ದೆಹಲಿ ಸರ್ಕಾರದಿಂದ 2024-25ನೇ ಸಾಲಿನ‌ ವರ್ಷದ ಬಜೆಟ್‌ ಮಂಡನೆ ʻಮುಖ್ಯಮಂತ್ರಿ ಮಹಿಳಾ ಸಮ್ಮಾನ್ʼಯೋಜನೆ ಘೋಷಣೆ

ದೆಹಲಿ ಸರ್ಕಾರದಿಂದ 2024-25ನೇ ಸಾಲಿನ‌ ವರ್ಷದ ಬಜೆಟ್‌ ಮಂಡನೆ ʻಮುಖ್ಯಮಂತ್ರಿ ಮಹಿಳಾ ಸಮ್ಮಾನ್ʼಯೋಜನೆ ಘೋಷಣೆ

ನವದೆಹಲಿ: ರಾಷ್ಟ್ರ ರಾಜಧಾನಿಯ ಮಹಿಳೆಯರಿಗಾಗಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ನೇತೃತ್ವದ ಸರ್ಕಾರ ಬಂಪರ್ ಯೋಜನೆ ಪ್ರಕಟಿಸಿದೆ. ಸೋಮವಾರ ದೆಹಲಿ ವಿಧಾನಸಭೆಯಲ್ಲಿ ರಾಜ್ಯ ಹಣಕಾಸು ಸಚಿವೆ ಅತಿಶಿ 2024-25ನೇ ಸಾಲಿನ‌ ವರ್ಷದ ಬಜೆಟ್‌ ಮಂಡಿಸಿದ್ದಾರೆ. 76,000 ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸಿದ್ದು, ತಮ್ಮ ಚೊಚ್ಚಲ ಬಜೆಟ್‌ನಲ್ಲಿ ʻಮುಖ್ಯಮಂತ್ರಿ ಮಹಿಳಾ ಸಮ್ಮಾನ್ʼಯೋಜನೆ ಘೋಷಿಸಿದರು.

ಈ ಯೋಜನೆ ಅಡಿಯಲ್ಲಿ 18 ವರ್ಷ ಮೇಲ್ಪಟ್ಟ ಮಹಿಳೆಯರು ಪ್ರಸಕ್ತ ಆರ್ಥಿಕ ವರ್ಷದಿಂದ ಪ್ರತಿ ತಿಂಗಳು 1,000 ರೂ. ಆದಾಯ ಪಡೆಯಲಿದ್ದಾರೆ. ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶವೂ ಇದಾಗಿದೆ ಎಂದು ತಮ್ಮ ಬಜೆಟ್‌ ಭಾಷಣದಲ್ಲಿ ತಿಳಿಸಿದರು.

ಇಲ್ಲಿಯವರೆಗೆ ದೆಹಲಿಯಲ್ಲಿ ಶ್ರೀಮಂತರ ಕುಟುಂಬದ ಮಕ್ಕಳು ಶ್ರೀಮಂತರಾಗಿ, ಬಡ ಕುಟುಂಬದ ಮಕ್ಕಳು ಬಡವರಾಗಿಯೇ ಉಳಿಯುತ್ತಿದ್ದರು. ಇದು ರಾಮರಾಜ್ಯದ ಪರಿಕಲ್ಪನೆಗೆ ವಿರುದ್ಧವಾಗಿತ್ತು. ಆದ್ರೆ ನಮ್ಮ ಸರ್ಕಾರ ರಾಮರಾಜ್ಯದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಬಜೆಟ್‌ ಮಂಡಿಸಿದೆ ಎಂದು ಒತ್ತಿ ಹೇಳಿದರು.

ಕೇಜ್ರಿವಾಲ್ ಸರ್ಕಾರವು 2015 ರಿಂದ 22,711 ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸಿದೆ. ಶಿಕ್ಷಣವು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಈ ವರ್ಷ ಶಿಕ್ಷಣಕ್ಕಾಗಿ 16,396 ಕೋಟಿ ರೂ., ದೆಹಲಿಯ ಆರೋಗ್ಯ ಕ್ಷೇತ್ರಕ್ಕೆ 8,685 ರೂ.ಗಳನ್ನು ಮೀಸಲಿಡಲಾಗಿದೆ. ಈ ಅನುದಾನದ ಅಡಿಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ 6,215 ರೂ.ಗಳಷ್ಟು ಮೂಲ ಸೌಕರ್ಯಗಳ ಸೌಲಭ್ಯ ಸಿಗಲಿದೆ. ಅಲ್ಲದೇ ಹೊಸ ಆಸ್ಪತ್ರೆಗಳ ನಿರ್ಮಾಣಕ್ಕೆ 400 ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ ಎಂದು ವಿವರಿಸಿದರು.

Previous Post
ಮೋದಿ ಕುಟುಂಬದ ಬಗ್ಗೆ ಹೇಳಿಕೆ ನೀಡಿರುವ ಲಾಲು ವಿರುದ್ಧ ಬಿಜೆಪಿ ವಾಗ್ದಾಳಿ
Next Post
ವಿಡಿಯೋ ಕಾನ್ಫರೇನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಸಿದ್ಧ ಇಡಿ ಸಮನ್ಸ್‌ಗೆ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ

Recent News