ಕೋರ್ಟ್ ಆವರಣದಲ್ಲಿ ಪ್ರತಿಭಟನೆ ಗಂಡಾಂತರ ಆಹ್ವಾನಿಸಿದಂತೆ ಆಪ್‌ ಪ್ರತಿಭಟನೆ ಹೇಳಿಕೆಗೆ ದೆಹಲಿ ಹೈಕೋರ್ಟ್ ಎಚ್ಚರಿಕೆ

ಕೋರ್ಟ್ ಆವರಣದಲ್ಲಿ ಪ್ರತಿಭಟನೆ ಗಂಡಾಂತರ ಆಹ್ವಾನಿಸಿದಂತೆ ಆಪ್‌ ಪ್ರತಿಭಟನೆ ಹೇಳಿಕೆಗೆ ದೆಹಲಿ ಹೈಕೋರ್ಟ್ ಎಚ್ಚರಿಕೆ

ನವದೆಹಲಿ : ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದನ್ನು ಖಂಡಿಸಿ ನ್ಯಾಯಲಯಗಳಲ್ಲಿ ಪ್ರತಿಭಟನೆಗೆ ಕರೆ ನೀಡಿರುವ ಆಪ್ ಕಾನೂನು ಘಟಕಕ್ಕೆ ದೆಹಲಿ ಹೈಕೋರ್ಟ್ ಎಚ್ಚರಿಕೆ ನೀಡಿದ್ದು ನ್ಯಾಯಲಯ ಆವರಣದಲ್ಲಿ ಪ್ರತಿಭಟನೆ ನಡೆಸುವುದು ಗಂಡಾಂತರ ಆಹ್ವಾನ‌ ಮಾಡಿದಂತೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಕೇಜ್ರಿವಾಲ್ ಬಂಧನ ಖಂಡಿಸಿ ರಾಷ್ಟ್ರ ರಾಜಧಾನಿಯ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಬುಧವಾರ ಪ್ರತಿಭಟನೆಗೆ ಎಎಪಿ ಕಾನೂನು ಘಟಕ ಕರೆ ನೀಡಿದ ಹಿನ್ನಲೆ ಈ ವಿಚಾರವನ್ನು ಹೈಕೋರ್ಟ್‌ನಲ್ಲಿ ಪ್ರಸ್ತಾಪಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಧೀಶರು ನಾಳೆ ಈ ಬಗ್ಗೆ ವಿಸ್ತೃತ ವಿಚಾರಣೆ ನಡೆಸುವುದಾಗಿ ಹೇಳಿದರು.

ಪ್ರತಿಭಟನೆ ಬಗ್ಗೆ ಚಿಂತಿಸಬೇಡಿ, ನ್ಯಾಯಾಲಯವನ್ನು ಯಾರು ತಡೆಹಿಡಿಯಲಾಗುವುದಿಲ್ಲ ಅಥವಾ ನಿಲ್ಲಿಸಲಾಗುವುದಿಲ್ಲ. ನ್ಯಾಯಾಲಯವನ್ನು ಸಂಪರ್ಕಿಸುವ ಜನರ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಆ ರೀತಿ ಯಾರಾದರೂ ಅದನ್ನು ಮಾಡಿದರೆ ಅವರು ಗಂಡಾಂತರ ಆಹ್ವಾನ ಮಾಡಿದಂತೆ ಅಗತ್ಯವಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ನ್ಯಾಯಾಲಯ ಹೇಳಿತು.

Previous Post
ಚುನಾವಣಾ ಬಾಂಡ್‌ ಜಗತ್ತಿನಲ್ಲೇ ದೊಡ್ಡ ಹಗರಣ: ಪರಕಾಲ
Next Post
ಅಬಕಾರಿ ನೀತಿ ಹಗರಣದ ಹಣ ಎಲ್ಲಿದೆ, ಕೇಜ್ರಿವಾಲ್ ಬಹಿರಂಗಪಡಿಸಲಿದ್ದಾರೆ – ಸುನೀತಾ ಕೇಜ್ರಿವಾಲ್

Recent News