ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಬೇಕೇ ಬೇಡವೇ ನೀವೆ ನಿರ್ಧರಿಸಿ ಗೊಂದಲ ಬಗೆಹರಿಸಲು ಎಐಸಿಸಿ ಅಧ್ಯಕ್ಷ ಖರ್ಗೆಗೆ ಡಿ.ಕೆ ಶಿವಕುಮಾರ್ ಮನವಿ

ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಬೇಕೇ ಬೇಡವೇ ನೀವೆ ನಿರ್ಧರಿಸಿ ಗೊಂದಲ ಬಗೆಹರಿಸಲು ಎಐಸಿಸಿ ಅಧ್ಯಕ್ಷ ಖರ್ಗೆಗೆ ಡಿ.ಕೆ ಶಿವಕುಮಾರ್ ಮನವಿ

ನವದೆಹಲಿ : ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ನಾನು ಮುಂದುವರಿಬೇಕೇ ಬೇಡವೇ ಎನ್ನವುದು ಸಾಧ್ಯವಾದಷ್ಟು ಬೇಗ ನೀವು ನಿರ್ಧರಿಸಿ, ಮುಂಬರುವ ಸ್ಥಳೀಯ ಚುನಾವಣೆಗಳ ದೃಷ್ಠಿಯಿಂದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕು ಎನ್ನುವುದು ನನ್ನ ಇಚ್ಛೆ ಅದಾಗ್ಯೂ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಮುಂದೆ ಮನವಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ದೆಹಲಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಭೇಟಿಯಾದ ಡಿ.ಕೆ ಶಿವಕುಮಾರ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನಾನು ಡಿಸಿಎಂ ಇರುವ ಹೊತ್ತಲೇ ಉದ್ದೇಶಪೂರ್ವಕವಾಗಿ ಹೆಚ್ಚುವರಿ ಡಿಸಿಎಂಗಳಿಗಾಗಿ ಡಿಮ್ಯಾಂಡ್ ಮಾಡಲಾಗುತ್ತಿದೆ, ಮಾಧ್ಯಮ ಹೇಳಿಕೆಗಳ ಮೂಲಕ ಗೊಂದಲ ಸೃಷ್ಠಿಸುವ ಪ್ರಯತ್ನ ನಡೆಯುತ್ತಿದೆ ಇದು ಸರಿಯಲ್ಲ.

ಇದರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಹೈಕಮಾಂಡ್ ಅಣತಿಯಂತೆ ನಾನು ಕೆಲಸ ಮಾಡುತ್ತಿದ್ದೇನೆ‌, ಲೋಕಸಭೆ ತನಕ ಮುಂದುವರಿಯಲು ಸೂಚಿಸಿದ್ದಿರಿ ಅದರಂತೆ ಕೆಲಸ ಮಾಡಿ ಮೈತ್ರಿ ಹೋರಾಟದ ನಡುವೆಯೂ ಉತ್ತಮ ಫಲಿತಾಂಶವನ್ನೂ ತಂದಿದ್ದೇನೆ, ಇನ್ನು ನಾನು ಮುಂದುವರಿಯಬೇಕೆ ಬೇಡವೇ ಎನ್ನುವುದು ನೀವೆ ತಿರ್ಮಾನಿಸಬೇಕು.

ಸ್ಥಳೀಯ ಚುನಾವಣೆ ಮುಗಿಯುವರೆಗೂ ನಾನು ಅಧ್ಯಕ್ಷ ಸ್ಥಾನದಲ್ಲಿ ಇರಬೇಕು ಎನ್ನುವುದು ನನ್ನ ಆಪೇಕ್ಷೆ. ಮುಂದುವರಿಸುವುದು ಬಿಡುವುದು ತಮ್ಮಗೆ ಬಿಟ್ಟಿದ್ದು, ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳಿ ಮತ್ತು ಅದಕ್ಕೂ ಮುನ್ನ ಬಹಿರಂಗ ಹೇಳಿಕೆ ಮೂಲಕ ಗೊಂದಲ ಸೃಷ್ಠಿಸುತ್ತಿರುವ ನಾಯಕರ ಬಾಯಿಗೆ ಬೀಗ ಹಾಕುವ ಅಗತ್ಯವಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ ಮೂಲಗಳು ಹೇಳಿವೆ.

ಡಿ.ಕೆ ಶಿವಕುಮಾರು ಮಾತು ಕೇಳಿಸಿಕೊಂಡ ಮಲ್ಲಿಕಾರ್ಜುನ್ ಖರ್ಗೆ ತಾಳ್ಮೆಯಿಂದ ಎಲ್ಲವನ್ನು ನಿಭಾಯಿಸಲು ಸೂಚನೆ ನೀಡಿದ್ದಾರೆ. ಬಹಿರಂಗ ಹೇಳಿಕೆಗೆ ಬ್ರೇಕ್ ಹಾಕುಲು ನಾನು ಸಿಎಂಗೆ ಸೂಚಿಸಿದ್ದೇನೆ, ನೀವು ಸರ್ಕಾರದ ಮೇಲೆ ನರಕಾತ್ಮಕ ಪರಿಣಾಮ ಬೀರದಂತೆ ತಾಳ್ಮೆಯಿಂದ ಕೆಲಸ ಮಾಡಿ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಏನು ಮಾಡಬೇಕು ನಾನು ಸೋನಿಯಾ, ರಾಹುಲ್ ಗಾಂಧಿ ಜೊತೆಗೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದ್ದಾರಂತೆ.

Previous Post
ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಪ್ರಮುಖ ಹೆದ್ದಾರಿ ಯೋಜನೆಗಳ ಕುರಿತು ಚರ್ಚೆ
Next Post
17 ವರ್ಷಗಳ ಬಳಿಕ ಭಾರತದ ಮಡಿಲಿಗೆ ಟಿ20 ವಿಶ್ವಕಪ್‌ ಟೀಂ ಇಂಡಿಯಾ ಆಟಗಾರರ ಅಭಿನಂದಿಸಿದ ಪ್ರಧಾನಿ ಮೋದಿ

Recent News