ಜನರ ಬಯಕೆಯಂತೆ ಎಕ್ಸಿಟ್ ಪೋಲ್ ಭವಿಷ್ಯ: ಮಾಜಿ ಸಿಎಂ ಬಿಎಸ್ ವೈ ಹೇಳಿಕೆ

ಜನರ ಬಯಕೆಯಂತೆ ಎಕ್ಸಿಟ್ ಪೋಲ್ ಭವಿಷ್ಯ: ಮಾಜಿ ಸಿಎಂ ಬಿಎಸ್ ವೈ ಹೇಳಿಕೆ

ಬೆಂಗಳೂರು: ಮೂರನೇ ಬಾರಿಯೂ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ದೇಶದ ಜನರು ಬಯಸಿದ್ದರು. ಅದರಂತೆಯೇ ಮತದಾನೋತ್ತರ ಸಮೀಕ್ಷೆ ( ಎಕ್ಸಿಟ್ ಪೋಲ್) ಗಳು ಭವಿಷ್ಯ ನುಡಿದಿವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು‌.ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಕರ್ನಾಟಕ ಸೇರಿ ದೇಶಾದ್ಯಂತ ಎನ್ ಡಿಎ ಪರವಾದ ಅಲೆಯಿದೆ.ಕಳೆದ ಸಲಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ. ಮೋದಿಯವರು ಅತ್ಯಧಿಕ ಬಹುಮತದಿಂದ ಗೆಲುವು ಸಾಧಿಸುವುದು ನಿಶ್ಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು.ಎಕ್ಸಿಟ್ ಪೋಲ್ ಸಮೀಕ್ಷೆಗಳಲ್ಲಿ ಎನ್ ಡಿ ಎ ಪರ ಅಲೆಯಿರುವುದು ನಿಚ್ಚಳವಾಗಿದೆ. ಕರ್ನಾಟಕದಲ್ಲಿ ಕಳೆದ ಬಾರಿಗಿಂತ ಕಡಿಮೆ ಸ್ಥಾನ ಗಳಿಕೆ ಬಗ್ಗೆಯೂ ಪ್ರಸ್ತಾಪಿಸಿದ್ದು, ಜೂ. 4ರಂದು ಏನಾಗಿದೆ ಎನ್ನುವುದು ಗೊತ್ತಾಗುತ್ತದೆ ನೋಡೋಣವೆಂದು ಯಡಿಯೂರಪ್ಪ ಹಾರಿಕೆಯ ಉತ್ತರ ನೀಡಿದರು.ಹೊಸ ಇತಿಹಾಸ ಸೃಷ್ಟಿಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಹೊಸ ಇತಿಹಾಸ ಸೃಷ್ಟಿಸಲಿದೆ. ಶೇಕಡ 50ಕ್ಕಿಂತ ಹೆಚ್ಚು ಮತ ಗಳಿಸಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ. ಮೋದಿಯವರು ಹ್ಯಾಟ್ರಿಕ್ ಪ್ರಧಾನಿಯಾಗುವುದು ಗ್ಯಾರಂಟಿ ಎಂದರು.ಉತ್ತಮ ಅಭಿವೃದ್ಧಿ ಕೆಲಸಗಳು, ಜನಪರವಾಗಿ ಒಳ್ಳೆಯ ಸುಧಾರಣಾ ಕ್ರಮಗಳು, ಭರವಸೆದಾಯಕ ಆಡಳಿತ ಜನರ ಮೆಚ್ಚುಗೆಗೆ ಪಾತ್ರವಾಗಿದ್ದವು. ಎಕ್ಸಿಟ್ ಪೋಲ್ ಸಮೀಕ್ಷಾ ವರದಿಗಳು ಇವೇ ಅಂಶಗಳನ್ನು ಎತ್ತಿಹಿಡಿದಿವೆ. ಕರ್ನಾಟಕದ ಜನರೂ ಕೂಡ ಎನ್ ಡಿಎ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿರುವ ವಿಶ್ವಾಸವಿದೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಗ್ಯಾರಂಟಿಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿತು. ಲೋಕಸಭೆ ಚುನಾವಣೆಗೆ ನಾಯಕತ್ವದ ಬಗ್ಗೆ ಸ್ಪಷ್ಟಪಡಿಸಲಿಲ್ಲ. ಸ್ಥಳೀಯ ವಿಷಯಗಳ ಮೇಲೆ ಹೆಚ್ಚು ಫೋಕಸ್ ಮಾಡಿತು. ಇಷ್ಟಾಗಿಯೂ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯ, ಮೋದಿಯವರ ವರ್ಚಸ್ಸಿನ ಮುಂದೆ ಅವರ ಆಟ ನಡೆದಿಲ್ಲವೆಂದು ಡಾ‌‌.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

Previous Post
ಮೋದಿ ಮೀಡಿಯಾ ಸಮೀಕ್ಷೆ, ಎಕ್ಸಿಟ್ ಪೋಲ್ ಅಲ್ಲ’: ರಾಹುಲ್ ಗಾಂಧಿ ಟೀಕೆ
Next Post
ಇಡೀ ದೇಶದಲ್ಲೇ ವಿದೇಶಿ ನೇರ ಬಂಡವಾಳ ಹೂಡಿಕೆ ಕುಸಿದಿದೆ; ಸಚಿವ ಎಂ.ಬಿ ಪಾಟೀಲ

Recent News