ಕನ್ನಡಿಗ ಕೆ.ಎಲ್. ರಾಹುಲ್ ಅಬ್ಬರಕ್ಕೆ ರಾಜಸ್ಥಾನ ರಾಯಲ್ಸ್ ಗಢಗಢ!
ಕನ್ನಡಿಗ ಕೆ.ಎಲ್. ರಾಹುಲ್ ತಮ್ಮ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ್ದು, ರಾಜಸ್ಥಾನ ತಂಡದ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಪರವಾಗಿ ಕೆ.ಎಲ್. ರಾಹುಲ್ ಭರ್ಜರಿ ಅರ್ಧಶತಕ ಗಳಿಸಿದ್ದಾರೆ. ಕೇವಲ 11 ರನ್‌ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ, ಕೆ.ಎಲ್. ರಾಹುಲ್ ನೆರವಾಗಿ ಭರ್ಜರಿ ಸಿಕ್ಸರ್ & ಬೌಂಡರಿ ಬಾರಿಸಿದರು. ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡ ಮೊದಲಿಗೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಲಖನೌ ಸೂಪರ್ ಜೈಂಟ್ಸ್ ತಂಡ, ಮ್ಯಾಚ್ ಶುರುವಾದಾಗ ತೀವ್ರ ಆಘಾತ ಅನುಭವಿಸಿತ್ತು. ಕೇವಲ 8 ರನ್ ಆಗಿದ್ದಾಗ ಮೊದಲ ವಿಕೆಟ್ ಹಾಗೂ 11 ರನ್‌ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ನಮ್ಮ ಕನ್ನಡಿಗ ಕೆ.ಎಲ್. ರಾಹುಲ್ ಅವರು ನೆರವಾಗಿ ನಿಂತರು. ಹೀಗೆ ನೋಡ ನೋಡುತ್ತಲೇ ಅರ್ಧ ಶತಕ ಬಾರಿಸಿದ ಕೆ.ಎಲ್. ರಾಹುಲ್, ರಾಜಸ್ಥಾನ ರಾಯಲ್ಸ್ ತಂಡದ ಬೌಲರ್‌ಗಳ ಚಳಿ ಬಿಡಿಸಿದರು.
ಕನ್ನಡಿಗ ಕೆ.ಎಲ್. ರಾಹುಲ್ ಅಬ್ಬರ! ಇತ್ತೀಚಿನ ವರದಿಗಳ ಮಾಹಿತಿ ಪ್ರಕಾರ ಕೆ.ಎಲ್. ರಾಹುಲ್ ಅವರು ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದು, 43 ಬಾಲ್ ಆಡಿ 71 ರನ್ ಗಳಿಸಿದ್ದಾರೆ. ಹಾಗೇ 8 ಬೌಂಡರಿ & 2 ಸಿಕ್ಸರ್ ಕೂಡ ಬಾರಿಸಿದ್ದಾರೆ ಕೆ.ಎಲ್. ರಾಹುಲ್. ಮತ್ತೊಂದು ಕಡೆ ಕೆ.ಎಲ್. ರಾಹುಲ್ ಅವರ ಸೂಪರ್ ಬ್ಯಾಟಿಂಗ್‌ಗೆ ದೀಪಕ್ ಹೂಡ ಕೂಡ ಸಾಥ್ ನೀಡಿದ್ದರು. ಆದರೆ 31 ಬಾಲ್ ಆಡಿ 50 ರನ್ ಗಳಿಸಿದ್ದ ದೀಪಕ್ ಹೂಡ ಔಟಾಗಿದ್ದು, ಇದೀಗ ಕೆ.ಎಲ್. ರಾಹುಲ್ ರಾಜಸ್ಥಾನದ ವಿರುದ್ಧ ಭರ್ಜರಿ ಆಟ ಮುಂದುವರಿಸಿದ್ದಾರೆ. ಹಾಗೇ ರಾಜಸ್ಥಾನ ರಾಯಲ್ಸ್ ವಿರುದ್ಧ ಲಖನೌ ತಂಡ 200 ರನ್‌ಗಳ ಗುರಿ ನೀಡುವ ಹುಮ್ಮಸ್ಸಿನಲ್ಲಿದೆ. ಕೊನೇ ಹಂತದಲ್ಲಿ ಬಿತ್ತು ವಿಕೆಟ್! ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಉತ್ತಮ ಗುರಿಯತ್ತ ಕೊಂಡೊಯ್ಯುತ್ತಿದ್ದ ಕೆ.ಎಲ್. ರಾಹುಲ್, 18ನೇ ಓವರ್‌ನಲ್ಲಿ ಆವೇಶ್ ಖಾನ್ ಅವರ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಕೆ.ಎಲ್. ರಾಹುಲ್ ಔಟಾಗಿ ಪೆವಿಲಿಯನ್ ಹಾದಿ ಹಿಡಿದಾಗ ಲಖನೌ ಸೂಪರ್ ಜೈಂಟ್ಸ್ ಟೀಂ 173 ರನ್ ಗಳಿಸಿತ್ತು. 48 ಬಾಲ್ ಆಡಿ 76 ರನ್ ಗಳಿಸಿದ ರಾಹುಲ್, 8 ಬೌಂಡರಿ ಹಾಗೂ 2 ಸಿಕ್ಸರ್ ಕೂಡ ಬಾರಿಸಿದ್ದಾರೆ. ಈ ಮೂಲಕ ರಾಜಸ್ಥಾನ ರಾಯಲ್ಸ್ ತಂಡ ಒಂದಷ್ಟು ಈಗ ನಿಟ್ಟುಸಿರು ಬಿಟ್ಟಿದೆ.