ಚುನಾವಣಾ ಬಾಂಡ್‌ ಜಗತ್ತಿನಲ್ಲೇ ದೊಡ್ಡ ಹಗರಣ: ಪರಕಾಲ

ಚುನಾವಣಾ ಬಾಂಡ್‌ ಜಗತ್ತಿನಲ್ಲೇ ದೊಡ್ಡ ಹಗರಣ: ಪರಕಾಲ

ನವದೆಹಲಿ, ಮಾ. 27: ಚುನಾವಣಾ ಬಾಂಡ್‌ ಹಗರಣವು ಭಾರತದ ಅತಿ ದೊಡ್ಡ ಹಗರಣ ಮಾತ್ರವಲ್ಲ, ಜಗತ್ತಿನಲ್ಲೇ ಅತಿ ದೊಡ್ಡ ಹಗರಣವಾಗಿದೆ” ಎಂದು ಚಿಂತಕ, ಖ್ಯಾತ ರಾಜಕೀಯ ವಿಶ್ಲೇಷಕ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಪತಿ ಪರಕಾಲ ಪ್ರಭಾಕರ್‌ ಹೇಳಿದ್ದಾರೆ. ಮಲಯಾಳಂ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಪರಕಾಲ ಪ್ರಭಾಕರ್‌ ಅವರು, ಚುನಾವಣಾ ಬಾಂಡ್ ಒಂದು ಗಂಭೀರ ವಿಚಾರ. ಚುನಾವಣಾ ಬಾಂಡ್‌ ಕಾರಣದಿಂದಲೇ ಈ ಬಾರಿಯ ಚುನಾವಣೆ ಬಿಜೆಪಿ ಮತ್ತು ಇತರ ಪಕ್ಷಗಳ ನಡುವಿನ ಹೋರಾಟವಾಗಿರದೆ, ಬಿಜೆಪಿ ಮತ್ತು ಭಾರತೀಯರ ನಡುವಿನ ಹೋರಾಟವಾಗಲಿದೆ. ಈ ಅಕ್ರಮ ದೇಶದ ಜನತೆಗೂ ಮತ್ತು ಬಿಜೆಪಿಗೂ ನಡುವೆ ಯುದ್ಧ ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.

ಚುನಾವಣಾ ಬಾಂಡ್‌ ಅಕ್ರಮ ಈಗ ಗುಟ್ಟಾಗಿ ಉಳಿದಿಲ್ಲ. ದೇಶದ ಪ್ರತಿಯೊಬ್ಬ ನಾಗರೀಕನಿಗೂ ಈ ಹಗರಣದ ಬಗ್ಗೆ ತಿಳಿಯುತ್ತಿದೆ. ಬಿಜೆಪಿಯ ಕೈ ಮೀರಿ ಹಗರಣ ಬಯಲಾಗಿಬಿಟ್ಟಿದೆ. ಆದುದರಿಂದ ಚುನಾವಣಾ ಬಾಂಡ್‌ ಅಕ್ರಮದ ಕಾರಣಕ್ಕೆ ಈ ಬಾರಿಯ ಲೋಕಸಭಾ ಚುನಾವಣೆ ಬಿಜೆಪಿ ಮೈತ್ರಿಕೂಟ ಹಾಗೂ ಇತರೆ ಮೈತ್ರಿಕೂಟಗಳ ಯುದ್ಧವಾಗಿರುವುದಿಲ್ಲ. ಬದಲಿಗೆ ಬಿಜೆಪಿ ಮತ್ತು ಭಾರತೀಯರ ನಡುವಿನ ಹೋರಾಟವಾಗಲಿದೆ ಎಂದು ಹೇಳಿದ್ದಾರೆ. ಬಿಜೆಪಿಯ ನಿರೀಕ್ಷೆಗೂ ಮೀರಿ ಈ ವಿಚಾರ ಅದರ ಕೈತಪ್ಪಿ ಹೋಗಿದೆ. ಚುನಾವಣಾ ಬಾಂಡ್ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಈಗೀಗ ಈ ಹಗರಣದ ಬಗ್ಗೆ ಜನರಲ್ಲಿ ಅರಿವು ಮೂಡುತ್ತಿದೆ. ಚುನಾವಣಾ ಬಾಂಡ್‌ ಅಕ್ರಮಕ್ಕೆ ಬಿಜೆಪಿ ದೊಡ್ಡ ದಂಡ ತೆರಬೇಕಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಪತಿ ಪರಕಾಲ ಪ್ರಭಾಕರ್‌ ಹೇಳಿದ್ದಾರೆ.

Previous Post
ದೆಹಲಿ ಅಬಕಾರಿ ನೀತಿ ಪ್ರಕರಣ, ಇಂದು ಸತ್ಯ ಬಹಿರಂಗವಾಗಲಿದೆ: ಕೇಜರಿವಾಳ ಪತ್ನಿ ಸುನೀತಾ
Next Post
ಕೋರ್ಟ್ ಆವರಣದಲ್ಲಿ ಪ್ರತಿಭಟನೆ ಗಂಡಾಂತರ ಆಹ್ವಾನಿಸಿದಂತೆ ಆಪ್‌ ಪ್ರತಿಭಟನೆ ಹೇಳಿಕೆಗೆ ದೆಹಲಿ ಹೈಕೋರ್ಟ್ ಎಚ್ಚರಿಕೆ

Recent News