ಜನರಲ್ಲಿ ಆಶಾ ಭಾವನೆ ಮೂಡಿಸಿ ನಿರಾಶೆ ಮಾಡಿರುವುದು ಸರಿಯಲ್ಲ – ಹೆಚ್‌ಡಿಕೆ

ಜನರಲ್ಲಿ ಆಶಾ ಭಾವನೆ ಮೂಡಿಸಿ ನಿರಾಶೆ ಮಾಡಿರುವುದು ಸರಿಯಲ್ಲ – ಹೆಚ್‌ಡಿಕೆ

ನವದೆಹಲಿ : ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವುದಾಗಿ ರಾಜ್ಯದ ಜನರಲ್ಲಿ ಆಶಾ ಭಾವನೆ ಮೂಡಿಸಿ ನಿರಾಶೆ ಮಾಡಿರುವುದು ಸರಿಯಲ್ಲ, ಜನರು ಈ ಸರ್ಕಾರದ ಬದ್ಧತೆಯ ಬಗ್ಗೆ ಈಗ ಮಾತನಾಡುವಂತಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕ ಮಂಡನೆ ಮಾಡುತ್ತೇವೆ ಎಂದು ಸಾರ್ವಜನಿಕವಾಗಿ ಪ್ರಕಟಿಸಿದ ಸರ್ಕಾರ ಈಗ ಏಕಾಏಕಿ ಅದನ್ನು ತಡೆ ಹಿಡಿದಿದೆ. ತಮ್ಮ ಸರ್ಕಾರದ ಮೇಲಿನ ಅಕ್ರಮಗಳ ಚರ್ಚೆಯನ್ನು ಬದಿಗೊತ್ತಲ್ಲು ಈ ಪ್ರಯತ್ನ ಮಾಡಿದಂತೆ ಕಾಣುತ್ತಿದೆ‌ ಎಂದು ಆರೋಪಿಸಿದರು.

ವಾಲ್ಮೀಕಿ ನಿಗಮ ಮಂಡಳಿ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಸಚಿವರು ಸುದ್ದಿಗೋಷ್ಠಿ ನಡೆಸಿ ಇನ್ನು ಸಮಜಾಯಿಷಿ ಕೊಡುತ್ತಿರುವುದು ಬಂಡತನಕ್ಕೆ ಸಾಕ್ಷಿ. ಬ್ಯಾಂಕ್ ದುರಪಯೋಗವಾಗಿದೆ ಎಂದು ಆರೋಪಿಸಿ ಸಿಬಿಐ ಇಡಿಗೆ ದೂರು ನೀಡಿದೆ ಅದರ ಆಧಾರದ ಮೇಲೆ ತನಿಖೆ ಆರಂಭವಾಗಿದೆ ಅಕ್ರಮ ಮುಚ್ಚಿಕೊಳ್ಳಲು ಹೊರಟಿರುವ ಈ ನಾಯಕರು ಬಂಡತನದಿಂದ ಸಮಜಾಯಿಷಿ ಕೊಡ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಕಾವೇರಿ ನೀರಿನ ವಿಷಯದಲ್ಲಿ ಹೆಚ್‌ಡಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ನಾನು ವೆಜ್ ಊಟ ಮಾಡುತ್ತೇವೆ ಆದರೆ ಬಾಡೂ ತಿನ್ನೊಕೆ ಹೋಗುತ್ತೇನೆ ಅಂತಾ ಆರೋಪ ಮಾಡುತ್ತಿದ್ದಾರೆ. ನಾನು ಮಾಂಸ ತಿನ್ನಲ್ಲ, ಕಾರ್ಯಕರ್ತರಿಗೆ ಕೃತ್ಯಜ್ಞತೆ ಸಲ್ಲಿಸಲು ಹೋಗಿದ್ದೆ ಅಷ್ಟೆ.

ಅಷ್ಟಕ್ಕೂ ತಮಿಳುನಾಡಿಗೆ ನೀರು ಬಿಟ್ಟು ನಮ್ಮ ಜೊತೆಗೆ ಏನ್ ಚರ್ಚೆ ಮಾಡುತ್ತಾರೆ, ವಿರೋಧ ಪಕ್ಷದ ಸಭೆ ಕರೆದು ಏನ್ ಸಾಧನೆ ಮಾಡಿದರು? ಇಲ್ಲಿ ಸರ್ವಪಕ್ಷ ಸಭೆ ನಡೆಸಿದಕ್ಕೆ ತಮಿಳುನಾಡಿನಲ್ಲಿ ಸಭೆ ನಡೆಸಲಾಯಿತು, ನೀರು ಈಗಾಗಲೇ ತಮಿಳುನಾಡಿಗೆ ಹೊಗುತ್ತಿದೆ, ಸುಮ್ಮನೆ ಇದ್ದರೆ ಆಗಿರೋದು, ಅನಗತ್ಯ ತಮಿಳುನಾಡಿಗೆ ಅಸ್ತ್ರ ಕೊಟ್ಟಂತೆ ಮಾಡಿಕೊಂಡಿದ್ದಾರೆ.

ನೀರಿನ ವಿಷಯದಲ್ಲಿ ಹೋರಾಟ ಮಾಡುವ ಅಗತ್ಯವಿಲ್ಲ ಪ್ರಕೃತಿ ಸಹಕಾರ ನೀಡಿದೆ, ನೀರು ಬರ್ತಿದೆ ನನಗೆ ಕಾಳಜಿ ಇರೋದಕ್ಕೆ ಭಗವಂತನ ಆರ್ಶಿವಾದ ಇದೆ, ನಾನು ಅಧಿಕಾರದಲ್ಲಿದ್ದಾಗ ಒಳ್ಳೆ ಮಳೆಯಾಗಿದೆ. ಈಗ ನನ್ನ ಮೇಲೆ ಟೀಕೆ ಮಾಡಿದ್ದಕ್ಕೆ ಈಗ ಪಕೃತಿ ಸಹಕಾರ ನೀಡಿದೆ ಮಳೆ ಬರುತ್ತಿದೆ ಎಂದು ಸಭೆ ಹಾಜರಾಗದ ಹಿನ್ನಲೆ ಟೀಕಿಸಿದ ಕಾಂಗ್ರೇಸ್ ನಾಯಕರಿಗೆ ತಿರುಗೇಟು ನೀಡಿದರು.

Previous Post
ಪರೀಕ್ಷೆ ಸರಿಯಾಗಿ ನಡೆಯದಿದ್ದರೆ ಮಾತ್ರ ಮರುಪರೀಕ್ಷೆ – ಸುಪ್ರೀಂ
Next Post
ಅಮೆರಿಕದಲ್ಲಿ ಶುರುವಾಯ್ತು ಬ್ಯಾಂಡೇಜ್ ಲುಕ್ : ಟ್ರಂಪ್ ಬೆಂಬಲಿಗರ ಹೊಸ ಟ್ರೆಂಡ್

Recent News