ನೊಯ್ಡಾದಲ್ಲಿ ಪೇಚಿಗೆ ಸಿಲುಕಿದ ಕರ್ನಾಟಕ ಪೊಲೀಸ್ ಯೂಟ್ಯೂಬರ್ ಅಜಿತ್ ಭಾರ್ತಿ ಬಂಧಿಸಲು ತೆರಳಿದ ವೇಳೆ ಹೈಡ್ರಾಮಾ!

ನೊಯ್ಡಾದಲ್ಲಿ ಪೇಚಿಗೆ ಸಿಲುಕಿದ ಕರ್ನಾಟಕ ಪೊಲೀಸ್ ಯೂಟ್ಯೂಬರ್ ಅಜಿತ್ ಭಾರ್ತಿ ಬಂಧಿಸಲು ತೆರಳಿದ ವೇಳೆ ಹೈಡ್ರಾಮಾ!

ನೊಯ್ಡಾ : ಆರೋಪಿಯೊಬ್ಬರನ್ನು ಬಂಧಿಸಲು ಉತ್ತರ ಪ್ರದೇಶದ ನೊಯ್ಡಾಗೆ ತೆರಳಿದ್ದ ಕರ್ನಾಟಕ ಪೊಲೀಸರು ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ. ಆರೋಪಿ ಯೂಟ್ಯೂಬರ್ ಅಜಿತ್ ಭಾರ್ತಿ ಮನೆ ಮುಂದೆ ಕಾದ ಕರ್ನಾಟಕದ ಪೊಲೀಸರು ನೊಯ್ಡಾ ಪೊಲೀಸರ ಮಧ್ಯಪ್ರವೇಶದ ಬಳಿಕ ಖಾಲಿ ಕೈಯಲ್ಲಿ ವಾಪಸ್ ಆಗಿದ್ದಾರೆ‌.

ರಾಮಮಂದಿರದ ಜಾಗದಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಮರಳಿ ತರುವುದು ರಾಹುಲ್ ಗಾಂಧಿಯವರ ಭವಿಷ್ಯದ ಯೋಜನೆ ಎಂದು ಅಜಿತ್ ಭಾರ್ತಿ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದರು. ಅಪ್ಲೋಡ್ ಮಾಡಿದ ವಿಡಿಯೋ ತುಣಕನ್ನು ಪ್ಯಾಕ್ಟ್ ಚೆಕರ್ ಮೊಹಮದ್ ಜುಬೇರ್ ಪೊಸ್ಟ್ ಮಾಡಿ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ವಿಡಿಯೋ ವಿರುದ್ಧ ಕರ್ನಾಟಕದ ಕಾಂಗ್ರೆಸ್ ಕಾನೂನು ಘಟಕದ ಕಾರ್ಯದರ್ಶಿಯಾಗಿರುವ ಬಿ.ಕೆ ಬೋಪಣ್ಣ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಅನ್ವಯ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ಅಜಿತ್ ಭಾರ್ತಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ ಮತ್ತು 505 (2) ಅಡಿಯಲ್ಲಿ ಪ್ರಕರಣ ದಾಖಲಿಸಲಿಸಿ ಬಂಧನಕ್ಕೆ ಮೂವರು ಅಧಿಕಾರಿಗಳನ್ನು ಬಂಧನಕ್ಕಾಗಿ ನೊಯ್ಡಾಕ್ಕೆ ಕಳುಹಿಸಲಾಗಿತ್ತು. ಅಜಿತ್ ಭಾರ್ತಿ ನಿವಾಸಕ್ಕೆ ತೆರಳಿದ್ದ ಪೊಲೀಸರು ನೋಟಿಸ್ ನೀಡಲು ಆಗಮಿಸಿದ್ದೇವೆ ಎಂದು ಹೇಳಿದ್ದಾರೆ.

ಪೊಲೀಸರನ್ನು ಮನೆಯೊಳಗೆ ಸೇರಿಸದ ಅಜಿತ್ ಭಾರ್ತಿ ಸ್ಥಳಿಯ ಠಾಣೆಗೆ ಮಾಹಿತಿ ನೀಡಿದೆ ಅಕ್ರಮವಾಗಿ ಬಂಧಿಸಲು ಕರ್ನಾಟಕ ಪೊಲೀಸ್ ಆಗಮಿಸಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ. ಈ ಟ್ವಿಟ್ ಗೆ ಸಿಎಂ ಯೋಗಿ ಆದಿತ್ಯನಾಥ್ ಸೇರಿ ಹಲವರನ್ನು ಟ್ಯಾಗ್ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ನೊಯ್ಡಾ ಪೊಲೀಸರು ಕರ್ನಾಟಕ ಪೊಲೀಸರನ್ನು ವಿಚಾರಣೆ ನಡೆಸಿದ್ದಾರೆ. ಮಾಹಿತಿ ನೀಡದೆ ಬಂಧಿಸಲು ಆಗಮಿಸಿದ ಹಿನ್ನಲೆ ಬಂಧನಕ್ಕೆ ಅನುಮತಿ ನೀಡದೆ ವಾಪಾಸ್ ಕಳುಹಿಸಿದ್ದಾರೆ.

ಬಳಿಕ ಈ ಬಗ್ಗೆ ಮಾತನಾಡಿದ ಅಜಿತ್ ಭಾರ್ತಿ, ಗ್ಯಾರಂಟಿ ಯೋಜನೆ ನೀಡಲು ಕರ್ನಾಟಕ ಸರ್ಕಾರದ ಬಳಿ ಹಣವಿಲ್ಲ ಆದರೆ ನನ್ನನ್ನು ಬಂಧಿಸಲು ನೊಯ್ಡಾವರೆಗೂ ಬಂದಿದ್ದಾರೆ ಇದೊಂದು ಸಣ್ಣ ಪ್ರಕರಣ ಆದರೆ ಬೆದರಿಸುವ ಮೂಲಕ ಮಾಧ್ಯಮವನ್ನು ನಿಯಂತ್ರಿಸುವ ಪ್ರಯತ್ನ ಮಾಡಲಾಗುತ್ತಿದೆ ಮಧ್ಯಪ್ರವೇಶದ ಮಾಡಿದ ನೊಯ್ಡಾ ಪೊಲೀಸ್ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಎಂದು ಹೇಳಿದ್ದಾರೆ.

Previous Post
ಬಿಹಾರ ಸರ್ಕಾರಕ್ಕೆ ಹಿನ್ನಡೆ ಹೊಸ ಮೀಸಲಾತಿ ತಿದ್ದುಪಡಿ ಕಾಯಿದೆ ರದ್ದುಪಡಿಸಿದ ಪಾಟ್ನಾ ಹೈಕೋರ್ಟ್
Next Post
ನೀಟ್‌ ಪರೀಕ್ಷೆ ಹಿಂದಿನ ದಿನ ಪ್ರಶ್ನೆಪತ್ರಿಕೆ ಪಡೆದುಕೊಂಡಿದ್ದೆ ಬಂಧಿತ ವಿದ್ಯಾರ್ಥಿಯಿಂದ ಪೊಲೀಸರ ಮುಂದೆ ತಪ್ಪೊಪ್ಪಿಗೆ

Recent News