ಧ್ಯಾನ ಮುಗಿಸಿದ ಮೋದಿ

ಧ್ಯಾನ ಮುಗಿಸಿದ ಮೋದಿ

ಕನ್ಯಾಕುಮಾರಿ, ಜೂ. 1: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಜೂನ್ 1) ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಇರುವ ವಿವೇಕಾನಂದ ರಾಕ್ ಸ್ಮಾರಕದಲ್ಲಿ ತಮ್ಮ 45 ಗಂಟೆಗಳ ಧ್ಯಾನವನ್ನು ಕೊನೆಗೊಳಿಸಿದ್ದಾರೆ. ಮೇ 30ರ ಸಂಜೆಯಿಂದ ಜೂನ್ 1ರ ಸಂಜೆವರೆಗೆ ಸುಮಾರು 45 ಗಂಟೆಗಳ ಕಾಲ ಆಧ್ಯಾತ್ಮಿಕ ಪ್ರವಾಸದಲ್ಲಿದ್ದ ನರೇಂದ್ರ ಮೋದಿ ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಅದೇ ಸ್ಥಳದಲ್ಲಿ ಹಗಲು-ರಾತ್ರಿ ಧ್ಯಾನ ಮಾಡಿದ್ದರು.
ಮೇ 30ರಂದು ಕನ್ಯಾಕುಮಾರಿ ಸಮೀಪದ ತಿರುವನಂತಪುರದಿಂದ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಪ್ರಧಾನಿ ಮೋದಿ ನಂತರ ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ದೋಣಿಯ ಮೂಲಕ ರಾಕ್ ಸ್ಮಾರಕವನ್ನು ತಲುಪಿ ಧ್ಯಾನವನ್ನು ಪ್ರಾರಂಭಿಸಿದರು. 1892ರ ಅಂತ್ಯದ ವೇಳೆಗೆ ಸಮುದ್ರದ ನಡುವಿನ ಬಂಡೆಗಳ ಮೇಲೆ ಧ್ಯಾನ ಮಾಡಿದ ಸ್ವಾಮಿ ವಿವೇಕಾನಂದರಿಗೆ ಗೌರವಾರ್ಥವಾಗಿ ನಿರ್ಮಿಸಲಾದ ಸ್ಮಾರಕವಾದ ಸ್ಮಾರಕದಲ್ಲಿ ಪ್ರಧಾನಿಯವರು ಇದೇ ಮೊದಲ ಬಾರಿಗೆ ತಂಗಿದ್ದರು

Previous Post
ಕೊನೆಗೂ ಪ್ರಜ್ವಲ್ ರೇವಣ್ಣ ಬಂಧನ; ಏಪ್ರಿಲ್ 26 ರಿಂದ ಮೇ 31ರ ವರೆಗೆ ಏನೇನಾಯ್ತು ಸಂಪೂರ್ಣ ಮಾಹಿತಿ
Next Post
ದಲಿತ ಯುವಕನನ್ನು ಅಪಹರಿಸಿ ಬೆತ್ತಲೆಗೊಳಿಸಿ ಥಳಿತ: ಬಿಜೆಪಿ ಶಾಸಕಿ ಪುತ್ರನ ವಿರುದ್ಧ FIR

Recent News