ಕನ್ವರ್ ಯಾತ್ರೆ ವಿವಾದ: ಮಧ್ಯಂತರ ತಡೆ ವಿಸ್ತರಣೆ

ಕನ್ವರ್ ಯಾತ್ರೆ ವಿವಾದ: ಮಧ್ಯಂತರ ತಡೆ ವಿಸ್ತರಣೆ

ನವದೆಹಲಿ, ಜು. 26: ಕನ್ವರ್ ಯಾತ್ರೆ ಮಾರ್ಗದಲ್ಲಿನ ಹೋಟೆಲ್ ಮಾಲೀಕರ ಹೆಸರು ಪ್ರದರ್ಶಿಸಬೇಕು ಎಂಬ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ನೀಡಿದ್ದ ನಿರ್ದೇಶನದ ಮಧ್ಯಂತರ ತಡೆಯನ್ನು ಸುಪ್ರೀಂ ಕೋರ್ಟ್ ಇಂದು ವಿಸ್ತರಿಸಿದೆ. “ಯಾರನ್ನೂ ಬಲವಂತವಾಗಿ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ. ನಾಮಫಲಕ ಪ್ರದರ್ಶನ ನಿರ್ದೇಶನವು, ಕನ್ವರ್ ಯಾತ್ರೆಯ ಮಾರ್ಗದಲ್ಲಿರುವ ಉಪಾಹಾರ ಗೃಹಗಳು ತಮ್ಮ ಸೈನ್‌ಬೋರ್ಡ್‌ನಲ್ಲಿ ಮಾಲೀಕರು ಮತ್ತು ಉದ್ಯೋಗಿಗಳ ಹೆಸರನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿದೆ.
ಈ ಆದೇಶವು ಮುಸ್ಲಿಮರು ಮತ್ತು ತಳ ಸಮುದಾಯಕ್ಕೆ ಸೇರಿದವರ ವಿರುದ್ಧ ತಾರತಮ್ಯದಿಂದ ಕೂಡಿದೆ ಎಂದು ವಿರೋಧ ಪಕ್ಷದ ಇಂಡಿಯಾ ಬ್ಲಾಕ್ ಸದಸ್ಯರು ಸೇರಿದಂತೆ, ಎನ್‌ಡಿಎ ಮಿತ್ರಪಕ್ಷಗಳು ಕೂಡ ವಿರೋಧ ವ್ಯಕ್ತಪಡಿಸಿದ್ದವು. ಜುಲೈ 22 ರಂದು ಸುಪ್ರೀಂ ಕೋರ್ಟ್ ಸರ್ಕಾರದ ನಿರ್ದೇಶನಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತು.
ಉತ್ತರ ಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ತನ್ನ ನಿರ್ದೇಶನವನ್ನು ಸಮರ್ಥಿಸಿಕೊಂಡಿತು. ಯಾತ್ರೆಯ ಅವಧಿಯಲ್ಲಿ ಅವರು ಸೇವಿಸುವ ಆಹಾರದ ಬಗ್ಗೆ ಗ್ರಾಹಕರು/ಕನ್ವಾರಿಯಾ ಅವರ ಪಾರದರ್ಶಕತೆ ಮತ್ತು ತಿಳುವಳಿಕೆಯುಳ್ಳ ಆಯ್ಕೆಯನ್ನು ಖಚಿತಪಡಿಸಿಕೊಳ್ಳುವುದು, ಅವರ ಧಾರ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಭಕ್ತರ ನಂಬಿಕೆಗಳಿಗೆ ಘಾಸಿ ಆಗಬಾರದು ಎಂಬುದು ನಿರ್ದೇಶನ ಹಿಂದಿನ ಉದ್ದೇಶ” ಎಂದು ಹೇಳಿತ್ತು.
ಸರ್ಕಾರವು “ಆಹಾರ ಮತ್ತು ಸುರಕ್ಷತಾ ಮಾನದಂಡಗಳ (ಆಹಾರ ವ್ಯವಹಾರಗಳ ಪರವಾನಗಿ ಮತ್ತು ನೋಂದಣಿ (ನಿಯಮಗಳು), 2011” ಪ್ರಸ್ತಾಪಿಸಿ ಗಮನ ಸೆಳೆಯುವ ಮೂಲಕ ನ್ಯಾಯಾಲಯದ ಮುಂದೆ ಅಫಿಡವಿಟ್ ಸಲ್ಲಿಸಿತು. ಎಲ್ಲ ಸಣ್ಣ ಆಹಾರ ವ್ಯವಹಾರಗಳ ನೋಂದಣಿ ಅಗತ್ಯವಿದೆ ಮತ್ತು ಮಾಲೀಕರ ಫೋಟೋ ಐಡಿ, ನೋಂದಣಿ ಪ್ರಮಾಣಪತ್ರವನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿ ಎಂದು ಹೇಳಿದೆ. ತನ್ನ ಅಫಿಡವಿಟ್‌ನಲ್ಲಿ, ಯುಪಿ ಸರ್ಕಾರವು ತನ್ನ ನಿರ್ದೇಶನವನ್ನು ವಿರೋಧಿಸುವ ಅರ್ಜಿಗಳನ್ನು ಪ್ರಶ್ನಿಸಿದೆ.
“ಕನ್ವಾರಿಯಾಗಳು ಕಟ್ಟುನಿಟ್ಟಾದ ಸಸ್ಯಾಹಾರಿ, ಸಾತ್ವಿಕ ಆಹಾರವನ್ನು ಅನುಸರಿಸುತ್ತಾರೆ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಇತರ ಎಲ್ಲ ತಾಮಸಿಕ ಆಹಾರಗಳನ್ನು ತ್ಯಜಿಸುತ್ತಾರೆ; ಸಾತ್ವಿಕ್ ಆಹಾರ ಎಂದರೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದೆ ಆಹಾರವನ್ನು ತಯಾರಿಸುವುದು ಎಂದರ್ಥವಲ್ಲ. ಆದರೆ, ಉಪವಾಸ ಸಮಾರಂಭಗಳನ್ನು ಕೈಗೊಳ್ಳುವಾಗ ಇತರ ಹಬ್ಬಗಳಲ್ಲಿ ಫಲಹಾರದಂತೆಯೇ ಆಹಾರವನ್ನು ತಯಾರಿಸುವ ವಿಧಾನವೂ ಆಗಿದೆ” ಎಂದು ಯುಪಿ ಸರ್ಕಾರ ಹೇಳಿದೆ.

Previous Post
ದುರುದ್ದೇಶದಿಂದ ಮಾನನಷ್ಟ ಮೊಕದ್ದಮೆ: ರಾಹುಲ್ ಗಾಂಧಿ
Next Post
ಅಗ್ರಗಣ್ಯ ಮಿತ್ರರಾಷ್ಟ್ರವಾಗಿ ಭಾರತವನ್ನು ಪರಿಗಣಿಸುವ ಮಸೂದೆ ಅಮೆರಿಕ ಸೆನೆಟ್ ನಲ್ಲಿ ಮಂಡನೆ

Recent News