ದೆಹಲಿ ಮೆಟ್ರೋದಲ್ಲಿ ಸಂಚರಿಸಿದ ಮಾಜಿ ಪ್ರಧಾನಿ ಹೆಚ್‌ಡಿಡಿ

ದೆಹಲಿ ಮೆಟ್ರೋದಲ್ಲಿ ಸಂಚರಿಸಿದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ

ನವದೆಹಲಿ : ಶನಿವಾರವಷ್ಟೆ ಪ್ರಧಾನಮಂತ್ರಿ ವಸ್ತು ಸಂಗ್ರಾಹಲಯಕ್ಕೆ ಭೇಟಿ ನೀಡಿದ್ದ ಮಾಜಿ ಪ್ರಧಾನಿ ಮತ್ತು ಜನತಾ ದಳ (ಜಾತ್ಯತೀತ) ಪಕ್ಷದ ವರಿಷ್ಠ ಎಚ್‌ಡಿ ದೇವೇಗೌಡ ಅವರು ಭಾನುವಾರ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದರು. ಲೋಕಕಲ್ಯಾಣ್ ಮಾರ್ಗ್ ನಿಂದ ಗುರುಗ್ರಾಮ ಮಾರ್ಗದ ನಡುವೆ ಅವರು ಪ್ರಯಾಣಿಸಿದರು, ಈ ವೇಳೆ ಹಿರಿಯ ಮೆಟ್ರೋ ಅಧಿಕಾರಿಗಳು ಮಾಜಿ ಪ್ರಧಾನಿ ಜೊತೆಗಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಪುತ್ರಿ ಅನಸೂಯ ಮಂಜುನಾಥ್, ಸೊಸೆ ಡಾ.ಸೌಮ್ಯ ಜೊತೆಗೆ ಅವರು ಮೆಟ್ರೋದಲ್ಲಿ ಪ್ರಯಾಣಿಸಿದರು. ಪ್ರಯಾಣದ ವೇಳೆ ಮಟ್ರೋ ಸಂಚಾರ, ಅಭಿವೃದ್ಧಿ, ತಮ್ಮ ಸರ್ಕಾರದ ಅವಧಿಯಲ್ಲಿನ ಬೆಳವಣಿಗೆಗಳ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚಿಸಿದರು. ಇದಕ್ಕೂ ಮೊದಲು ಅವರು ಪ್ರಧಾನಿಗಳ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದರು.  ಮಾಜಿ ಪ್ರಧಾನಿ ಮ್ಯೂಸಿಯಂ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದು ಅಗಾಧ ಮತ್ತು ವಿನಮ್ರ ಅನುಭವ ಎಂದು ಹೇಳಿದ ದೇವೇಗೌಡರು, ವಸ್ತುಸಂಗ್ರಹಾಲಯದ ಯೋಜನೆಯನ್ನು ರೂಪಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರನ್ನು ಅಭಿನಂದಿಸಿದರು.

Previous Post
ಅತ್ಯಾಚಾರ ಪ್ರಕರಣದ ಆರೋಪಿಗಳ ಡಿಎನ್‌ಎ ಪರೀಕ್ಷೆಗೆ ಅಖಿಲೇಶ್ ಒತ್ತಾಯ
Next Post
ವಕ್ಫ್‌ ಬೋರ್ಡ್ ಅಧಿಕಾರಕ್ಕೆ ಬ್ರೇಕ್ ಹಾಕಲು ಮೋದಿ ಸರ್ಕಾರ ಸಿದ್ಧತೆ, ಸದ್ಯದಲ್ಲೇ ತಿದ್ದುಪಡಿ ಮಸೂದೆ ಮಂಡನೆ

Recent News