ಗುಜರಾತ್ ಕರಾವಳಿಯಲ್ಲಿ 14 ಪಾಕಿಸ್ತಾನಿ ಪ್ರಜೆಗಳ ಬಂಧನ 602 ಕೋಟಿ ಮೌಲ್ಯದ 86 ಕೆಜಿ ನಿಷೇಧಿತ ಮಾಧಕ ದ್ರವ್ಯ ವಶಕ್ಕೆ
ನವದೆಹಲಿ : ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಜಂಟಿ ಕಾರ್ಯಚರಣೆ ನಡೆಸಿ ಗುಜರಾತ್ ಕರಾವಳಿಯಲ್ಲಿ 14 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿ ಅವರ ಬಳಿಯಿಂದ 602 ಕೋಟಿ ಮೌಲ್ಯದ 86 ಕಿಲೋಗ್ರಾಂಗಳಷ್ಟು ನಿಷೇಧಿತ ಮಾಧಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯ ವೇಳೆ ಬಂಧನದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪಾಕಿಸ್ತಾನಿ ಪ್ರಜೆಗಳು, ಎಟಿಎಸ್ ಅಧಿಕಾರಿಗಳ ಮೇಲೆ ತಮ್ಮ ದೋಣಿಯನ್ನು ಚಲಾಯಿಸಲು ಪ್ರಯತ್ನಿಸಿದರು, ಪ್ರತೀಕಾರವಾಗಿ ಗುಂಡು ಹಾರಿಸಿದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಭದ್ರತಾ ಏಜೆನ್ಸಿಗಳು ಕಳೆದ ಎರಡು ದಿನಗಳಿಂದ ಅಂತರಾಷ್ಟ್ರೀಯ ಸಮುದ್ರ ಗಡಿಯ ಬಳಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದವು.
ಗುಜರಾತ್ ಮತ್ತು ರಾಜಸ್ಥಾನದಲ್ಲಿ ‘ಮಿಯಾಂವ್ ಮಿಯಾಂವ್’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ನಿಷೇಧಿತ ಡ್ರಗ್ ಮೆಫೆಡ್ರೋನ್ ತಯಾರಿಸುವ ಮೂರು ಲ್ಯಾಬ್‌ಗಳನ್ನು ಎನ್‌ಸಿಬಿ ಭೇದಿಸಿ ಏಳು ಜನರನ್ನು ಬಂಧಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಡ್ರಗ್ಸ್ ವಿರೋಧಿ ಸಂಸ್ಥೆ ಸುಮಾರು 300 ಕೋಟಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದೆ. ಗುಜರಾತಿನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಗುಜರಾತ್ ಮತ್ತು ರಾಜಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಲ್ಯಾಬ್‌ಗಳ ಬಗ್ಗೆ ಗೌಪ್ಯ ಮೂಲದಿಂದ ಮಾಹಿತಿ ಪಡೆದ ನಂತರ ಲ್ಯಾಬ್‌ಗಳನ್ನು ಭೇದಿಸಲಾಯಿತು.