ನೀಟ್‌ ಪರೀಕ್ಷೆ ಹಿಂದಿನ ದಿನ ಪ್ರಶ್ನೆಪತ್ರಿಕೆ ಪಡೆದುಕೊಂಡಿದ್ದೆ ಬಂಧಿತ ವಿದ್ಯಾರ್ಥಿಯಿಂದ ಪೊಲೀಸರ ಮುಂದೆ ತಪ್ಪೊಪ್ಪಿಗೆ

ನೀಟ್‌ ಪರೀಕ್ಷೆ ಹಿಂದಿನ ದಿನ ಪ್ರಶ್ನೆಪತ್ರಿಕೆ ಪಡೆದುಕೊಂಡಿದ್ದೆ ಬಂಧಿತ ವಿದ್ಯಾರ್ಥಿಯಿಂದ ಪೊಲೀಸರ ಮುಂದೆ ತಪ್ಪೊಪ್ಪಿಗೆ

ಪಾಟ್ನಾ: ನೀಟ್‌ ಪರೀಕ್ಷೆ ಹಿಂದಿನ ದಿನ ಪ್ರಶ್ನೆಪತ್ರಿಕೆ ಪಡೆದುಕೊಂಡಿದ್ದೆ ಎಂದು ಬಂಧಿತ ವಿದ್ಯಾರ್ಥಿಯೊಬ್ಬ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಬಿಹಾರದಿಂದ ಬಂಧಿಸಲ್ಪಟ್ಟ ನಾಲ್ವರಲ್ಲಿ ಅನುರಾಗ್ ಯಾದವ್, ಸಿಕಂದರ್ ಯಾದವೆಂದು ಇಬ್ಬರೂ ದಾನಪುರ ಪುರಸಭೆಯ ಜೂನಿಯರ್ ಇಂಜಿನಿಯರ್ ಕಾಲೇಜಿನವರು. ನಿತೀಶ್ ಕುಮಾರ್ ಮತ್ತು ಅಮಿತ್ ಆನಂದ್ ಇವರನ್ನು ಕೂಡ ಬಂಧಿಸಲಾಗಿದೆ.

ಪರೀಕ್ಷೆಯ ಹಿಂದಿನ ದಿನ ಪ್ರಶ್ನೆ ಪತ್ರಿಕೆಯನ್ನು ಸ್ವೀಕರಿಸಿದ್ದೆವು. ಬಿಹಾರ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಮರುದಿನ ಪರೀಕ್ಷೆಯಲ್ಲಿ ನಿಖರವಾದ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನನ್ನನ್ನು ರಾತ್ರಿಯಲ್ಲಿ ಓದಲು ಮತ್ತು ನೆನಪಿಟ್ಟುಕೊಳ್ಳಲು ಹೇಳಲಾಯಿತು. ನಾನು ಪರೀಕ್ಷೆಗೆ ಹೋದಾಗ, ನಾನು ಸರಿಯಾಗಿ ಕಂಠಪಾಠ ಮಾಡಿದ ಪ್ರಶ್ನೆಗಳಿಗಷ್ಟೇ ಉತ್ತರಿಸಿದ್ದೆ. ಪರೀಕ್ಷೆಯ ನಂತರ ಪೊಲೀಸರು ಬಂದು ನನ್ನನ್ನು ಬಂಧಿಸಿದರು. ನಾನು ನನ್ನ ಅಪರಾಧವನ್ನು ಒಪ್ಪಿಕೊಂಡೆ ತಪ್ಪೊಪ್ಪಿಕೊಂಡೆ ಎಂದು ಅನುರಾಗ್ ಯಾದವ್ ತಿಳಿಸಿದ್ದಾರೆ.

ಇತರ ಇಬ್ಬರು ಆರೋಪಿಗಳಾದ ನಿತೀಶ್ ಕುಮಾರ್ ಮತ್ತು ಅಮಿತ್ ಆನಂದ್ ಅವರು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಬಹುದು. ನೀಟ್ ತೇರ್ಗಡೆಯಾಗಲು ಪ್ರತಿಯೊಬ್ಬ ಆಕಾಂಕ್ಷಿಗೆ 30-32 ಲಕ್ಷ ರೂ. ವೆಚ್ಚವಾಗುತ್ತದೆ ಅಂತಾ ಹೇಳಿದ್ದರು ಎಂದು ಯಾದವೆಂದು ಹೇಳಿದ್ದಾರೆ. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಅಕ್ರಮಗಳ ಜ್ವಲಂತ ಸಮಸ್ಯೆ ಹೊಸ ತಿರುವು ಪಡೆದುಕೊಂಡಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಹಿಂದಿನ ದಿನ ಸೋರಿಕೆಯಾಗಿದೆ ಎಂಬುದನ್ನು ಬಂಧಿತ ವಿದ್ಯಾರ್ಥಿಗಳು ಒಪ್ಪಿಕೊಂಡಿದ್ದಾರೆ.

Previous Post
ನೊಯ್ಡಾದಲ್ಲಿ ಪೇಚಿಗೆ ಸಿಲುಕಿದ ಕರ್ನಾಟಕ ಪೊಲೀಸ್ ಯೂಟ್ಯೂಬರ್ ಅಜಿತ್ ಭಾರ್ತಿ ಬಂಧಿಸಲು ತೆರಳಿದ ವೇಳೆ ಹೈಡ್ರಾಮಾ!
Next Post
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಬಿಗ್ ರಿಲೀಫ್ ಅಬಕಾರಿ ಪ್ರಕರಣದಲ್ಲಿ ಜಾಮೀನು ಮಂಜೂರು ಇಂದು ತಿಹಾರ್ ಜೈಲಿನಿಂದ ಬಿಡುಗಡೆ ಸಾಧ್ಯತೆ

Recent News