ಕೆ.ಎಸ್ ಈಶ್ವರಪ್ಪ‌ ವಿರುದ್ಧ ಬಿ‌ಎಸ್ ಯಡಿಯೂರಪ್ಪ ಅಸಮಧಾನ

ಕೆ.ಎಸ್ ಈಶ್ವರಪ್ಪ‌ ವಿರುದ್ಧ ಬಿ‌ಎಸ್ ಯಡಿಯೂರಪ್ಪ ಅಸಮಧಾನ

ನವದೆಹಲಿ : ಲೋಕಸಭೆ ಚುನಾವಣೆಗೆ ಪುತ್ರ ಕಾತೇಂಶ್ ಗೆ ಟಿಕೆಟ್ ಸಿಗದ ಹಿನ್ನಲೆ ಆಕ್ರೋಶಗೊಂಡಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ‌ ವಿರುದ್ಧ ವಾಗ್ದಾಳಿ ನಡೆಸಿದ್ದು ಈಶ್ವರಪ್ಪ ಅವರ ಈ ನಡೆಗೆ ಮಾಜಿ ಸಿಎಂ ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಹಿನ್ನಲೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಭೇಟಿ ವೇಳೆ ಬಿಎಸ್‌ವೈ ಆಕ್ರೋಶ ಹೊರ ಹಾಕಿದ್ದಾರೆ ಎಂದು ಮೂಲಗಳು ಹೇಳಿವೆ.

ಕಾಂತೇಶ್ ಟಿಕಟ್ ಕೊಡುವಂತೆ ನಾನು ನಿಮ್ಮಗೆ ಮನವಿ ಮಾಡಿದೆ, ನೀವು ಬಸವರಾಜ್ ಬೊಮ್ಮಾಯಿ ಹೆಸರು ಅಂತಿಮಗೊಳಿಸಿದ್ದೀರಿ ಆದರೆ ಈಗ ಈಶ್ವರಪ್ಪ ನನ್ನ ವಿರುದ್ಧ ಬಾಯಿಂಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ ಎನ್ಬಲಾಗಿದೆ. ಬಂಡಾಯ ಎದ್ದಿರುವ ಬೇರೆ ನಾಯಕರನ್ನು ನಾನು ನಿಭಾಯಿಸಬಲ್ಲೆ ಆದರೆ ಈಶ್ವರಪ್ಪ ಮನೆಗೆ ನಾನು ಹೋಗುವುದಿಲ್ಲ ಎಂದು ಬಿಎಸ್‌ವೈ ಹೇಳಿದಾರಂತೆ.

ಸಭೆ ಬಳಿಕ ಮಾತನಾಡಿದ ಅವರು, ಐದು ಕ್ಷೇತ್ರಗಳಿಗೆ ಅಭ್ಯರ್ಥಿಗ ಆಯ್ಕೆ ಬಗ್ಗೆ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಜೊತೆಗೆ ಸುಧೀರ್ಘ ಚರ್ಚೆಯಾಗಿದೆ ಪ್ರಧಾನಿ ಮೋದಿ ಜೊತೆಗೆ ಚರ್ಚೆ ಮಾಡಿ ಮಾರ್ಚ್ 22 ರಂದು ಘೋಷಣೆ ಮಾಡಲಿದ್ದಾರೆ. ಬಿಜೆಪಿ ಜೆಡಿಎಸ್ ಹೊಂದಾಣಿಕೆ ಹಿನ್ನಲೆ 28 ಕ್ಷೇತ್ರಗಳನ್ನು ಗೆಲ್ಲಲಿದ್ದೇವೆಪಟ್ಟಿ ಬಿಡುಗಡೆ ಬಳಿಕ ರಾಜ್ಯದ್ಯಾಂತ ಪ್ರವಾಸ ಆರಂಭಿಸುತ್ತೇವೆ ಎಂದರು.

ಬಂಡಾಯ ನಾಯಕರ ಬಗ್ಗೆ ಮಾತನಾಡಿ, ಸಂಸದ ಕರಡಿ ಸಂಗಣ್ಣ ಜೊತೆಗೆ ಮಾತನಾಡಿದ್ದೇನೆ, ಅವರು ನಿಷ್ಠಾವಂತ ಮುಖಂಡರು, ಅವರು ಬೇರೆ ಯಾವ ನಿರ್ಧಾರ ಮಾಡಬಾರದು ಮುಂದೆ ಅವರಿಗೆ ಸೂಕ್ತ ಸ್ಥಾನ ಮಾನ ನೀಡಲಾಗವುದು, ಈಶ್ವರಪ್ಪ ಅವರ ಬೇಜವ್ದಾರಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ ಚುನಾವಣಾ ಸಮಿತಿಯಲ್ಲಿ ಎಲ್ಲ ನಿರ್ಧಾರ ಆಗ್ತಾವೆ ಯಡಿಯೂರಪ್ಪ ವೈಯಕ್ತಿಕ ನಿರ್ಧಾರ ಅಲ್ಲ, ಎರಡು ಮೂರು ದಿನದಲ್ಲಿ ಅವರಿಗೆ ಅರ್ಥ ಆಗಲಿದೆ ಎಂದರು.

Previous Post
ಟೈಂ ಪಾಸ್ ಮಾಡುವುದು ಕಷ್ಟ ಅಂತಾ ಲೋಕಸಭೆಗೆ ಸ್ಪರ್ಧೆ ಡಾ.ಕೆ ಸುಧಾಕರ್ ವಿರುದ್ಧ ಎಸ್‌.ಅರ್ ವಿಶ್ವನಾಥ್ ಆರೋಪ
Next Post
ಟಿಕೆಟ್ ತಪ್ಪುವ ಭೀತಿ, ಕಣ್ಣಿರಿಟ್ಟ ವೀಣಾ ಕಾಶಪ್ಪನವರ್ ಜಯ ಮೃತ್ಯಂಜಯ ಸ್ವಾಮೀಜಿಯಿಂದಲೂ ಲಾಬಿ

Recent News