ಜ್ಞಾನವ್ಯಾಪಿ ಮಸೀದಿ ಆವರಣದಲ್ಲಿ ಪೂಜೆಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್
ನವದೆಹಲಿ : ವಾರಣಾಸಿಯ ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆ ನಡೆಸಲು ಹಿಂದೂಗಳಿಗೆ ನೀಡಿದ ಅನುಮತಿಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಎರಡೂ ಸಮುದಾಯಗಳು ಜ್ಞಾನವಾಪಿ ಆವರಣದಲ್ಲಿ ಧಾರ್ಮಿಕ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕಕ್ಷಿದಾರರಿಗೆ ಆದೇಶಿಸಿದೆ.
ತೆಹ್ಖಾನಾದಲ್ಲಿ ಪೂಜೆಗೆ ಅನುಮತಿ ನೀಡಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಮಸೀದಿ ಸಮಿತಿ ಮತ್ತು ಮುಸ್ಲಿಂ ಪಕ್ಷಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ತ್ರಿ ಸದಸ್ಯ ಪೀಠ, ಎರಡೂ ಸಮುದಾಯಗಳು ಪೂಜೆಗಳನ್ನು ಸಲ್ಲಿಸಲು ಸಾಧ್ಯವಾಗುವಂತೆ ಯಥಾಸ್ಥಿತಿ ಕಾಯ್ದುಕೊಳ್ಳುವುದು ಸೂಕ್ತವಾಗಿದೆ ಎಂದು ಹೇಳಿದೆ.
ಪ್ರಾಥನೆ ಸಲ್ಲಿಕೆಯಲ್ಲಿ ಎರಡೂ ಪಕ್ಷಗಳಿಂದ ತೊಂದರೆಯಾಗಬಾರದು ಹಿಂದೂಗಳು ದಕ್ಷಿಣದಿಂದ ಪ್ರವೇಶಿಸಿ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಮುಸ್ಲಿಮರು ಉತ್ತರ ಭಾಗದಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ ಪ್ರಕರಣವು ಅಂತಿಮವಾಗಿ ತೀರ್ಮಾನವಾಗುವವರೆಗೆ ಈ ವ್ಯವಸ್ಥೆ ಮುಂದುವರಿಯುತ್ತದೆ ಎಂದು ನ್ಯಾಯಾಲಯ ಇದೇ ಸಮಯದಲ್ಲಿ ಹೇಳಿತು.
ಮುಸ್ಲಿಂ ಸಮುದಾಯದವರು ನಮಾಜ್‌ಗೆ ಅಡೆತಡೆಯಿಲ್ಲದೆ ನಮಾಜ್ ಸಲ್ಲಿಸುತ್ತಿದ್ದಾರೆ ಮತ್ತು ತೆಹಖಾನಾದಲ್ಲಿ ಪ್ರಾರ್ಥನೆ ಕೇವಲ ಹಿಂದೂ ಅರ್ಚಕರಿಗೆ ಮಾತ್ರ ಸೀಮಿತವಾಗಿದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಯಥಾಸ್ಥಿತಿ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಎರಡೂ ಸಮುದಾಯಗಳು ಮೇಲಿನ ನಿಯಮಗಳಲ್ಲಿ ಧಾರ್ಮಿಕ ಪೂಜೆಯನ್ನು ಮಾಡಬಹುದು, ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.
ಮುಸ್ಲಿಂ ಪಕ್ಷಗಳು ಸಲ್ಲಿಸಿದ ಮೇಲ್ಮನವಿಯ ಮೇಲೆ ನ್ಯಾಯಾಲಯವು ಹಿಂದೂ ಪಕ್ಷಗಳಿಗೆ ನೋಟಿಸ್ ಜಾರಿಗೊಳಿಸಿತು ಮತ್ತು ಜುಲೈನಲ್ಲಿ ಪರಿಗಣನೆಗೆ ವಿಷಯವನ್ನು ಪಟ್ಟಿ ಮಾಡಿದೆ. ಕಳೆದ ಜನವರಿ 31 ರಂದು ಹಿಂದೂ ಪಕ್ಷಗಳು ಪೂಜೆಯನ್ನು ಮುಂದುವರೆಸಬೇಕು ವಾರಣಾಸಿ ಸಿವಿಲ್ ನ್ಯಾಯಲಯ ಎಂದು ಆದೇಶಿಸಿದೆ. ಆದೇಶಕ್ಕೆ ತಡೆ ನೀಡಲು ಅಲಹಬಾದ್ ಹೈಕೋರ್ಟ್ ನಿರಾಕರಿಸಿತ್ತು.