ಡಾಲರ್‌ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ

ಡಾಲರ್‌ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ

ನವದೆಹಲಿ, ಜೂ. 12: ಡಾಲರ್‌ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತವನ್ನು ಕಂಡಿದ್ದು, ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ 83.57ಕ್ಕೆ ದಾಖಲೆಯ ಕನಿಷ್ಠ ಮಟ್ಟಕ್ಕೆ ಇಳಿದಿದೆ. ರೂಪಾಯಿಯ ಕಳಪೆ ಪ್ರದರ್ಶನವು ಪ್ರಮುಖ ಕರೆನ್ಸಿ ಡಾಲರ್ ವಿರುದ್ಧ ಬಲವಾದ ಕುಸಿತವನ್ನು ಸೂಚಿಸುತ್ತದೆ, ಎರಡು ದಿನಗಳ ಫೆಡ್ ಸಭೆಯು ಮಂಗಳವಾರ ಪ್ರಾರಂಭವಾಗಿದ್ದು ಅದರ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಸೋಮವಾರದ 83.51ರ ಅಂತ್ಯಕ್ಕೆ ಹೋಲಿಸಿದರೆ, ರೂಪಾಯಿಯು 83.57ರ ಹೊಸ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿತವನ್ನು ಕಂಡಿದೆ. ದೇಶೀಯ ಕರೆನ್ಸಿ ಮಂಗಳವಾರ 83.49ಕ್ಕೆ ಕುಸಿತವನ್ನು ಕಂಡಿತ್ತು. ರೂಪಾಯಿ ಕೊನೆಯದಾಗಿ ಏಪ್ರಿಲ್ 18ರಂದು 83.54ರ ದಾಖಲೆಯ ಕನಿಷ್ಠ ಮಟ್ಟವನ್ನು ತಲುಪಿತ್ತು.

ಈ ಕುರಿತು ಮಾತನಾಡಿದ ಸೆಕ್ಯುರಿಟೀಸ್ VP(ಸಂಶೋಧನಾ ವಿಶ್ಲೇಷಕ – ಸರಕು ಮತ್ತು ಕರೆನ್ಸಿ) ಜತೀನ್ ತ್ರಿವೇದಿ, ನಾಳೆ ಬಿಡುಗಡೆಯಾಗಲಿರವ US CPI ಡೇಟಾಕ್ಕೆ ಕಾಯಲಾಗುತ್ತಿದೆ. ಈ ಡೇಟಾಗಳು ಮಾರುಕಟ್ಟೆ ಚಲನೆಗಳಿಗೆ ನಿರ್ಣಾಯಕವಾಗಿದೆ. ಮುಂಬರುವ US ಫೆಡ್ ನೀತಿ ಮತ್ತು ಹೇಳಿಕೆಯು ಮಹತ್ವದ್ದಾಗಿದೆ. ಏಕೆಂದರೆ ಅವುಗಳು ಭವಿಷ್ಯದ ಆರ್ಥಿಕ ಪರಿಸ್ಥಿತಿಗಳ ಕುರಿತು ಮಾರ್ಗದರ್ಶನವನ್ನು ನೀಡುತ್ತವೆ. ಇವುಗಳು ಡಾಲರ್ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ ಮತ್ತು ಅದರ ಪರಿಣಾಮವಾಗಿ ರೂಪಾಯಿಯ ಕಾರ್ಯಕ್ಷಮತೆಯ ಮೇಲೆ ಪ್ರಭಾವ ಬೀರುತ್ತವೆ ಎಂದು ಹೇಳಿದ್ದಾರೆ. ಬಲವಾದ US ಡಾಲರ್ ಮತ್ತು ಹೆಚ್ಚಿದ ಕಚ್ಚಾ ತೈಲ ಬೆಲೆಗಳಿಂದಾಗಿ ರೂಪಾಯಿಯು ಸ್ವಲ್ಪ ಋಣಾತ್ಮಕ ವ್ಯಾಪಾರ ಮಾಡುವ ನಿರೀಕ್ಷೆಯಿದೆ. ಆದರೆ, ಸಕಾರಾತ್ಮಕ ಜಾಗತಿಕ ಮಾರುಕಟ್ಟೆಗಳು ಮತ್ತು ಹೊಸ ವಿದೇಶಿ ಒಳಹರಿವು ಸಣ್ಣ ಮಟ್ಟದಲ್ಲಿ ರೂಪಾಯಿಯ ಚೇತರಿಕೆಗೆ ಬೆಂಬಲವನ್ನು ನೀಡಬಹುದು ಎಂದು ಸಂಶೋಧನಾ ವಿಶ್ಲೇಷಕ ಅನುಜ್ ಚೌಧರಿ ಹೇಳಿದ್ದಾರೆ.

Previous Post
ಉಕ್ರೇನ್-ರಷ್ಯಾ ಯುದ್ಧ: ಇಬ್ಬರು ಭಾರತೀಯರ ಸಾವು
Next Post
ಆಂಧ್ರ ಸಿಎಂ ಆಗಿ ನಾಯ್ಡು ಪ್ರಮಾಣವಚನ

Recent News