ತುಕ್ಡೆ-ತುಕ್ಡೆ ಗ್ಯಾಂಗಿನ ಸುಲ್ತಾನನಂತೆ ವರ್ತಿಸುತ್ತಿದೆ ಕಾಂಗ್ರೆಸ್‌: ಮೈಸೂರಿನಲ್ಲಿ ಮೋದಿ ಹೇಳಿದ್ದೇನು?

ತುಕ್ಡೆ-ತುಕ್ಡೆ ಗ್ಯಾಂಗಿನ ಸುಲ್ತಾನನಂತೆ ವರ್ತಿಸುತ್ತಿದೆ ಕಾಂಗ್ರೆಸ್‌: ಮೈಸೂರಿನಲ್ಲಿ ಮೋದಿ ಹೇಳಿದ್ದೇನು?

ಮೈಸೂರು ಏಪ್ರಿಲ್ 14: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆ ಪ್ರಚಾರದ ಸಮಾವೇಶದಲ್ಲಿ ಭಾಗವಹಿಸಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅಮ್ಮಿಕೊಳ್ಳಲಾದ ಬೃಹತ್ ಸಮಾವೇಶದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಈ ವೇಳೆ ಮೋದಿ ಅವರು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಆಶೀರ್ವಾದ ಪಡೆದರು. ಜೊತೆಗೆ ಅವರಿಗೆ ಪೇಟಾ, ಶಾಲು, ಹಾರ ಹಾಗೂ ರಾಮ,ಸೀತಾ, ಲಕ್ಷ್ಮಣನ ಮರದ ಮೂರ್ತಿಯನ್ನು ನೀಡಿ ಗೌರವಿಸಲಾಯಿತು.

ಈ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಕನ್ನಡದಲ್ಲಿ ಭಾಷಣ ಆರಂಭಿಸಿದರು. ಚಾಮುಂಡೇಶ್ವರಿಗೆ ತಮ್ಮ ನಮನವನ್ನು ಸಲ್ಲಿಸುವ ಮೂಲಕ ಮಾತು ಆರಂಭಿಸಿದರು. ಆರಂಭದಲ್ಲಿ ಬಿಜೆಪಿ ಪ್ರಣಾಳಿಕೆ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ದೇಶದಲ್ಲಿ ಮೋದಿ ಗ್ಯಾರಂಟಿಯೇ ನೈಜ ಗ್ಯಾರಂಟಿ. ಮೋದಿ ಗ್ಯಾರಂಟಿ ಕರ್ನಾಟಕದ ಪ್ರತಿಯೊಬ್ಬರ ಗ್ಯಾರಂಟಿ. ಬಿಜೆಪಿ ಪ್ರಣಾಳಿಕೆ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಪ್ರಣಾಳಿಕೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಾವು ರಾಮ ಮಂದಿರ ನಿರ್ಮಾಣ ಮಾಡಿದ್ದೇವೆ. ಸಂಶೋಧನೆ, ಅಭಿವೃದ್ಧಿಯಲ್ಲಿ ಭಾರತ ಮುಂಚೂಣಿಯಲ್ಲಿದೆ. ವಂದೇ ಭಾರತ್ ರೈಲು ನಮ್ಮ ದೇಶದಲ್ಲಿ ಓಡುತ್ತಿದೆ. ಬೆಂಗಳೂರು ದೇಶದಲ್ಲಿ ಐಟಿ ಹಬ್ ಆಗಿದೆ ಎಂದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಮೋದಿ ಅವರು ಈ ಬಾರಿ ಬಿಜೆಪಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಮೈಸೂರಿನಲ್ಲಿ ಮಾತನಾಡುವಾಗ ಕಾಂಗ್ರೆಸ್ ವಿರುದ್ಧ ಮೋದಿ ಕೆಂಡಮಂಡಲಾದರು. ಕರ್ನಾಟಕದ ವಿಕಾಸಕ್ಕೆ ಸಾಕಷ್ಟು ಕೆಲಸದ ಅವಶ್ಯಕತೆ ಇದೆ. ವೋಟ್‌ ಬ್ಯಾಂಕ್‌ಗಾಗಿ ದೇಶವನ್ನು ಒಡೆಯುವವರಿಗೆ ಬೆಂಬಲಿಸಬೇಡಿ. ಅವರು ಕೋಟ್ಯಾಂತರ ಹಿಂದೂಗಳನ್ನು ಅವಮಾನಿಸಿದ್ದಾರೆ ಎಂದು ಗುಡುಗಿದರು. ಕಾಂಗ್ರೆಸ್‌ ತುಕಡೆ ತುಕಡೆ ಗ್ಯಾಂಗ್ ಜೊತೆ ಇದೆ. ಅವರು ವಂದೇ ಭಾರತಂ ವಿರುದ್ಧವಾಗಿದ್ದಾರೆ. ಭಾರತ್ ಮಾತಾಕಿ ಜೈ ಅನ್ನೋದಕ್ಕೆ ಅವರು ಅನುಮತಿ ಕೇಳುತ್ತಾರೆ ಎಂದು ತೀವ್ರ ವಾಗ್ದಾಳಿ ಮಾಡಿದರು. ಹೀಗಾಗಿ ಕಾಂಗ್ರೆಸ್ ಜನರಿಗೆ ಮೋಸ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಮೋದಿ ಕೆಂಡಮಂಡಲಾದರು.

Previous Post
ಭರವಸೆಗಳನ್ನು ಬಿಜೆಪಿ ಯಾವತ್ತೂ ಈಡೇರಿಸಿಲ್ಲ, ಮುಂದೆಯೂ ಈಡೇರಿಸುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
Next Post
3ನೇ ಮಹಾಯುದ್ಧ: 200 ಡ್ರೋನ್, ಕ್ಷಿಪಣಿ ಉಡಾಯಿಸಿದ ಇರಾನ್? ಇಸ್ರೇಲ್ ವಿರುದ್ಧ ಯುದ್ಧ ಶುರು?

Recent News