ಕೇಜ್ರಿವಾಲ್ ನ್ಯಾಯಾಂಗ ಬಂಧನ ಜು. 25ರವರೆಗೆ ವಿಸ್ತರಣೆ

ಕೇಜ್ರಿವಾಲ್ ನ್ಯಾಯಾಂಗ ಬಂಧನ ಜು. 25ರವರೆಗೆ ವಿಸ್ತರಣೆ

ನವದೆಹಲಿ, ಜು. 12: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣದಲ್ಲಿ ಜಾಮೀನು ಸಿಕ್ಕಿದೆಯಾದರೂ, ಹಗರಣಕ್ಕೆ ಸಂಬಂಧಿಸಿದ ಸಿಬಿಐ ಪ್ರಕರಣದಲ್ಲಿ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯ ಇಂದು ಜುಲೈ 25 ರವರೆಗೆ ವಿಸ್ತರಿಸಿದೆ. ರೋಸ್ ಅವೆನ್ಯೂ ನ್ಯಾಯಾಲಯವು ಸಿಎಂ ಕೇಜ್ರಿವಾಲ್ ವಿರುದ್ಧ ಸಲ್ಲಿಸಲಾದ ಪೂರಕ ಚಾರ್ಜ್ ಶೀಟ್ ನ ಪ್ರತಿಯನ್ನು ಅವರ ವಕೀಲ ಪಂಕಜ್ ಗುಪ್ತಾ ಅವರಿಗೆ ಸಲ್ಲಿಸಿದೆ.

ಆಮ್ ಆದ್ಮಿ ಪಕ್ಷದ ಮುಖ್ಯಸ್ಥರನ್ನು ತಿಹಾರ್ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು. ಅವರ ವಿರುದ್ಧ ದಾಖಲಾಗಿರುವ ಆರೋಪವನ್ನು ನ್ಯಾಯಾಲಯ ಈಗಾಗಲೇ ಪರಿಗಣಿಸಿದೆ ಮತ್ತು ಎಎಪಿ ಪರವಾಗಿ ಹಾಜರಾದ ಗುಪ್ತಾ ಅವರಿಗೆ ಚಾರ್ಜ್ ಶೀಟ್ ನ ಪ್ರತಿಯನ್ನು ನೀಡುವಂತೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ನಿರ್ದೇಶಿಸಿದೆ.

ಇಂದು (ಜುಲೈ 12) ಆಪಾದಿತ ಅಬಕಾರಿ ನೀತಿ ಹಗರಣದಲ್ಲಿ ಇಡಿ ದಾಖಲಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತು. ಆದರೆ, ಇಡಿ ನಂತರ ಸಿಬಿಐ ಅವರನ್ನು ಬಂಧಿಸಿದ್ದರಿಂದ ಕೇಜ್ರಿವಾಳ್ ಸದಸ್ಯಕ್ಕೆ ಜೈಲಿನಲ್ಲೇ ಇರುತ್ತಾರೆ. “ಅರವಿಂದ್ ಕೇಜ್ರಿವಾಲ್ ಅವರು ಚುನಾಯಿತ ನಾಯಕ ಎಂಬ ಅಂಶದ ಬಗ್ಗೆ ನಮಗೆ ಅರಿವಿದೆ” ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ಕೇಜ್ರಿವಾಲ್ ಅವರು 90 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ ಎಂದು ಹೇಳಿದರು.

ಇದು ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣದಲ್ಲಿ ಅವರ ಬಂಧನದ ಕಾನೂನುಬದ್ಧತೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಹೈಓರ್ಟ್‌ ಪೀಠಕ್ಕೆ ಉಲ್ಲೇಖಿಸಿದೆ. ಈ ವಿಷಯವು ಬದುಕುವ ಹಕ್ಕಿಗೆ ಸಂಬಂಧಿಸಿದ್ದು ಮತ್ತು ಬಂಧನದ ವಿಷಯವನ್ನು ವಿಸ್ತೃತ ಪೀಠಕ್ಕೆ ಉಲ್ಲೇಖಿಸಿರುವುದರಿಂದ ಕೇಜ್ರಿವಾಲ್ ಅವರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ಇಂದು ಹೇಳಿದೆ

Previous Post
ಬರ ಪರಿಹಾರ ಬಿಡುಗಡೆ ವಿಚಾರ ಅಫಿಡೆವಿಟ್ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಕಾಲಾವಕಾಶ
Next Post
ಶಂಭು ಗಡಿ ದಿಗ್ಬಂಧನಕ್ಕೆ ಹರ್ಯಾಣ ಸರ್ಕಾರದ ವಿರುದ್ಧ ಸುಪ್ರೀಂ ಆಕ್ರೋಶ

Recent News