ಕರ್ನಾಟಕ ಕಾಂಗ್ರೇಸ್ ಸರ್ಕಾರ ಓಬಿಸಿ ಮೀಸಲಾತಿ ಕಿತ್ತು ಮುಸ್ಲಿಂಮರಿಗೆ ನೀಡಿದೆ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಕರ್ನಾಟಕ ಕಾಂಗ್ರೇಸ್ ಸರ್ಕಾರ ಓಬಿಸಿ ಮೀಸಲಾತಿ ಕಿತ್ತು ಮುಸ್ಲಿಂಮರಿಗೆ ನೀಡಿದೆ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಭೋಪಾಲ್‌: ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಡಾ.ಬಿಆರ್ ಅಂಬೇಡ್ಕರ್ ಅವರ ನಿಲುವುಗಳನ್ನು ಬದಿಗೊತ್ತಿ ಸಂವಿಧಾನದ ವಿರುದ್ಧವಾಗಿ, ಅನ್ಯಾಯವಾಗಿ ಇತರೇ ಹಿಂದುಳಿದ ವರ್ಗದ ಮೀಸಲಾಯಿತಿಯನ್ನು ಮುಸ್ಲಿಮರಿಗೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಮಧ್ಯಪ್ರದೇಶದ ಮೊರೇನಾದಲ್ಲಿ ನಡೆದ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ರಾತ್ರೋರಾತ್ರಿ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದ ಎಲ್ಲ ವರ್ಗವನ್ನು ಒಬಿಸಿಗೆ ಸೇರಿಸಿ ಆದೇಶ ಹೊರಡಿಸಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮಾನ್ಯತೆ ನೀಡುವ ಮೂಲಕ ಒಬಿಸಿ ಜನರ ಅವಕಾಶಗಳನ್ನು ಕಳ್ಳತನದಿಂದ ಕಿತ್ತುಕೊಂಡಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಂವಿಧಾನ ಮತ್ತು ಕಾನೂನು ವಿರುದ್ಧವಾಗಿ ಒಬಿಸಿ ಮೀಸಲಾತಿಯನ್ನು ನೀಡಲಾಗಿದೆ. ಒಬಿಸಿ ಸಮುದಾಯಕ್ಕೆ ಸಿಗುವ ಲಾಭವನ್ನು ಲೂಟಿ ಮಾಡಿ ಅವರಿಗೆ ನೀಡಲಾಗಿದೆ ಎಂದು ವಾಗ್ದಾಳಿ ನಡೆಸಿದರು. ಸಂವಿಧಾನ ರಚಿಸುವ ವೇಳೆ ತಿಂಗಳುಗಳ ಕಾಲ ಚರ್ಚೆ ನಡೆಸಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಬಾರದು ಎಂದು ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಕಾಂಗ್ರೆಸ್ ಮೋಸ ಮಾಡಿ ಹಿಂಬಾಗಿಲಿನಿಂದ ಧರ್ಮ ಆಧಾರಿತ ಮೀಸಲಾತಿ ನೀಡಿದೆ. ವೋಟು ಬ್ಯಾಂಕ್, ತುಷ್ಟೀಕರಣ ಮುಳುಗಿರುವ ಕಾಂಗ್ರೆಸ್ ಕರ್ನಾಟಕದ ಇದೇ ಮಾದರಿಯನ್ನು ಇಡೀ ದೇಶದಲ್ಲಿ ಅನುಷ್ಠಾನಕ್ಕೆ ತರಲು ಮುಂದಾಗಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಹಿಂದುಳಿದ, ದಲಿತರ, ಆದಿವಾಸಿಗಳ ಹಕ್ಕುಗಳನ್ನು ಕಿತ್ತುಕೊಳ್ಳುವ ಷಡ್ಯಂತ್ರವನ್ನು ಬಹಳ ಹಿಂದಿನಿಂದಲೂ ಮಾಡುತ್ತಾ ಬಂದಿದೆ. ಹಿಂಬಾಗಿಲಿನಿಂದ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವ ಪ್ರಯತ್ನ ಮಾಡುತ್ತಿದೆ. 2014 ರಿಂದ ಒಬಿಸಿ ಸಮುದಾಯ ಎಚ್ಚೆತ್ತುಕೊಂಡ ಬಳಿಕ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರ ಇಟ್ಟಿದೆ. ಆದರೆ ಕಾಂಗ್ರೆಸ್ ಇನ್ನು ಸುಧಾರಿಸಿಲ್ಲ. ಕನಸು ಈಡೇಸಿಕೊಳ್ಳಲು ಈಗಲೂ ಪ್ರಯತ್ನ ಮುಂದುವರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Previous Post
ರಾಯ್ ಬರೇಲಿಯಿಂದ ಪ್ರಿಯಾಂಕ, ಅಮೇಥಿಯಿಂದ ರಾಹುಲ್ ಗಾಂಧಿ ಸ್ಪರ್ಧೆ ಬಹುತೇಕ ಖಚಿತ
Next Post
ಕರ್ನಾಟಕ ಸೇರಿ 13 ರಾಜ್ಯಗಳಲ್ಲಿ ಇಂದು ಎರಡನೇ ಹಂತದ ಮತದಾನ ರಾಜ್ಯದ 14 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ

Recent News