ಕರ್ನಾಟಕಕ್ಕೆ ಬರುವ ಹೂಡಿಕೆಯನ್ನು ಗುಜರಾತ್ ಗೆ ವರ್ಗ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಿ‌.ಟಿ ರವಿ ಆಕ್ರೋಶ

ಕರ್ನಾಟಕಕ್ಕೆ ಬರುವ ಹೂಡಿಕೆಯನ್ನು ಗುಜರಾತ್ ಗೆ ವರ್ಗ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಿ‌.ಟಿ ರವಿ ಆಕ್ರೋಶ

ನವದೆಹಲಿ : ಕರ್ನಾಟಕಕ್ಕೆ ಬರುವ ಹೂಡಿಕೆಯನ್ನು ಗುಜರಾತ್ ಗೆ ಪ್ರಧಾನಮಂತ್ರಿ ಕಚೇರಿಯ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿರುದ್ಧ ಆಕ್ರೋಶ ಹೊರ ಹಾಕಿರುವ ಪರಿಷತ್ ಸದಸ್ಯ ಸಿ.ಟಿ ರವಿ ಈ ಬಗ್ಗೆ 24 ಗಂಟೆಯಲ್ಲಿ ದಾಖಲೆ ಸಹಿತ ಮಾಹಿತಿ ಬಿಡುಗಡೆ ಮಾಡದಿದ್ದರೆ ಬಹಿರಂಗ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, ಎರಡು ದಿನದ ಹಿಂದೆ ಸಚಿವ ಪ್ರಿಯಾಂಕಾ ಖರ್ಗೆ ಅವರು ಆರೋಪ ಮಾಡಿದ್ದಾರೆ ಕರ್ನಾಟಕಕ್ಕೆ ಬರುವ ಹೂಡಿಕೆಯನ್ನು ಗುಜರಾತ್ ಗೆ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ. ಇದು ಬೀದಿ ಬಳಿ ಆರೋಪ ನಾ, ಗಂಭೀರ ಆರೋಪ ನಾ? ಇದರಲ್ಲಿ ರಾಜ್ಯದ ಹಿತದ ವಿಷಯ ಇದೆ ಹೀಗಾಗಿ ಸ್ಪಷ್ಟ ಹೇಳಿಕೆ ನೀಡಬೇಕು.

ರಾಜ್ಯ ಸರ್ಕಾರ ಯಾವ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು, ಇದಾದ ಬಳಿಕ ಯಾವ ಕಂಪನಿ ಗುಜರಾತ್ ಗೆ ಹೋಗಿದೆ ಪ್ರಧಾನಮಂತ್ರಿ ಕಾರ್ಯಲಯದ ಯಾವ ಅಧಿಕಾರಿ ಈ‌ ಕೆಲಸ ಮಾಡಿದ್ದಾರೆ ದಾಖಲೆ ಸಹಿತ ಹೇಳಬೇಕು ಪ್ರಧಾನಮಂತ್ರಿ ಮತ್ತು ಅವರ ಕಚೇರಿ ಮೇಲೆ ಆರೋಪ ಮಾಡುವಾಗ ನಿರ್ದಿಷ್ಟವಾಗಿ ಹೇಳಬೇಕು ಗಾಳಿಯಲ್ಲಿ ಗುಂಡು ಹೊಡೆಯಬಾರದು ನಿಮ್ಮ ಹತ್ರ ಏನು ಆಧಾರ ಇದೆ ತೋರಿಸಬೇಕು ಇಲ್ಲವೇ ಬೇಜಬ್ದಾರಿ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಹೀಗೆ ಹೇಳಿಕೆ ನೀಡುವುದು ಚಟವಾಗಿ ಪರಿಣಮಿಸಿದರೆ ನಿಮ್ಮನ್ನು ಯಾರು ಗಂಭೀರವಾಗಿ ಪರಿಗಣಿಸಲ್ಲ. ವಿದ್ಯುತ್, ನೀರು, ಭೂಮಿ ಮೂಲ ಸೌಕರ್ಯ ನೀಡದ ಕಾರಣ ಕಂಪನಿಗಳು ಬೇರೆ ಕಡೆಗೆ ಹೋಗುತ್ತಿವೆ. ಭಕಾಸುರನಂತೆ ನುಂಗಲು ರಾಜ್ಯದಲ್ಲಿ ಕಾಯುತ್ತಿದ್ದಾರೆ ಅದನ್ನು ನೋಡಿ ಹೂಡಿಕೆ ಮಾಡುವುವರು ಹೆದರಿ ಓಡಿ ಹೊಗುತ್ತಿದ್ದಾರೆ.

ನಿಮ್ಮ ಹೇಳಿಕೆ ಗಂಭೀರವಾಗಿದ್ದರೆ ಮಾಹಿತಿ ಸ್ಪಷ್ಟ ಪಡಿಸಬೇಕು, ಸುಳ್ಳು ಹೇಳಿದರೆ ನಿಮ್ಮದೇ ಫ್ಯಾಕ್ಟ್ ಚೆಕ್ ಸಮಿತಿ ಮುಂದೆ ನಿಮ್ಮನ್ನು ಪರಿಶೀಲನೆಗೆ ಒಳಪಡಿಸಬೇಕಾಗುತ್ತದೆ, ಸುಳ್ಳು ಹೇಳಿದ್ದರೆ ಸಿಎಂ ಕ್ರಮ ತೆಗೆದುಕೊಳ್ಳಬೇಕು, ಸತ್ಯವಾಗಿದ್ದರೆ ಇಡೀ ರಾಜ್ಯ ನಿಮ್ಮ ಜೊತೆಗೆ ನಿಲ್ಲಲಿದೆ. ಕುಣಿಯದೇ ನೆಲ ಡೊಂಕು ಎನ್ನುವಂತೆ ಹುಳುಕು ಮುಚ್ಚಿಕೊಳ್ಳಲು ಇದನ್ನು ಹೇಳುತ್ತಿದ್ದಾರೆ ಹೀಗಾಗೀ 24 ಗಂಟೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದರು‌.

Previous Post
ರಾಜಕೀಯ ಮರೆತು ರಾಜ್ಯಕ್ಕಾಗಿ ಕೆಲಸ ಮಾಡೊಣ ಸಂಸದರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ
Next Post
ಪ್ರಜಾಪ್ರಭುತ್ವದ ತಾಯಿಯಾಗಿರಲು ನಾವು ಹೆಮ್ಮೆಪಡಬೇಕು ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ

Recent News