ಕುಡಿಯುವ ನೀರಿಗಾಗಿ ಜನ ಮತ ಹಾಕಿದ್ದಾರೆ ಬೆಂಗಳೂರಿಗೆ ಕುಡಿಯುವ ನೀರು ಕೊಡಿ – ಹೆಚ್.ಡಿ ದೇವೇಗೌಡ ಮನವಿ

ಕುಡಿಯುವ ನೀರಿಗಾಗಿ ಜನ ಮತ ಹಾಕಿದ್ದಾರೆ ಬೆಂಗಳೂರಿಗೆ ಕುಡಿಯುವ ನೀರು ಕೊಡಿ – ಹೆಚ್.ಡಿ ದೇವೇಗೌಡ ಮನವಿ

ನವದೆಹಲಿ : ಬೆಂಗಳೂರು ಬೆಳೆಯುತ್ತಿರುವ ನಗರ ಅದಕ್ಕೆ ಕುಡಿಯುವ ನೀರಿನ ಅಗತ್ಯವಿದೆ, ಜನರು ಕುಡಿಯುವ ನೀರಿಲ್ಲದೇ ಸಂಕಷ್ಟದಲ್ಲಿದ್ದಾರೆ, ನೀರಿಲ್ಲದೇ ತತ್ತರಿದ್ದ ವೇಳೆ ಒಂದು ಟಿಎಂಸಿ ನೀರು ಹರಿಸಲು CWRC ಹೇಳಿತ್ತು, ಮಳೆಯಿಂದ ಈಗ ಎಲ್ಲವೂ ಸುಗಮವಾಗಿದೆ, ಮಳೆ ಬರದಿದ್ದರೇ ನಮ್ಮ ಪರಿಸ್ಥಿತಿ ಏನು ಹೇಳಿ ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಪ್ರಶ್ನಿಸಿದ್ದಾರೆ.

ಬಜೆಟ್ ಮೇಲೆ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ನಾನು ಸಾಕಷ್ಟು ನೀರಿನ ವ್ಯಾಜ ಬಗೆಹರಿಸಿದ್ದೇನೆ, ಮುಂದಿನ ಬಜೆಟ್ ಬಗ್ಗೆ ಮಾತನಾಡಲು ಇರ್ತಿನೊ ಇಲ್ವೊ ಗೊತ್ತಿಲ್ಲ. ನೀರಿನ ಸಮಸ್ಯೆ ಹಿನ್ನಲೆ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಜನರು ಎನ್‌ಡಿಎ ಬೆಂಬಲಿಸಿದ್ದಾರೆ. ಹಳೆ ಮೈಸೂರು ಭಾಗ ಮತ್ತು ಬೆಂಗಳೂರಿಗೆ ಕಾವೇರಿಯೇ ಆಧಾರ, ಕುಡಿಯುವ ನೀರು ಕೊಡುವ ಭರವಸೆ ಮೇಲೆ ಜನರು ಎನ್‌ಡಿಎಗೆ ಮತ ಹಾಕಿದ್ದಾರೆ, ಹಣಕಾಸು ಸಚಿವರು ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ ಇಲ್ಲಿ ನಾನು ಯಾರನ್ನು ದೋಷಿಸುವುದಿಲ್ಲ ಬೆಂಗಳೂರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡಿದರು.

ಬಜೆಟ್ ಬಗ್ಗೆ ಮಾತನಾಡಿದ ಅವರು, ನಾನು ಹೃದಯಪೂರ್ವಕವಾಗಿ ಬಜೆಟ್ ಬೆಂಬಲಿಸುತ್ತೇನೆ. ನಾನು 1991 ರಲ್ಲಿ ಸಂಸತ್ ಗೆ ಬಂದೆ ಈಗ ನನಗೆ 92 ವರ್ಷ ಮುಂದಿನ ಬಜೆಟ್ ಬಗ್ಗೆ ಮಾತಮಾಡ್ತಿನೋ ಇಲ್ಲವೊ ಗೊತ್ತಿಲ್ಲ, ನಾನು ಹಿಂದೆ ಮೋದಿ ಅವರನ್ನು ವಿರೋಧಿಸಿದ್ದೆ ಆದರೆ ಈಗ ನಾನು ಎನ್‌ಡಿಎ ಭಾಗವಾಗಿದ್ದೇನೆ ಅದಕ್ಕಾಗಿ ಜೆ.ಪಿ ನಡ್ಡಾ ಅವರಿಗೆ ಧನ್ಯವಾದಗಳು

ನಾನು ಕೃಷಿ ಮತ್ತು ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡುತ್ತೇನೆ, ಪ್ರಧಾನಿ ನರೇಂದ್ರ ಮೋದಿ ಬದ್ಧತೆ ಇರುವ ವ್ಯಕ್ತಿಯನ್ನು ಕೃಷಿಗೆ ಸಚಿವರನ್ನಾಗಿ ಮಾಡಿದ್ದಾರೆ, ಉತ್ತಮ‌ ಅನುಭವ ಇರುವ ತಂಡವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಹತ್ತು ವರ್ಷ ಸಿಎಂ ಆಗಿದ್ದಾಗ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಬೇರೆ ರಾಜ್ಯಗಳಲ್ಲಿ ಹೋಲಿಸಿದರೆ ಅತ್ಯುತ್ತಮ ಮಾದರಿ ರಾಜ್ಯ ಗುಜರಾತ್ ಆಗಿದೆ.

ಮೈತ್ರಿ ಸರ್ಕಾರವನ್ನು ನಡೆಸುವುದು ತುಂಬಾ ಕಷ್ಟ, ನಾನು ಮೈತ್ರಿ ಸರ್ಕಾರವನ್ನು ನಡೆಸಿದ್ದೇನೆ ಆದರೆ ನರೇಂದ್ರ ಮೋದಿ ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೇ ಜವಬ್ದಾರಿ ನಿಭಾಯಿಸಿದ್ದಾರೆ ಸ್ಪೀಕರ್ ಆಯ್ಕೆಯಿಂದ ಹಿಡಿದು ಅವರ ಪ್ರಮುಖ ನಿರ್ಧಾರಗಳಲ್ಲಿ ಯಾರು ಆಕ್ಷೇಪ ವ್ಯಕ್ತಪಡಿಸಿಲ್ಲ. ಕರ್ನಾಟಕದಲ್ಲಿ ಎರಡು ಸೀಟು ಮಾತ್ರ ನಮ್ಮ ಶಕ್ತಿ ಅದಾಗ್ಯೂ ಪರಿಗಣಿಸಿ ಒಂದು ಸಂಪುಟ ದರ್ಜೆ ಸ್ಥಾನ ನೀಡಿದ್ದಾರೆ

ವೈಜ್ಞಾನಿಕ ಬಜೆಟ್ ಇದು, ಮಹಿಳೆಯರು, ಬಡವರು, ಯುವಕರು, ರೈತರ ಪರವಾಗಿ ಬಜೆಟ್ ಮಂಡಿಸಿದೆ, ಕೃಷಿಯಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಲು ಒತ್ತು ನೀಡಿದೆ ಹಂಚಿಕೆ ಸರಪಳಿ ಬಲಿಷ್ಠಗೊಳಿಸಲು ಕ್ರಮ ತೆಗೆದುಕೊಂಡಿದೆ ಯುವಕರಿಗೆ ಇಂರ್ಟನಶಿಪ್ ನಲ್ಲಿ ಮೊದಲ ತಿಂಗಳ ಸಂಬಂಳ ನೀಡಲಾಗುತ್ತಿದೆ ಉದ್ಯೋಗ ಹೆಚ್ಚಿಸಲು ಸರ್ಕಾರ ಆದ್ಯತೆ ನೀಡಿದೆ. ಯುವಕರಲ್ಲಿ ಕೌಶಲ್ಯಯುತರಾಗಿ ಮಾಡಲು ವ್ಯಯ ಮಾಡುತ್ತಿದೆ ಎಂದು ಶ್ಲಾಘಿಸಿದರು.

Previous Post
ಜಿಲ್ಲಾ ನ್ಯಾಯಾಧೀಶರು ಸಮಿತಿಯ ಭಾಗವಾಗಿರಲಿ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಮೇಲ್ವಿಚಾರಣಾ ಸಮಿತಿ ರಚನೆಗೆ ನಿರ್ದೇಶನ
Next Post
ಬಿಹಾರದಲ್ಲಿ ಮೀಸಲಾತಿ ಹೆಚ್ಚಿಸಿದ್ದ ನಿತೀಶ್‌ಗೆ ಹಿನ್ನಡೆ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡದ ಸುಪ್ರೀಂ

Recent News