ನನ್ನ ಹೆಸರು ಅರವಿಂದ್ ಕೇಜ್ರಿವಾಲ್, ನಾನು ಭಯೋತ್ಪಾದಕನಲ್ಲ ಜೈಲು ಅಧಿಕಾರಿಗಳ ವರ್ತನೆಗೆ ಸಂಜಯ್ ಸಿಂಗ್ ಗರಂ

ನನ್ನ ಹೆಸರು ಅರವಿಂದ್ ಕೇಜ್ರಿವಾಲ್, ನಾನು ಭಯೋತ್ಪಾದಕನಲ್ಲ ಜೈಲು ಅಧಿಕಾರಿಗಳ ವರ್ತನೆಗೆ ಸಂಜಯ್ ಸಿಂಗ್ ಗರಂ

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಜನರ ಮಗ ಮತ್ತು ಸಹೋದರನಂತೆ ಕೆಲಸ ಮಾಡಿದ್ದಾರೆ’ ಎಂದು ಹೇಳಿದ ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದರು. ತಿಹಾರ್ ಜೈಲಿನಲ್ಲಿರುವ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಲು ತೆರಳಿದ್ದ ಭಗವಂತ್ ಮಾನ್ ಅವರನ್ನು ರಕ್ಷಣಾತ್ಮಕ ಗಾಜಿನ ಮೂಲಕ ಮಾತನಾಡಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, “ನನ್ನ ಹೆಸರು ಅರವಿಂದ್ ಕೇಜ್ರಿವಾಲ್; ನಾನು ಭಯೋತ್ಪಾದಕನಲ್ಲ” ಎಂದು ಸವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮೂರು ಬಾರಿ ಚುನಾಯಿತರಾಗಿರುವ ದೆಹಲಿ ಸಿಎಂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಗಾಜಿನ ಮುಖಾಂತರ ಭೇಟಿಯಾಗುವಂತೆ ಮಾಡಲಾಗಿದೆ. ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರಧಾನಿಗೆ ದ್ವೇಷದ ಭಾವನೆ ಇದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಅವರು ಆರೋಪಿಸಿದರು.

‘ಅರವಿಂದ್‌ ಕೇಜ್ರಿವಾಲ್‌ ಸ್ಥೈರ್ಯ ಕುಗ್ಗಿಸಲು 24 ಗಂಟೆಯೂ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಆರೋಪಿಸಿದ ಅವರು, “ಇವನು ಅರವಿಂದ್ ಕೇಜ್ರಿವಾಲ್, ಅವನು ಭಿನ್ನವಾದ ಮಣ್ಣಿನಿಂದ ಮಾಡಲ್ಪಟ್ಟಿದ್ದಾನೆ… ನೀವು ಅವನನ್ನು ಮುರಿಯಲು ಎಷ್ಟು ಪ್ರಯತ್ನಿಸುತ್ತೀರೋ ಅಷ್ಟು ಬಲಶಾಲಿಯಾಗಿ ಹಿಂತಿರುಗುತ್ತಾನೆ… ನಿನ್ನೆ ಸಿಎಂ ಭಗವಂತ್ ಮಾನ್ ಸಭೆಯಲ್ಲಿ ಭಾವುಕರಾದರು. ಇದು ನಮ್ಮೆಲ್ಲರಿಗೂ ಭಾವನಾತ್ಮಕ ವಿಷಯವಾಗಿದೆ. ಆದರೆ, ಇದು ಬಿಜೆಪಿ ಮತ್ತು ಪ್ರಧಾನಿ ಮೋದಿಗೆ ನಾಚಿಕೆಗೇಡಿನ ಸಂಗತಿಯಾಗಿದೆ” ಎಂದು ಹೇಳಿದರು.

Previous Post
ಯುಪಿಎಸ್‌ಸಿ ಫಲಿತಾಂಶ ಪ್ರಕಟ ಐಪಿಎಸ್ ಅಧಿಕಾರಿ ಆದಿತ್ಯ ಶ್ರೀವಾಸ್ತವ್‌‌ಗೆ ಮೊದಲ ಸ್ಥಾನ
Next Post
ಸಾರ್ವಜನಿಕ ಕ್ಷಮೆಯಾಚನೆಗೆ ಸಿದ್ದ ಸುಪ್ರೀಂಕೋರ್ಟ್‌ನಲ್ಲಿ ಬಾಬಾ ರಾಮ್‌ದೇವ್, ಬಾಲಕೃಷ್ಣ ಹೇಳಿಕೆ

Recent News