ಕಾಲೇಜು ಕಟ್ಟಡದಿಂದ ಜಿಗಿದು ಟ್ರೈನಿ ವೈದ್ಯೆ ಆತ್ಮಹತ್ಯೆ

ಕಾಲೇಜು ಕಟ್ಟಡದಿಂದ ಜಿಗಿದು ಟ್ರೈನಿ ವೈದ್ಯೆ ಆತ್ಮಹತ್ಯೆ

ಚೆನ್ನೈ, ಆ. 2: ತಮಿಳುನಾಡಿನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ ಟ್ರೈನಿ ವೈದ್ಯೆಯೊಬ್ಬರು ಕ್ಯಾಂಪಸ್‌ನಲ್ಲಿರುವ ಕಟ್ಟಡದ ಐದನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ್ದಾರೆ. ಕಾಂಚಿಪುರಂ ಜಿಲ್ಲೆಯ ಖಾಸಗಿ ಆಸ್ಪತ್ರೆ ಮೀನಾಕ್ಷಿ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. 23 ವರ್ಷದ ಶೆರ್ಲಿನ್, ತಿರುನಲ್ವೇಲಿ ಮೂಲದವರಾಗಿದ್ದು, ಸಂಸ್ಥೆಯಲ್ಲಿ ಐದನೇ ವರ್ಷದ ವಿದ್ಯಾರ್ಥಿ ಮತ್ತು ತರಬೇತಿ ವೈದ್ಯರಾಗಿದ್ದರು. ಭಾನುವಾರ ರಾತ್ರಿ, ಐದನೇ ಮಹಡಿಯ ಕಿಟಕಿಯ ಹಲಗೆಯ ಹೊರಗೆ ಬಹಳ ಹೊತ್ತು ಕುಳಿತಿದ್ದ ಇತರ ವಿದ್ಯಾರ್ಥಿಗಳ ಕ್ಯಾಮರಾದಲ್ಲಿ ಸೆರೆಯಾಗಿದೆ.

ಯಾರಾದರೂ ಅವಳನ್ನು ಸಂಪರ್ಕಿಸುವ ಅಥವಾ ಮಾತನಾಡುವ ಮೊದಲು, ಶೆರ್ಲಿನ್ ಹಾರಿದ್ದಾರೆ ಎಂದು ವರದಿಯಾಗಿದೆ. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಶೆರ್ಲಿನ್ ಖಿನ್ನತೆಗೆ ಒಳಗಾಗಿದ್ದರು ಎಂದು ಪ್ರಾಥಮಿಕ ಮಾಹಿತಿಗಳು ಸೂಚಿಸಿವೆ. ಈ ಕುರಿತು ಸ್ಥಳೀಯ ಪೊಲೀಸರು ವಿವರವಾದ ತನಿಖೆ ಆರಂಭಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇತ್ತೀಚೆಗಷ್ಟೇ ಕೋಲ್ಕತ್ತಾದ ಆರ್​ಜಿ ಕರ್ ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣ ಇನ್ನೂ ಜನರ ಮನಸ್ಸಿಂದ ಮಾಸಿಲ್ಲ, ಇದೀಗ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಾವಿನ ನಿರ್ಧಾರ ತೆಗೆದುಕೊಳ್ಳಲು ಅವರಿಗಿದ್ದ ಕಾರಣಗಳ ಬಗ್ಗೆ ತನಿಖೆ ಆರಂಭವಾಗಿದೆ

Previous Post
ಮುಸ್ಲಿಮರನ್ನು ಹುಡುಕಿ ಕೊಲ್ತೇವೆ ಎಂದ ಬಿಜೆಪಿ ಶಾಸಕ: ದೂರು ದಾಖಲು
Next Post
ಸೆಬಿ ಅಧ್ಯಕ್ಷೆ ವಿರುದ್ಧ ಕಾಂಗ್ರೇಸ್ ಗಂಭೀರ ಆರೋಪ

Recent News