ಗುಜರಾತ್‌ ನಿಂದ ಜೆ ಪಿ ನಡ್ಡಾ, ಕಾಂಗ್ರೆಸ್‌ ಸೇರಿದ್ದ ನಾಯಕನಿಗೆ ಮಹಾರಾಷ್ಟ್ರದಿಂದ ಟಿಕೆಟ್

ಗುಜರಾತ್‌ ನಿಂದ ಜೆ ಪಿ ನಡ್ಡಾ, ಕಾಂಗ್ರೆಸ್‌ ಸೇರಿದ್ದ ನಾಯಕನಿಗೆ ಮಹಾರಾಷ್ಟ್ರದಿಂದ ಟಿಕೆಟ್

ನವದೆಹಲಿ, ಫೆಬ್ರವರಿ 14: ಬಿಜೆಪಿ ಹೈಕಮಾಂಡ್‌ ರಾಜ್ಯಸಭೆ ಚುನಾವಣೆಗೆ ಮತ್ತಷ್ಟು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ರಾಜ್ಯಸಭೆ ಚುನಾವಣೆಗೆ ಗುಜರಾತ್‌ ನಿಂದ ಬಿಜೆಪಿ ರಾಷ್ಟ್ರಧ್ಯಕ್ಷರಾದ ಜೆ ಪಿ ನಡ್ಡಾ ಹಾಗೂ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಅಶೋಕ್‌ ಚವಾಣ್‌ ಅವರನ್ನ ಮಹರಾಷ್ಟ್ರದಿಂದ ಕಣಕ್ಕಿಳಿಸಿ, ಅಧಿಕೃತವಾಗಿ ಪ್ರಕಟಿಸಿದೆ. ಹೌದು, ರಾಜ್ಯಸಭಾ ಚುನಾವಣೆಗೆ ಬಿಜೆಪಿ ಗುಜರಾತ್‌ನಿಂದ ನಾಲ್ವರು ಮತ್ತು ಮಹಾರಾಷ್ಟ್ರದಿಂದ ಮೂವರು ಸೇರಿ ಒಟ್ಟು 7 ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಬಹುದಾಗಿದೆ. ಪ್ರಸ್ತುತ ಬಿಜೆಪಿ ರಾಷ್ಟ್ರಧ್ಯಕ್ಷರಾದ ಜೆ ಪಿ ನಡ್ಡಾ ಹಿಮಾಚಲ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಆದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಈ ರಾಜ್ಯದಿಂದ ಏಕೈಕ ಸ್ಥಾನವನ್ನು ಗೆಲ್ಲಲು ಅಗತ್ಯವಾದ ಸಂಖ್ಯಾಬಲವನ್ನು ಬಿಜೆಪಿ ಹೊಂದಿಲ್ಲ. ಹೀಗಾಗಿ ಗುಜರಾತ್‌ ನಿಂದ ಜೆ ಪಿ ನಡ್ಡಾ ಅವರನ್ನ ಕಣಕ್ಕಿಳಿಸಲಾಗಿದೆ.

ಇನ್ನೂ ಗುಜರಾತ್‌ ನಿಂದ ಜೆಪಿ ನಡ್ಡಾ ಸೇರಿಂದತೆ ಗುಜರಾತ್‌ನಿಂದ ಗೋವಿಂದ್ ಭಾಯಿ ಧೋಲಾಕಿಯಾ, ಮಾಯಾಂಕ್‌ಭಾಯ್ ನಾಯಕ್ ಮತ್ತು ಡಾ. ಜಶ್ವಂತ್ ಸಿಂಗ್ ಸಲಾಂ ಸಿಂಗ್ ಪರ್ಮಾರ್ ಅವರನ್ನು ರಾಜ್ಯಸಭಾ ಅಭ್ಯರ್ಥಿಗಳಾಗಿ ಪಕ್ಷ ಘೋಷಿಸಿದೆ. ಇತ್ತ ಮಹಾರಾಷ್ಟ್ರದಿಂದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ , ಮೇಧಾ ಕುಲಕರ್ಣಿ ಮತ್ತು ಡಾ. ಅಜಿತ್ ಗೋಪ್ಚಾಡೆ ಅವರಿಗೆ ರಾಜ್ಯಸಭಾ ಟಿಕೆಟ್ ನೀಡಿದೆ.‌ ಇಂದು ಮುಂಜಾನೆ, ರಾಜ್ಯಸಭಾ ಚುನಾವಣೆಗೆ ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮಧ್ಯಪ್ರದೇಶದಿಂದ ಕೇಂದ್ರ ಸಚಿವರಾದ ಎಲ್ ಮುರುಗನ್, ಮಾಯಾ ನರೋಲ್ಯ, ಬನ್ಸಿಲಾಲ್ ಗುರ್ಜರ್ ಮತ್ತು ಉಮೇಶ್ ನಾಥ್ ಮಹಾರಾಯ್ ಅವರನ್ನು ಕಣಕ್ಕಿಳಿಸಿದೆ. ಒಡಿಶಾದಿಂದ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಅವರನ್ನು ಕಣಕ್ಕಿಳಿಸಲಾಗಿದೆ.

Previous Post
₹2,00,000 ಕೋಟಿ ವೆಚ್ಚದಲ್ಲಿ ಅಮೆರಿಕಾದಂತಹ ರಸ್ತೆಗಳ ನಿರ್ಮಾಣ: ನಿತಿನ್‌ ಗಡ್ಕರಿ
Next Post
ಕರ್ನಾಟಕ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಪ್ರಕಟ

Recent News