನ 15 ದಿನದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಡಿಮೆ ಆಗಲಿದೆ ಎಂದು ಹೇಳಿದ್ದಾರೆ.ಒಂದು ವಾರದೊಳಗೆ ರೈತರಿಗೆ ಪರಿಹಾರ ನೀಡಲು ಸೂಚನೆ ನೀಡಲಾಗಿದೆ. 2800 ರೂ. ಅಥವಾ 3000 ರೂ. ಬರಬಹುದು. ಇದು ಜೀವನೋಪಾಯ‌ ನಷ್ಟದ ಪರಿಹಾರ. ಇದು ಸಣ್ಣ, ಅತಿ ಸಣ್ಣ ರೈತರಿಗೆ ನೀಡುವ ಪರಿಹಾರವಾಗಿದೆ. 40-41 ಲಕ್ಷ ರೈತರಿಗೆ ಪರಿಹಾರ ಪಾವತಿ ವಿತರಣೆ ಮಾಡಿದಂತಾಗುತ್ತೆ. 17 ಲಕ್ಷದ 9 ಸಾವಿರ ರೈತ ಕುಟುಂಬಕ್ಕೆ ಜೀವನೋಪಾಯ ಪರಿಹಾರ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.ಹಿಂದಿನ ವರ್ಷಗಳಲ್ಲಿ ಕಲಬುರ್ಗಿ, ಚಿತ್ರದುರ್ಗ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬರ ಪರಿಹಾರದಲ್ಲಿ ಅಕ್ರಮ ಆಗಿದೆ. ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ವರದಿ ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಬೆಂಗಳೂರು : ಎಸ್ ಎಸ್ ಎಲ್ ಸಿ 2 ಬರೆಯುವ ವಿದ್ಯಾರ್ಥಿಗಳಿಗೆ ಇದೀಗ ಸಿಹಿ ಸುದ್ದಿ ಒಂದು ಇದ್ದು, ಪರೀಕ್ಷೆ 2ಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತ ಸೇವೆ ಒದಗಿಸಲು ಇದೀಗ ಬಿಎಂಟಿಸಿ ಮುಂದಾಗಿದೆ.ವಿದ್ಯಾರ್ಥಿಗಳು ಬಿಎಂಟಿಸಿ ಬಸ್ ಹೌದು ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.ಜೂನ್ 16 ರಿಂದ 22 ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ-2 ನಡೆಯಲಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಿಎಂಟಿಸಿ ಬಸ್ ನಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ.ವಿದ್ಯಾರ್ಥಿ ವಾಸ ಸ್ಥಳದಿಂದ ಪರೀಕ್ಷಾ ಕೇಂದ್ರದ ವರೆಗು ಉಚಿತ ಪ್ರಯಾಣ ಇರಲಿದೆ ಹಾಲ್ ಟಿಕೆಟ್ ತೋರಿಸಿ ವಿದ್ಯಾರ್ಥಿಗಳು ಉಚಿತ ಪ್ರಯಾಣ ಮಾಡಬಹುದಾಗಿದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

Previous Post
ಆಂಧ್ರ ಬಿಜೆಪಿ ಅಧ್ಯಕ್ಷೆ ಪುರಂದೇಶ್ವರಿ ಲೋಕಸಭೆಯ ಸ್ಪೀಕರ್‌?
Next Post
ದೆಹಲಿ ಚಲೋ ರೈತ ಚಳವಳಿಗೆ ಟಿಎಂಸಿ ಬೆಂಬಲ

Recent News