ನಾಳೆ ರಾಜ್ಯಕ್ಕೆ ಮಾನ್ಸೂನ್​: 4 ಜಿಲ್ಲೆಗಳಿಗೆ ಆರೆಂಜ್​ ಎಚ್ಚರಿಕೆ

ನಾಳೆ ರಾಜ್ಯಕ್ಕೆ ಮಾನ್ಸೂನ್​: 4 ಜಿಲ್ಲೆಗಳಿಗೆ ಆರೆಂಜ್​ ಎಚ್ಚರಿಕೆ

ಬೆಂಗಳೂರು: ವಾಡಿಕೆಗಿಂತ ಮುನ್ನ ಕೇರಳಕ್ಕೆ ಪ್ರವೇಶಿಸಿರುವ ನೈಋತ್ಯ ಮಾನ್ಸೂನ್​ ಭಾನುವಾರ ರಾಜ್ಯದ ಕರಾವಳಿ ಭಾಗಕ್ಕೆ ಆಗಮಿಸಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಎರಡು ದಿನದ ಹಿಂದೆ ಕೇರಳಕ್ಕೆ ಪ್ರವೇಶಿಸಿದ್ದ ಮಾನ್ಸೂನ್​ ತುಸು ದುರ್ಬಲವಾಗಿತ್ತು.ಇದೀಗ ಮಾನ್ಸೂನ್​ ಪ್ರವೇಶಿಸಲು ಪೂರಕ ವಾತಾವರಣ ನಿರ್ಮಾಣವಾಗಿದೆ.ಜೂ 2ರಂದು ರಾಜ್ಯದ ಕರಾವಳಿ ಭಾಗಕ್ಕೆ ಮಾರುತುಗಳು ಆಗಮಿಸಲಿದೆ. ಈ ಕುರಿತು ಸೋಮವಾರ ಅಧಿಕೃತವಾಗಿ ಘೋಷಿಸಲಿದ್ದೇವೆ. ಕರಾವಳಿ,ಮಲೆನಾಡು ಸೇರಿ ರಾಜ್ಯಾದಂತ ಈಗಾಗಲೇ ಉತ್ತಮ ವರ್ಷಧಾರೆಯಾಗುತ್ತಿದೆ.ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆ ಬೀಳಲಿದೆ ಎಂದು ಇಲಾಖೆ ನಿರ್ದೇಶಕ ಸಿ.ಎಸ್​.ಪಾಟೀಲ್​ ಹೇಳಿದ್ದಾರೆ.ರಾಜ್ಯದಲ್ಲಿ ಶನಿವಾರದಿಂದ ಮಳೆ ಚುರುಕಾಗಿದೆ.ಬೆಂಗಳೂರು, ಹಾಸನ, ಕೊಡಗು, ಚಿಕ್ಕಮಗಳೂರು ಸೇರಿ ರಾಜ್ಯದ ವಿವಿಧೆಡೆ ಧಾರಾಕಾರವಾಗಿ ಮಳೆ ಸುರಿದಿದೆ. ಮೈಸೂರು, ಮಂಡ್ಯ, ಕೊಡಗು, ಹಾಸನದಲ್ಲಿ ಜೂ 2ರಂದು ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್​ಅರ್ಲಟ್​ ಘೋಷಿಸಿದೆ. ಜೂ 3ರಂದು ಮೇಲಿನ ಜಿಲ್ಲೆಗಳಲ್ಲಿ ಯೆಲ್ಲೋ ಅರ್ಲಟ್​ ಇರಲಿದೆ. ಬೆಂಗಳೂರು, ಬೆಂ.ಗ್ರಾಮಾಂತರ, ಚಾಮರಾಜನಗರ, ತುಮಕೂರುನಲ್ಲಿ ಮುಂದಿನ ಎರಡು ದಿನ ಹಾಗೂ ಶಿವಮೊಗ್ಗ, ಕೋಲಾರ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ರಾಯಚೂರು, ಕೊಪ್ಪಳ, ಹಾವೇರಿ, ಗದಗ, ಉಡುಪಿ, ದಣ ಕನ್ನಡ, ಉತ್ತರ ಕನ್ನಡದಲ್ಲಿ ಜೂ 3 ರಂದು ಯೆಲ್ಲೋ ಅರ್ಲಟ್​ ಇರಲಿದೆ.

Previous Post
ಚೆನ್ನೈ-ಮುಂಬೈ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ; ತುರ್ತು ಲ್ಯಾಂಡಿಂಗ್
Next Post
ಉತ್ತರ ಭಾರತದಲ್ಲಿ ಕಡಿಮೆಯಾಗಲಿದೆ ಬಿಸಿಲು: ಐಎಂಡಿ

Recent News