ಕೆಲವು ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಕೆಲವು ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ನವದೆಹಲಿ, ಏಪ್ರಿಲ್. 27: ಭಾರತೀಯ ಹವಾಮಾನ ಇಲಾಖೆಯು ಪಶ್ಚಿಮ ಬಂಗಾಳ ಮತ್ತು ಒಡಿಶಾದ ಹಲವು ಸ್ಥಳಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು, ಇದು ತಿಂಗಳ ಅಂತ್ಯದವರೆಗೆ ಜಾರಿಯಲ್ಲಿರಲಿದೆ. ಇದರ ಜೊತೆಗೆ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಕರ್ನಾಟಕದ ಒಳಭಾಗಗಳಿಗೆ ಆರೆಂಜ್ ಅಲರ್ಟ್ ಅನ್ನು ಘೋಷಿಸಲಾಗಿದೆ. ಮುಂದಿನ ಐದು ದಿನಗಳಲ್ಲಿ ಪೂರ್ವ ಮತ್ತು ದಕ್ಷಿಣ ಪರ್ಯಾಯದ್ವೀಪದ ಭಾರತದ ಮೇಲೆ ‘ಉಷ್ಣ ಅಲೆಯಿಂದ ತೀವ್ರ ಶಾಖದ ಅಲೆ ‘ ಪರಿಸ್ಥಿತಿಗಳು ಮುಂದುವರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಮುಂದಿನ ಎರಡು ದಿನಗಳಲ್ಲಿ ಪೂರ್ವ ಭಾರತದ ಮೇಲೆ ಮತ್ತು ನಂತರದ ಐದು ದಿನಗಳಲ್ಲಿ ಮಹಾರಾಷ್ಟ್ರ ಮತ್ತು ದಕ್ಷಿಣ ಪರ್ಯಾಯದ್ವೀಪದ ಭಾರತದ ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು 2-3 ° ಸೆಲ್ಸಿಯಸ್ ಅಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಏಪ್ರಿಲ್ 26 ರಿಂದ 29 ರವರೆಗೆ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಇದೇ ರೀತಿಯ ಹವಾಮಾನ ಪರಿಸ್ಥಿತಿಗಳು ವಾಯುವ್ಯ ಭಾರತದ ಬಯಲು ಪ್ರದೇಶಗಳಲ್ಲಿ ಏಪ್ರಿಲ್ 26 ರಿಂದ 28 ರವರೆಗೆ ಮತ್ತು ಪಕ್ಕದ ಮಧ್ಯ ಭಾರತದಲ್ಲಿ ಏಪ್ರಿಲ್ 26 ರಿಂದ 27 ರವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಭಾರತೀಯ ಹವಾಮಾನ ಇಲಾಖೆ ಮತ್ತು ವಿಶ್ವ ಹವಾಮಾನ ಸಂಸ್ಥೆ ಎರಡೂ 2024 ವರ್ಷ ಹೆಚ್ಚು ತಾಪಮಾನದ ವರ್ಷವಾಗಿ ದಾಖಲಾಗುವ ಸಾಧ್ಯತೆಯಿದೆ ಎಂದು ಒಪ್ಪಿಕೊಂಡಿದೆ. ದೇಸದಲ್ಲಿ ಬಿಸಿ ಗಾಳಿ, ಶಾಖದ ಲೆಗಳು ದಿನೇ ದಿನೇ ಹೆಚ್ಚಾಗುತ್ತಲೆ ಇವೆ. ಹವಾಮಾನ ಇಲಾಖೆಯು ಮೇ ವೇಳೆಗೆ ತಾಪಮಾನದಲ್ಲಿ ನಿರಂತರವಾಗಿ ಏರಿಕೆಯಾಗಲಿದೆ ಎಂದು ಭವಿಷ್ಯ ನುಡಿದಿದೆ. ಇದರ ಪರಿಣಾಮವಾಗಿ ತೀವ್ರ ಶಾಖದ ಅಲೆಗಳು ಉಂಟಾಗುತ್ತವೆ. ಉತ್ತರ ಮತ್ತು ಮಧ್ಯ ಭಾರತವನ್ನು ಕೇಂದ್ರೀಕರಿಸಿ ಮುಂಬರುವ ತಿಂಗಳುಗಳಲ್ಲಿ ಶಾಖದ ಅಲೆಗಳ ದಿನಗಳು ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಹೆಚ್ಚಾಗುವ ನಿರೀಕ್ಷೆಯಿದೆ.

Previous Post
ಕರ್ನಾಟಕ ಸೇರಿ 13 ರಾಜ್ಯಗಳಲ್ಲಿ ಇಂದು ಎರಡನೇ ಹಂತದ ಮತದಾನ ರಾಜ್ಯದ 14 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ
Next Post
ಉತ್ತರ ಪತ್ರಿಕೆಯಲ್ಲಿ ‘ಜೈ ಶ್ರೀ ರಾಮ್’ ಬರೆದ ವಿದ್ಯಾರ್ಥಿಗಳು, ಪಾಸು ಮಾಡಿದ ಪ್ರೊಫೆಸರ್!

Recent News