Approval for MEMU train movement on Tumkur-Yeshwantpur route

ತುಮಕೂರು-ಯಶವಂತಪುರ ಮಾರ್ಗವಾಗಿ ಮೆಮು ರೈಲು ಸಂಚಾರಕ್ಕೆ ಅನುಮೋದನೆ

ಬೆಂಗಳೂರು, ಸೆ. 4; ತುಮಕೂರು ಜನತೆಯ ಬಹುದಿನಗಳ ಬೇಡಿಕೆಯಾದ ತುಮಕೂರು-ಯಶವಂತಪುರ ಮಾರ್ಗವಾಗಿ ಮೆಮು ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ತುಮಕೂರು-ಯಶವಂತಪುರ ರೈಲು ಬೆಳಗ್ಗೆ 8-55 ತುಮಕೂರಿನಿಂದ ಹೊರಟು 10-25ಕ್ಕೆ ಯಶವಂತಪುರ ತಲುಪಲಿದೆ. ಮತ್ತೊಂದು ರೈಲು ಯಶವಂತಪುರದಿಂದ ಸಂಜೆ 5-40ಕ್ಕೆ ಹೊರಟು 7-05ಕ್ಕೆ ತುಮಕೂರು ತಲುಪಲಿದೆ. ಪ್ರತಿ ಸೋಮವಾರ ವಿಶೇಷ ಮೆಮು ರೈಲು ಬಾಣಸವಾಡಿ ರೈಲು ನಿಲ್ದಾಣದಿಂದ ಸಂಜೆ 6.15ಕ್ಕೆ ಹೊರಟು 8-35ಕ್ಕೆ ತುಮಕೂರು ತಲುಪಲಿದೆ. ಭಾನುವಾರ ಹೊರತುಪಡಿಸಿ ವಾರದ ಆರು ದಿನಗಳಲ್ಲಿ ತುಮಕೂರು- ಯಶವಂತಪುರ ಮಾರ್ಗದಲ್ಲಿ ಮೆಮು ರೈಲು ಸಂಚರಿಸಲಿದೆ. ಯಶವಂತಪುರ- ಹೊಸೂರು ಮೆಮು ರೈಲು ಸಂಚಾರಕ್ಕೂ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ರಾಜ್ಯದ ಮತ್ತು ತುಮಕೂರು ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ ಮೆಮು ರೈಲು ಸೇವೆ ಒದಗಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಜನತೆ ಪರವಾಗಿ ಅಭಿನಂದನೆ ಸಲ್ಲಿಸಿರುವುದಾಗಿ ವಿ. ಸೋಮಣ್ಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Previous Post
ಎಲೆಕ್ಟ್ರಿಕಲ್ ವಾಹನಗಳ ತಾಣವಾಗಿ ಭಾರತ : ಕೇಂದ್ರ ಸಚಿವ ಕುಮಾರಸ್ವಾಮಿ
Next Post
ರಾಜೀನಾಮೆ ನೀಡಿದರೆ ಅವರ ಮರ್ಯಾದೆ ಉಳಿಯುತ್ತದೆ: ಯಡಿಯೂರಪ್ಪ

Recent News