ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ : ಕೇಂದ್ರ ಸಚಿವ ವಿ ಸೋಮಣ್ಣ

ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ : ಕೇಂದ್ರ ಸಚಿವ ವಿ ಸೋಮಣ್ಣ

ನವದೆಹಲಿ : ಮೂಡಾ ಭ್ರಷ್ಟಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಪ್ರತಿಭಟನೆ ಮಾಡುವುದರಲ್ಲಿ ಅರ್ಥ ಇದೆ ಆದರೆ ಕಾಂಗ್ರೆಸ್ ನವರೇ ಪ್ರತಿಭಟನೆ ಮಾಡ್ತಾ ಇದ್ದಾರೆ, ಅವರೇ ತಪ್ಪು ಮಾಡಿ ಅವರೇ ಪ್ರತಿಭಟನೆ ಮಾಡೋದು ಖಂಡನೀಯ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯಖಾತೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ರಾಜ್ಯದ ಮುಖ್ಯಸ್ಥರು, ನಮ್ಮ ರಾಜ್ಯಪಾಲರದ್ದು ತೆರೆದ ಪುಸ್ತಕ ದಂತೆ ಕೆಲಸ ಮಾಡಿದವರು, ತನಿಖೆ ಆದೇಶ ಮಾಡಿದ್ದೇ ತಪ್ಪು ಎನ್ನುವಂತಿಲ್ಲ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದ ಅಂದಿನ ರಾಜ್ಯಪಾಲರು ಒಂದು ಗಂಟೆಯಲ್ಲಿ ಅನುಮತಿ ಕೊಟ್ಟಿದ್ದರು

ನೈತಿಕತೆ ಬಹಳ ದೊಡ್ಡದು, ಅಧಿಕಾರ ಮುಖ್ಯವಲ್ಲ. ಆಡಳಿತ ನಡೆಸುವುವರು ರಾಜ್ಯಪಾಲರ ವಿರುದ್ದ ರಸ್ತೆಗೆ ಬಂದು ಪ್ರತಿಭಟನೆ ಮಾಡೋದು ಸರಿ ಅಲ್ಲ, ಸಿದ್ದರಾಮಯ್ಯ ಅವರನ್ನು ನಾನು ರಾಜೀನಾಮೆ ಕೋಡಿ ಅನ್ನಲ್ಲ ಆದರೆ ಕಾನೂನು ಬದ್ದವಾಗಿ ಹೋರಾಟ ಮಾಡಿ, ನೈತಿಕತೆ ಇದ್ದರೆ ರಾಜೀನಾಮೆ ಕೊಡಿ, ಕೋರ್ಟ್‌ಗೆ ಹೋಗಿ,ಅಲ್ಲಿ ತೀರ್ಮಾನ ಆದ ಬಳಿಕ ಅವರೇ ಸಿಎಂ ಆಗಲಿ ಎಂದು ಹೇಳಿದರು.

ಪ್ರತಿಭಟನೆ ಹೆಸರಿನಲ್ಲಿ ಕಾಂಗ್ರೆಸ್ ನವರೂ ನಡೆದುಕೊಳ್ಳುವ ರೀತಿ ಅಸಹ್ಯ ವಾಗಿದೆ. ನಿಮ್ಮ ವರ್ತನೆಯಿಂದಲೇ ನೀವು ತಪ್ಪು ಮಾಡಿದ್ದಿರಾ ಅನ್ನೋದು ಗೊತ್ತಾಗುತ್ತದೆ, ಪ್ರತಿಭಟನೆ ಬಿಡಿ,ಕಾನೂನು ಹೋರಾಟಿ ಮಾಡಿ. ಸಾಧ್ಯವಾದರೆ ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಗೊತ್ತು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

Previous Post
ಮಕ್ಕಳ ಜೊತೆಗೆ ಮೋದಿ ರಕ್ಷಾ ಬಂಧನ ಆಚರಣೆ
Next Post
ಭಾರತ ಪೌರತ್ವ ಪಡೆದ ಪಾಕಿಸ್ತಾನಿ ಮಹಿಳೆಯರೊಂದಿಗೆ ರಕ್ಷಾ ಬಂಧನ ಆಚರಿಸಿದ ಸಚಿವ ಪಿಯೂಷ್ ಗೋಯಲ್

Recent News