ನೇಪಾಳದ ಪ್ರಧಾನಿಯಾಗಿ ಓಲಿ ನೇಮಕ: ನಾಳೆ ಪ್ರಮಾಣವಚನ

ನೇಪಾಳದ ಪ್ರಧಾನಿಯಾಗಿ ಓಲಿ ನೇಮಕ: ನಾಳೆ ಪ್ರಮಾಣವಚನ

ನೇಪಾಳ: ಸಿಪಿಎನ್-ಯುಎಂಎಲ್ ಅಧ್ಯಕ್ಷ ಕೆಪಿ ಶರ್ಮಾ ಓಲಿ (KP Sharma Oli) ಅವರನ್ನು ಮುಂದಿನ ಪ್ರಧಾನಿಯಾಗಿ ನೇಪಾಳ (Nepal) ರಾಷ್ಟ್ರಪತಿ ನೇಮಿಸಿದ್ದಾರೆ. ಈ ಬಗ್ಗೆ ರಾಷ್ಟ್ರಪತಿಯ ಕಚೇರಿ ಅಧಿಕೃತ ಮಾಹಿತಿ ನೀಡಿದೆ. ಪ್ರಧಾನಿ ಹುದ್ದೆಗೆ ಹಕ್ಕು ಚಲಾಯಿಸಲು ಗಡುವು ಮುಕ್ತಾಯಗೊಂಡಿದ್ದು, ನೇಪಾಳ ರಾಷ್ಟ್ರಪತಿ ರಾಮಚಂದ್ರ ಪೌಡೆಲ್ ಅವರು ಕೆಪಿ ಶರ್ಮಾ ಓಲಿ (72) ಅವರನ್ನು ಮುಂದಿನ ಪ್ರಧಾನಿಯಾಗಿ ನೇಮಿಸಿದ್ದಾರೆ. ಓಲಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ಅವರು ಯುಎಂಎಲ್ ಮುಖ್ಯಸ್ಥರನ್ನು ಹೊಸ ಪ್ರಧಾನ ಮಂತ್ರಿಯಾಗಿ ನೇಮಿಸಲು ರಾಷ್ಟ್ರಪತಿಗಳಿಗೆ ಸಲ್ಲಿಸಿದ ಅರ್ಜಿಗೆ ಜಂಟಿಯಾಗಿ ಸಹಿ ಹಾಕಿದರು. ನಾಳೆ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಓಲಿ ಅವರೊಂದಿಗೆ ಸಚಿವ ಸಂಪುಟ ರಚನೆಯು ಆಗಲಿದೆ. ಇದಕ್ಕಾಗಿ ಪಕ್ಷಗಳು ಚರ್ಚೆಗಳನ್ನು ನಡೆಸುತ್ತಿವೆ.

Previous Post
46 ವರ್ಷಗಳ ಬಳಿಕ ತೆರೆದ ಜಗನ್ನಾಥ ದೇವಾಲಯದ ರತ್ನ ಭಂಡಾರ
Next Post
ಕೆನಡಾದಲ್ಲಿ ಭೀಕರ ಕಾಡ್ಗಿಚ್ಚು: 9,000 ಮಂದಿ ಸ್ಥಳಾಂತರ

Recent News