No extensive flight bookings after November 11 - what's the reason!?

ನವೆಂಬರ್ 11 ರ ಬಳಿಕ ವಿಸ್ತಾರ ಫ್ಲೈಟ್ ಬುಕ್ಕಿಂಗ್ ಇಲ್ಲ

ನವದೆಹಲಿ : ವಿಸ್ತಾರಾ ಮತ್ತು ಏರ್ ಇಂಡಿಯಾ ನಡುವಿನ ಬಹು ನಿರೀಕ್ಷಿತ ವಿಲೀನವು ನವೆಂಬರ್ 12 ರ ವೇಳೆಗೆ ಅಂತಿಮಗೊಳ್ಳುವ ನಿರೀಕ್ಷೆಯಿದೆ. ಸಿಂಗಾಪುರ್ ಏರ್‌ಲೈನ್ಸ್ ವಿದೇಶಿ ನೇರ ಹೂಡಿಕೆಗೆ ಭಾರತ ಸರ್ಕಾರದಿಂದ ಅನುಮೋದನೆ ಪಡೆದ ಬೆನ್ನಲೆ ಈ ಮಹತ್ವದ ಬೆಳವಣಿಗೆ ನಡೆಯುತ್ತಿದೆ.

ಎಲ್ಲ ವಿಸ್ತಾರಾ ವಿಮಾನಗಳು ಏರ್ ಇಂಡಿಯಾ ಬ್ರ್ಯಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಹಿನ್ನಲೆ ನವೆಂಬರ್ 12 ನಂತರ ಪ್ರಯಾಣಕ್ಕಾಗಿ ವಿಸ್ತಾರಾ ಫ್ಲೈಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಈ ಮಾರ್ಗಗಳ ಬುಕಿಂಗ್ ಅನ್ನು ಏರ್ ಇಂಡಿಯಾದ ವೆಬ್‌ಸೈಟ್‌ಗೆ ಮರುನಿರ್ದೇಶಿಸಲಾಗುತ್ತದೆ. ನವೆಂಬರ್ 11 ರವರೆಗೆ ವಿಸ್ತಾರ ಸಾಮಾನ್ಯ ವಿಮಾನ ಕಾರ್ಯಾಚರಣೆಗಳನ್ನು ಮುಂದುವರಿಸುತ್ತದೆ.

ಈ ಪರಿವರ್ತನೆಯ ಸಮಯದಲ್ಲಿ ಗ್ರಾಹಕರಿಗೆ ಸುಗಮ ಸಂವಹನ ಮತ್ತು ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಎರಡೂ ಏರ್‌ಲೈನ್‌ಗಳು ಬದ್ಧವಾಗಿವೆ ಎಂದು ವಿಸ್ತಾರಾ ಸಿಇಒ ವಿನೋದ್ ಕಣ್ಣನ್ ಹೇಳಿದ್ದಾರೆ. ಪರಿವರ್ತನೆಯು ಸುಗಮವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ನಮ್ಮ ಗ್ರಾಹಕರು ಸೇವೆಯಲ್ಲಿ ಯಾವುದೇ ಅಡಚಣೆಯನ್ನು ಅನುಭವಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಮ್ಮ ತಂಡಗಳು ನಿಕಟವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಇದೇ ವೇಳೆ ತಿಳಿಸಿದರು.

ನವೆಂಬರ್ 2022 ರಲ್ಲಿ ಮೊದಲ ಬಾರಿಗೆ ಘೋಷಿಸಲಾದ ವಿಲೀನವು ವಿಶ್ವದ ಅತಿದೊಡ್ಡ ವಿಮಾನಯಾನ ಗುಂಪುಗಳಲ್ಲಿ ಏರ್ ಇಂಡಿಯಾವನ್ನು ಒಂದು ಮಾಡಲಿದೆ‌. ಹೆಚ್ಚು ವ್ಯಾಪಕವಾದ ನೆಟ್‌ವರ್ಕ್ ಮತ್ತು ವರ್ಧಿತ ಸೇವಾ ಕೊಡುಗೆಗಳನ್ನು ನೀಡುವ ಕಾರ್ಯತಂತ್ರದ ಕ್ರಮವಾಗಿ ಈ ವೀಲಿನ ಮಾಡಲಾಗಿದೆ. ಭಾರತ ಸರ್ಕಾರದ ಅನುಮತಿಯೊಂದಿಗೆ ಸಿಂಗಾಪುರ್ ಏರ್‌ಲೈನ್ಸ್ ಹೊಸದಾಗಿ ವಿಸ್ತರಿಸಿದ ಏರ್ ಇಂಡಿಯಾದಲ್ಲಿ 25.1 ಶೇಕಡಾ ಪಾಲನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಪ್ರಸ್ತುತ ಟಾಟಾ ಗ್ರೂಪ್‌ನ ವಿಸ್ತಾರ ಮತ್ತು ಸಿಂಗಾಪುರ್ ಏರ್‌ಲೈನ್ಸ್ ನಡುವಿನ 51:49 ಜಂಟಿ ಉದ್ಯಮವಾಗಿದೆ. ಏರ್ ಇಂಡಿಯಾದಲ್ಲಿ ಸಿಂಗಾಪೂರ್ ಏರ್‌ಲೈನ್ಸ್ ಹೂಡಿಕೆ ಏರ್ ಇಂಡಿಯಾವನ್ನು ದೇಶಿಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಆಟಗಾರನ್ನಾಗಿ ಬದಲಾಯಿಸಲಿದೆ.

Previous Post
LGBTQ ಸಮುದಾಯಕ್ಕೆ ಜಂಟಿ ಬ್ಯಾಂಕ್ ಖಾತೆ ತೆರೆಯಲು ಅನುಮತಿ
Next Post
ಸೋಶಿಯಲ್ ಮೀಡಿಯಾ ಇನ್ಫುಲೇನ್ಸರ್ ರಜತ್ ದಲಾಲ್ ವಿರುದ್ಧ ವ್ಯಾಪಕ‌ ಆಕ್ರೋಶ

Recent News